Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ಟಾರ್‌ಬಕ್ಸ್ ಕಾಫಿ ಕ್ಯಾನ್ ಒಳಗೆ ಸತ್ತ ಇಲಿ ಪತ್ತೆ?: ವೈರಲ್ ವಿಡಿಯೋದಿಂದ ಗ್ರಾಹಕರಲ್ಲಿ ಭೀತಿ!

Spread the love

ಬೆಂಗಳೂರು: ಪ್ರಸಿದ್ಧ ಸ್ಟಾರ್‌ಬಕ್ಸ್ ಸಂಸ್ಥೆಯ ‘ಡಬಲ್ ಶಾಟ್ ಎನರ್ಜಿ ಡ್ರಿಂಕ್’ ಕ್ಯಾನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Viral Video) ಭಾರಿ ಸಂಚಲನ ಮೂಡಿಸಿದೆ. ಮೊದಲು ರೆಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ, ಈಗ ಎಕ್ಸ್ (ಟ್ವಿಟರ್) ಸೇರಿದಂತೆ ಹಲವು ಕಡೆ ವೈರಲ್‌ ಆಗಿದ್ದು, ಆಹಾರ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ.ಏನಿದೆ ವೈರಲ್‌ ವಿಡಿಯೋದಲ್ಲಿ?
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ತಾವು ಖರೀದಿಸಿದ ಕಾಫಿ ಕ್ಯಾನ್ ಒಳಗೆ ಏನೋ ವಿಚಿತ್ರವಾದ ವಸ್ತುವಿದೆ ಎಂದು ಅನುಮಾನ ಬರುತ್ತದೆ. ಕುತೂಹಲದಿಂದ ಅವರು ಆ ಕ್ಯಾನ್ ಅನ್ನು ಕಟ್‌ ಮಾಡುತ್ತಾರೆ, ಅದರೊಳಗಿಂದ ಕಾಫಿ ಬಣ್ಣದ ದ್ರವದ ಜೊತೆಗೆ ಕಪ್ಪು ಬಣ್ಣದ ಸಣ್ಣ ವಸ್ತುವೊಂದು ಹೊರಬರುತ್ತದೆ. ಅದು ಸತ್ತ ಇಲಿಯಂತೆ ಕಂಡುಬಂದಿದ್ದು, ಇದನ್ನು ನೋಡಿದ ಕೂಡಲೇ ಅಲ್ಲಿದ್ದವರು ವಾಕರಿಕೆ ಬಂದಂತೆ ಕಿರುಚುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಈ ದೃಶ್ಯವನ್ನು ಕಂಡ ಸಾವಿರಾರು ನೆಟ್ಟಿಗರು ಅಸಹ್ಯ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಇಂತಹ ಪ್ಯಾಕ್ ಮಾಡಿದ ಪಾನೀಯಗಳನ್ನು ಕುಡಿಯಲು ಭಯವಾಗುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಮಾಡಿದ ಮಹಿಳೆ ಮೇಲೆ ಅನುಮಾನ
ಒಂದೆಡೆ ಈ ವಿಡಿಯೋ ಭಾರಿ ಚರ್ಚೆ ಹುಟ್ಟುಹಾಕಿದ್ದರೆ, ಮತ್ತೊಂದೆಡೆ ಇದು ಸುಳ್ಳು ಇರಬಹುದು ಎಂಬ ಅನುಮಾನಗಳೂ ಕೇಳಿಬರುತ್ತಿವೆ. ಹಲವು ವಾರಗಳ ಕಾಲ ಮುಚ್ಚಿದ ಕ್ಯಾನ್‌ನಲ್ಲಿ ಇಲಿ ಇದ್ದಿದ್ದರೆ ಅದು ಕೊಳೆತು ಹೋಗಿರಬೇಕಿತ್ತು, ಆದರೆ ವಿಡಿಯೋದಲ್ಲಿ ಅದು ಹಾಗೆ ಕಾಣಿಸುತ್ತಿಲ್ಲ ಎಂದು ಕೆಲವರು ವಾದಿಸಿದ್ದಾರೆ. ಅಲ್ಲದೆ, ವಿಡಿಯೋ ಮಾಡುವ ಉದ್ದೇಶಕ್ಕಾಗಿಯೇ ಯಾರಾದರೂ ಇಲಿಯನ್ನು ಒಳಗೆ ಹಾಕಿರಬಹುದು ಎಂಬ ಸಂಶಯವನ್ನೂ ವ್ಯಕ್ತಪಡಿಸಲಾಗಿದೆ.
ಸಾಮಾನ್ಯವಾಗಿ ದೊಡ್ಡ ಕಂಪನಿಗಳಲ್ಲಿ ಪಾನೀಯಗಳನ್ನು ತಯಾರಿಸುವಾಗ ಮತ್ತು ಕ್ಯಾನ್‌ಗಳಿಗೆ ತುಂಬಿಸುವಾಗ ಅತ್ಯಂತ ಕಠಿಣವಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಗಾಳಿಯಾಡದಂತೆ ಸೀಲ್ ಮಾಡುವ ಮೊದಲು ಯಂತ್ರಗಳ ಮೂಲಕವೇ ತಪಾಸಣೆ ನಡೆಯುವುದರಿಂದ ಇಂತಹ ಘಟನೆಗಳು ನಡೆಯುವುದು ಬಹಳ ಅಪರೂಪ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯು ಕಾನೂನು ಹೋರಾಟ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಕಂಪನಿಯಿಂದಾಗಲಿ ಅಥವಾ ಯಾವುದೇ ಅಧಿಕೃತ ಸಂಸ್ಥೆಯಿಂದಾಗಲಿ ಈವರೆಗೆ ಯಾವುದೇ ಸ್ಪಷ್ಟನೆ ಅಥವಾ ದೂರು ದಾಖಲಾದ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಜನರ ನಂಬಿಕೆ ಮತ್ತು ಆಹಾರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನಂತೂ ಶುರುಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *