Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದ್ವಾರಕಾದಲ್ಲಿ ದೆಹಲಿ ಪೊಲೀಸ್ ಕಾರ್ಯಾಚರಣೆ: 71 ಅಕ್ರಮ ವಿದೇಶಿಗಳನ್ನು ಬಂಧಿಸಿ ಗಡೀಪಾರು

Spread the love

ನವದೆಹಲಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶೀಯರು, ಮ್ಯಾನ್ಮಾರ್‌ನ ರೋಹಿಂಗ್ಯಾಗಳು, ನೈಜೀರಿಯನ್ನರು ಸೇರಿದಂತೆ 71 ವಿದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಗಡೀಪಾರು ಮಾಡಿದ್ದಾರೆ

ದ್ವಾರಕಾದ ವಿವಿಧ ಠಾಣೆಗಳ ಪೊಲೀಸರು ಬಾಂಗ್ಲಾದೇಶದ 47 ಮಂದಿ, 17 ರೋಹಿಂಗ್ಯಾಗಳು ಹಾಗೂ ನೈಜೀರಿಯದ 7 ಮಂದಿಯನ್ನು ಬಂಧಿಸಿ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಾಜರುಪಡಿಸಿದರು.

ಉತ್ತಮ ನಗರ, ಚಾವ್ಲಾದ ವಿವಿಧ ಘಟಕಗಳು ಹಾಗೂ ಪೊಲೀಸ್‌ ಠಾಣೆಗಳ ಸಂಘಟಿತ ಕಾರ್ಯಾಚರಣೆ ಮೂಲಕ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರನ್ನು ಪತ್ತೆ ಮಾಡಲಾಯಿತು. ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿರುವ, ವೀಸಾ ಇಲ್ಲದೆ ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಮಾಡಲು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *