Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಗಳನ್ನು ಓಡಿಸಲು ಎಸೆದ ಕೊಡಲಿ – ತಂದೆಯ ಕೈಯಿಂದ ಮಗುವಿನ ಬದುಕಿಗೆ ಅಂತ್ಯ

Spread the love

ಲಕ್ನೋ: ಮಂಗಗಳನ್ನು ಓಡಿಸುವ ಸಲುವಾಗಿ ವ್ಯಕ್ತಿಯೊಬ್ಬ ಎಸೆದ ಕೊಡಲಿ ತನ್ನದೇ 2 ವರ್ಷದ ಮಗುವಿನ ಕತ್ತನ್ನೇ ಸೀಳಿದ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಆರವ್ ಎಂಬ ಬಾಲಕ ಮನೆಯೊಳಗೆ ಆಟವಾಡುತ್ತಿದ್ದಾಗ ಮಂಗಗಳ ಗುಂಪು ಮನೆಯೊಳಗೆ ಪ್ರವೇಶಿಸಿತ್ತು.

ಆಗ ಬಾಲಕನ ತಂದೆ ಲಖನ್ ಸಿಂಗ್ ಮಂಗಗಳು ಮಗುವಿನ ಮೇಲೆ ದಾಳಿ ಮಾಡಬಹುದು ಎಂದು ಭಾವಿಸಿ ಅವುಗಳನ್ನು ಹೊಡೆಯಲು ಛಾವಣಿಗೆ ಹೋಗಿ ಮಂಗಗಳನ್ನು ಗುರಿಯಾಗಿಸಿಕೊಂಡು ಕೊಡಲಿಯನ್ನು ಬೀಸಿದ್ದಾನೆ.

ದುರದೃಷ್ಟವಶಾತ್‌ ಕೊಡಲಿ ಮಂಗಗಳಿಗೆ ತಾಗುವ ಬದಲು ಮಗುವಿನ ಕತ್ತನ್ನೇ ಸೀಳಿದೆ. ಮನೆಯ ಅಂಗಳದಲ್ಲಿ ನಿರ್ಮಿಸಲಾದ ಶೌಚಾಲಯದ ಗೋಡೆಗಳ ಮೇಲೆ ರಕ್ತದ ಚಿಮ್ಮಿದೆ. ಆರವ್‌ನ ಕಿರುಚಾಟ ಕೇಳಿದ ಕುಟುಂಬ ಸ್ಥಳಕ್ಕೆ ದೌಡಾಯಿಸಿ, ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮಗು ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ.

ಘಟನೆ ಬಗ್ಗೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *