Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಂಟ್ವಾಳ: ವಿಟ್ಲದ ಪಾದೆಕಲ್ಲು ಬಳಿ ಚಾಲಕನ ಮೇಲೆಯೇ ಹರಿದ ಟಿಪ್ಪರ್ ಲಾರಿ; ಧರ್ಮಸ್ಥಳದ ಮಹೇಶ್ ಸ್ಥಳದಲ್ಲೇ ಸಾ*ವು!

Spread the love

ಬಂಟ್ವಾಳ : ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಾದೆಕಲ್ಲು ಎಂಬಲ್ಲಿ ಟಿಪ್ಪರ್ ಹರಿದು ಅದರ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಧರ್ಮಸ್ಥಳ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.

ಪಾದೆಕಲ್ಲು ಎನ್ನುವ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಬಾಕ್ಸೈಟ್ ದಂಧೆ ನಡೆಯುತ್ತಿದ್ದು, ಹಲವಾರು ಟಿಪ್ಪರ್ ಲಾರಿಗಳು ಈ ಭಾಗದಲ್ಲಿ ಓಡಾಟ ನಡೆಸುತ್ತಿವೆ. ಟಿಪ್ಪರ್ ಚಾಲಕ ತನ್ನ ಟಿಪ್ಪರ್ ಸ್ಟಾರ್ಟ್ ಆಗುತ್ತಿಲ್ಲ ಎಂದು ಟಿಪ್ಪರ್ ಅಡಿಭಾಗಕ್ಕೆ ಬಂದು ಪರಿಶೀಲನೆ ನಡೆಸುವ ಸಮಯದಲ್ಲಿ ಟಿಪ್ಪರ್ ತನ್ನಿಂದ ತಾನೇ ಮುಂದೆ ಚಲಿಸಿ ಅಡಿಭಾಗದಲ್ಲಿದ್ದ ಚಾಲಕನ ಮೇಲೆ ಹರಿದಿದೆ. ಇದರಿಂದಾಗಿ ಚಾಲಕ ಸ್ಥಳದಲ್ಲೇ ಸಾವನಪ್ಪಿದ್ದಾನೆ. ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *