Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಾರ ಕೊಡಿಸದಿದ್ದಕ್ಕೆ ಪಂಜಾಬ್‌ನಲ್ಲಿ ಬಾಲಕ ನೇಣಿಗೆ ಶರಣು

Spread the love

ನವದೆಹಲಿ: ಗಾಳಿಪಟ (Kite) ಹಾರಿಸಲು ದಾರ ಕೊಡಿಸಲಿಲ್ಲ ಎಂದು ಮನನೊಂದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್​​ನಲ್ಲಿ ನಡೆದಿದೆ. 11 ವರ್ಷದ ಬಾಲಕನೊಬ್ಬ ಗಾಳಿಪಟ ಹಾರಿಸಲು ದಾರ ಕೊಡಿಸಿ ಎಂದು ಮನೆಯವರ ಬಳಿ ಒತ್ತಾಯಿಸಿದ್ದ. ಅದಕ್ಕೆ ಅವರು ಒಪ್ಪಿರಲಿಲ್ಲ. ಹೋಗಿ ಓದಿಕೋ ಎಂದು ಅವರು ಗದರಿ ರೂಂಗೆ ಕಳುಹಿಸಿದ್ದರು. ಸ್ವಲ್ಪ ಹೊತ್ತಾದ ಮೇಲೆ ರೂಂ ಬಳಿ ಹೋಗಿ ನೋಡಿದಾಗ ಆ ರೂಂ ಒಳಗಿಂದ ಲಾಕ್ ಆಗಿತ್ತು. ಆ ಬಾಲಕನನ್ನು ಕರೆದರೂ ಪ್ರತಿಕ್ರಿಯೆ ಬರಲಿಲ್ಲ.

ಅನುಮಾನದಿಂದ ಕುಟುಂಬದ ಸದಸ್ಯರು ಬಾಗಿಲು ಒಡೆದು ಒಳಗೆ ಹೋದಾಗ, ಮಗು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕರ್ಟನ್ ರಾಡ್‌ಗೆ ನೇಣು ಬಿಗಿದುಕೊಂಡು ಆ ಬಾಲಕ ಮೃತಪಟ್ಟಿದ್ದಾನೆ.

ಕಪುರ್ತಲಾ ಜಿಲ್ಲೆಯ ಫಾಗ್ವಾರಾದ ಪನ್ಶ್ತಾ ಗ್ರಾಮದಲ್ಲಿ ಈ ಮಾಡಿಕೊಂಡ ದುರಂತ ಘಟನೆ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ, ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *