ಸಂಸ್ಕೃತಿ ಪ್ರದರ್ಶನವೋ, ನಿಯಮ ಉಲ್ಲಂಘನೆಯೋ?: ವಿದೇಶಿ ನೆಲದಲ್ಲಿ ಭಾರತೀಯರ ವರ್ತನೆಗೆ ನೆಟ್ಟಿಗರ ಕ್ಲಾಸ್!

ವಿವಿಮಾನ ಸಂಸ್ಥೆಯೊಂದರ ಆವರಣದಲ್ಲಿ ಪ್ರವಾಸಿಗರ ಗುಂಪೊಂದು ವೃತ್ತಾಕಾರದಲ್ಲಿ ಸುತ್ತುತ್ತಾ ಅತ್ಯಂತ ಉತ್ಸಾಹದಿಂದ ನೃತ್ಯ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವಿಮಾನ ಹತ್ತುವ ಅಥವಾ ಇಳಿಯುವ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅಲ್ಲಿ ನಿಂತಿದ್ದ ಕೆಲವು ಸಹಪ್ರಯಾಣಿಕರು ಇದನ್ನು ಕುತೂಹಲದಿಂದ ನೋಡುತ್ತಿದ್ದರೆ, ಇನ್ನು ಕೆಲವರು ತಮ್ಮ ಪಾಡಿಗೆ ತಾವು ಸಾಗುತ್ತಿರುವುದು ವಿಡಿಯೋದಲ್ಲಿದೆ.ಯೆಟ್ನಾಂ (Vietnam) ವಿಮಾನ ನಿಲ್ದಾಣದ (Airport) ರನ್ವೇ ಮೇಲೆಯೇ ಭಾರತೀಯ ಪ್ರವಾಸಿಗರು (Indian Tourists) ಗರ್ಬಾ ನೃತ್ಯ (Garba) ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಸಾಮಾನ್ಯವಾಗಿ ವಿಮಾನ ನಿಲ್ದಾಣದ ರನ್ವೇ ಮತ್ತು ವಿಮಾನದ ಸುತ್ತಲಿನ ಪ್ರದೇಶಗಳು ಅತ್ಯಂತ ಸುರಕ್ಷಿತ ಮತ್ತು ನಿರ್ಬಂಧಿತ ವಲಯಗಳಾಗಿರುತ್ತವೆ. ಭದ್ರತಾ ದೃಷ್ಟಿಯಿಂದ ಪ್ರಯಾಣಿಕರ ಮುಕ್ತ ಓಡಾಟಕ್ಕೆ ಇಲ್ಲಿ ಕಟ್ಟುನಿಟ್ಟಿನ ನಿಯಮಗಳಿರುತ್ತವೆ. ಇಂತಹ ಸೂಕ್ಷ್ಮ ಜಾಗದಲ್ಲಿ ಜವಾಬ್ದಾರಿಯನ್ನೇ ಮರೆತು ನೃತ್ಯ ಮಾಡಿರುವುದು ಸರಿಯಲ್ಲ ಎಂದು ಇಂಟರ್ನೆಟ್ನಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ.
ಈ ವಿಡಿಯೋ ಹರಿದಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದನ್ನು ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರದರ್ಶನ ಎಂದು ಬೆಂಬಲಿಸಿದರೆ, ಬಹುತೇಕರು ಪ್ರವಾಸಿಗರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಸಂತೋಷ ಪಡುವುದರಲ್ಲಿ ತಪ್ಪಿಲ್ಲ, ಆದರೆ ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನ ಇರಬೇಕು. ಇಂತಹ ಬೇಜವಾಬ್ದಾರಿ ವರ್ತನೆಗಳು ವಿದೇಶಗಳಲ್ಲಿ ಭಾರತೀಯ ಪ್ರವಾಸಿಗರ ಬಗ್ಗೆ ತಪ್ಪು ಕಲ್ಪನೆ ಮೂಡಲು ಕಾರಣವಾಗುತ್ತವೆ” ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಹೋಗುವ ಭಾರತೀಯ ಪ್ರವಾಸಿಗರು ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ನಡೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಸ್ಟ್ರಿಯಾ ಮತ್ತು ದುಬೈನ ಬುರ್ಜ್ ಖಲೀಫಾದಲ್ಲೂ ಭಾರತೀಯ ಪ್ರವಾಸಿಗರು ಇಂತಹುದೇ ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ವಿದೇಶಗಳಿಗೆ ಪ್ರಯಾಣಿಸುವಾಗ ಅಲ್ಲಿನ ನಿಯಮಗಳು, ಭದ್ರತೆ ಮತ್ತು ಸಾರ್ವಜನಿಕ ನಡವಳಿಕೆಯನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಯಾಣಿಕನ ಕರ್ತವ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
