ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದಿಂದ ಕ್ಯಾಪುಚಿನ್ ಕೋತಿಗಳು

ಆನೇಕಲ್: ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದಿಂದ ಎಂಟು ಕ್ಯಾಪುಚಿನ್ ಕೋತಿಗಳು ಆಗಮಿಸಿವೆ. ಪ್ರಾಣಿ ವಿನಿಮಯದ ಅಡಿಯಲ್ಲಿ ಬಂದಿರುವ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಕೋತಿಗಳು ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ ಪ್ರಕ್ರಿಯೆ ಮುಗಿಸಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿವೆ. ಈ ಹೊಸ ಅತಿಥಿಗಳನ್ನು ನೋಡಿ ಪ್ರವಾಸಿಗರು ಆನಂದಿಸುತ್ತಿದ್ದು, ಝೂನಲ್ಲಿ ಹೊಸ ಆಕರ್ಷಣೆಯಾಗಿವೆ.
