Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕರಾಳ ಮುಖ: ‘ಬ್ರೇಕ್’ ನೆಪದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ

Spread the love

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ಜ್ಯೂನಿಯರ್ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದು, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಲೇಜಿನ ಶೌಚಾಲಯಕ್ಕೆ ವಿದ್ಯಾರ್ಥಿನಿಯನ್ನು ಎಳೆದೊಯ್ದು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪಿ, ಅತ್ಯಾಚಾರ ಎಸಗಿದ್ದಾನೆ. ಸದ್ಯ ಆರೋಪಿ ಜೀವನ್ ಗೌಡ ಎಂಬಾತನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದೇನು?

ದಿನಾಂಕ 10-10-2025 ರಂದು ಬೆಳಿಗ್ಗೆ 8.55ಕ್ಕೆ ತರಗತಿಗೆ ಹಾಜರಾಗಿದ್ದ ಸಂತ್ರಸ್ತೆ ಆರೋಪಿ ಜೀವನ್​ನಿಂದ ಕೆಲವೊಂದು ಸಾಮಗ್ರಿಗಳನ್ನು ಕಲೆಕ್ಟ್ ಮಾಡಿಕೊಳ್ಳಬೇಕಾಗಿದ್ದು, ಲಂಚ್ ಬ್ರೇಕ್​​ನಲ್ಲಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾಳೆ. ಹೀಗೆ ಲಂಚ್ ವೇಳೆಯಲ್ಲಿ ಭೇಟಿಯಾದಾಗ ಆರೋಪಿಯು ಸಂತ್ರಸ್ತೆಯ ಬಳಿ ಸ್ವಲ್ಪ ಮಾತನಾಡಬೇಕೆಂದು ಹೇಳಿ ಡೌನ್ ಸ್ಪೇರ್ಸ್​ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಆರೋಪಿಯ ಮನವಿ ಮೇರೆಗೆ 7ನೇ ಮಹಡಿ ಪಿಜಿ ಬ್ಲಾಕ್​ಗೆ ಹೋಗಿರುತ್ತಾರೆ. ಅಲ್ಲಿ, ಆರೋಪಿಯು ಸಂತ್ರಸ್ತೆಗೆ ಕಿಸ್ ಮಾಡಲು ಬಂದಿದ್ದಾನೆ. ತಪ್ಪಿಸಿಕೊಳ್ಳಲು ಮುಂದಾದಾಗ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು 6ನೇ ಮಹಡಿಗೆ ಬಂದ ಆರೋಪಿ, ಆಕೆಯನ್ನು ಬಲವಂತವಾಗಿ ವಾಶ್ ರೂಮ್ ಒಳಗೆ ಕರೆದುಕೊಂಡು ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ ಆರೋಪಿ

ಸಂತ್ರಸ್ತೆಯನ್ನು ಪುರುಷರ ಶೌಚಗೃಹದೊಳಕ್ಕೆ ಎಳೆದೊಯ್ದ ಆರೋಪಿ ಅಲ್ಲಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಅಲ್ಲದೆ, ಬಲವಂತ ಮಾಡಿದ್ದಾನೆ. ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯಿಂದ ಆಘಾತಗೊಂಡ ವಿದ್ಯಾರ್ಥಿನಿ ಈ ವಿಚಾರವನ್ನು ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಿದ್ದಾಳೆ. ಅವರು ಆಕೆಗೆ ಧೈರ್ಯ ತುಂಬಿ ಪೋಷಕರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ನಂತರ ಪೊಲೀಸರ ಜತೆ ಹನುಮಂತನಗರ ಠಾಣೆಗೆ ತೆರಳಿ ಸಂತ್ರಸ್ತೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *