ಚಿಕ್ಕಮಗಳೂರು: ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾ*ವು

ಚಿಕ್ಕಮಗಳೂರು : ಜೋಕಾಲಿ ಆಡುವ ವೇಳೆ ಸೀರೆ ಕುತ್ತಿಗೆಗೆ ಸಿಲುಕಿ ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ಚಿಕ್ಕಮಗಳೂರಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಲೇಖನಾ (10) ಮೃತಪಟ್ಟ ದುರ್ದೈವಿ. ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಅನಾಹುತ ಸಂಭವಿಸಿದೆ.

ಲೇಖನಾ ಮನೆಯಲ್ಲಿ ಒಬ್ಬಳೇ ಇದ್ದಾಗ ಸೀರೆಯಿಂದ ಮಾಡಿದ ಜೋಕಾಲಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಸೀರೆ ಆಕೆಯ ಕೊರಳಿಗೆ ಬಿಗಿದುಕೊಂಡಿದೆ. ಗಾಬರಿಗೊಂಡ ಬಾಲಕಿ ಅದನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪೋಷಕರು ಹೊರಗೆ ಹೋಗಿ ಮನೆಗೆ ಮರಳಿದಾಗ ಮಗಳು ಶವವಾಗಿ ನೇತಾಡುತ್ತಿರುವುದನ್ನು ಕಂಡು ದಿಕ್ಕೆಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಶೋಕ ಸಾಗರವೇ ಮನೆ ಮಾಡಿದೆ.