ಆನ್‌ಲೈನ್ ಇನ್ವೆಸ್ಟ್‌ಮೆಂಟ್ ಜಾಹಿರಾತುಗಳ ಬಗ್ಗೆ ಎಚ್ಚರ: ಲಾಭದ ಆಮಿಷವೊಡ್ಡಿ ಹಣ ಪಡೆದು ಪರಾರಿಯಾದ ಸೈಬರ್ ವಂಚಕರು

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಬಂದ ನಕಲಿ ಇನ್ವೆಸ್ಟಮೆಂಟ್ ಜಾಹಿರಾತನ್ನು ವ್ಯಕ್ತಿಯೊಬ್ಬರು 7 ಲಕ್ಷ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಕಳೆದುಕೊಂಡ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಬಂದ Indonnewstartyogo.Com ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಈ ವೇಳೆ ರಿಜಿಸ್ಟ್ರರ್ ಮಾಡಿಕೊಳ್ಳಲು ಕೇಳಿದೆ, ಅದರಂತೆ ರಿಜಿಸ್ಟರ್ ಮಾಡಿಕೊಂಡಿದ್ದರು. ಬಳಿಕ https://www.Tradgrip.com/client-area/Login ಲಿಂಕ್ ಕ್ಲಿಕ್ ಮಾಡಿದಾಗ ಟೇಲಿಗ್ರಾಂ ಚಾನಲ್ ನಲ್ಲಿ Tridgrip Account Manager. ಎಂಬ ಗ್ರೂಪ್ ಗೆ ಜಾಯಿನ್ ಆಗಿ ಗ್ರೂಪ್ ನಲ್ಲಿ ಪಿರ್ಯಾದಿದಾರರಿಗೆ ಸಾಗರ್ ಎಂಬತನು ಪರಿಚಯಯಾಗಿದ್ದಾನೆ.
ಆತ ನಿಮ್ಮ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಲು 19,300/- ರೂ ಹಾಕುವಂತೆ ನನಗೆ ತಿಳಿಸಿದ್ದು ಪಿರ್ಯಾದಿದಾರರು ದಿನಾಂಕ:05/10/2025 ರಂದು UPI ಮೂಲಕ s1pveb@pty ನೇದಕ್ಕೆ 19,300/- ಹಾಕಿದ್ದಾರೆ. ಬಳಿಕ ಆತ ನಮ್ಮ ಸಿನಿಯರ್ ಮ್ಯಾನೇಜರ್ ರವರು ನಿಮ್ಮ ಜೊತೆ ಮಾತನಡುತ್ತಾರೆ ಎಂದು ತಿಳಿಸಿದ್ದು. ನಂತರ ಸ್ವಾತೀಕ್ ಶೆಟ್ಟಿ ಎಂಬತನು Tridgrip Account Manager ಗ್ರೂಪ್ ನಲ್ಲಿ ಪರಿಚಯವಾಗಿ ನನಗೆ ಹಣ ಹೂಡಿಕೆ ಮಾಡಿದರೆ ನಿಮಗೆ ಸಿಲ್ವರ್ ಮತ್ತು ಗೋಲ್ಡ್ ನ ಇಂಟರ್ ನ್ಯಾಷಿನಲ್ ಮಾರುಕಟ್ಟೆಯಲ್ಲಿ ಹೊಡಿಕೆ ಮಾಡಿ ಬಂದ ಲಾಭಂಶದಲ್ಲಿ 13 ಲಕ್ಷವನ್ನು ಮಾಡಿಕೊಡುವುದಾಗಿ ತಿಳಿಸಿದ್ದಾನೆ. ನಂತರ Tridgrip Account Manager. ಎಂಬ ಗ್ರೂಪ್ ನಲ್ಲಿ ಹಣ ಹಾಕಲು ತಿಳಿಸಿದಂತೆ ಪಿರ್ಯಾದಿದಾರರು ದಿನಾಂಕ:08/10/2025 ರಂದು ಅವರ ಬ್ಯಾಂಕ್ RTGS ನ ಮೂಲಕ 7,00,000/- ರೂ ಹಾಕಿರುತ್ತಾರೆ. ದಿನಾಂಕ: 09/10/2025 ರಂದು ಸಂತ್ರಸ್ತರ ಖಾತೆಗೆ 1420/- ರೂ ಬಂದಿದ್ದು ಮತ್ತೆ ಇದೇ ದಿನ 11,539/- ರೂ ಖಾತೆಗೆ ಬಂದಿದೆ. ಬಳಿಕ ನಕಲಿ ಇನ್ವೆಸ್ಟ್ ಮೆಂಟ್ ನ ಸ್ವಾತೀಕ್ ಶೆಟ್ಟಿ ಅಮೆರಿಕದ 60 ಕಂಪನಿಯ ಗ್ರೂಪ್ ಇದೆ ಅದರಲ್ಲಿ ಜಾಯಿನ್ ಆಗಿ ಹೊಡಿಕೆ ಮಾಡಿದರೆ ನಿಮಗೆ 30 ಲಕ್ಷ ಹಣದ ಲಾಭಾಂಶ ಬರುತ್ತದೆ ಎಂದು ತಿಳಿಸಿದ್ದಾನೆ. ಅಲ್ಲದೆ ನಾನೇ ನಿಮ್ಮ ಪರವಾಗಿ 1 ಸಾವಿರ ಡಾಲರ್ ಹಾಕಿ ಆಕೌಂಟ್ ಓಂಪನ್ ಮಾಡುತಿನಿ ಪಿರ್ಯಾದಿದಾರರಿಗೆ 10 ಲಕ್ಷವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು. ಪಿರ್ಯಾದಿದಾರಿಗೆ ಸಾಂಶಯ ಬಂದು ದಿನಾಂಕ:10/10/2025 ರಂದು ನಾನು 1930 ಸೈಬರ್ ದೂರು ನೀಡಿರುತ್ತಾರೆ. ಒಟ್ಟು 7,19,300/- ರೂ ಹಣ RTGS ಮೂಲಕ ಹಾಗೂ UPI ಮೂಲಕ ಹಣ ಮಾಡಿದ್ದು. ಆದ್ದರಿಂದ ಪಿರ್ಯಾದಿದಾರರಿಗೆ ಮೋಸ ಮಾಡಿದ ಸಾಗರ್ ಹಾಗೂ ಸ್ವಾತೀಕ್ ಶೆಟ್ಟಿ ಮತ್ತು ಟೇಲಿಗ್ರಾಂ ನ Tridgrip Account Manager ಗ್ರೂಪ್ ನ ಆಡ್ಮಿನ್ ಗಳ ಮೇಲೆ ಹಾಗೂ ಮೋಸಮಾಡಿದ ಇತರರ ಮೇಲೆ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.