ಒಂದೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಆರು ನರ್ಸ್ಗಳಿಗೆ ಬ್ರೈನ್ ಟ್ಯೂಮರ್

ಮ್ಯಾಸಚೂಸೆಟ್ಸ್: ಒಂದೇ ಆಸ್ಪತ್ರೆಯ ಹಾಗೂ ಒಂದೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 6 ನರ್ಸ್ಗಳಿಗೆ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್ನಲ್ಲಿ ನಡೆದಿದೆ. ಈ ನಿಗೂಢ ಗಡ್ಡೆಗಳು ಒಬ್ಬರ ನಂತರ ಒಬ್ಬರಲ್ಲಿ ಕಾಣಿಸಿಕೊಂಡಿವೆ. ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿನ ಪ್ರಕರಣ ಮೊದಲ ಮೊದಲು ಏಪ್ರಿಲ್ ಆರಂಭದಲ್ಲಿ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಆಸ್ಪತ್ರೆ ತನಿಖೆಯನ್ನು ಪ್ರಾರಂಭಿಸಿತು ಮತ್ತು ಪ್ರಕರಣಗಳ ಹಿಂದೆ ಯಾವುದೇ ಆ ಫ್ಲೋರ್ನಲ್ಲಿ ಯಾವುದೇ ರೀತಿಯ ಅಪಾಯವಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿತ್ತು. ಈ ಎಲ್ಲಾ ನರ್ಸ್ಗಳು ಆಸ್ಪತ್ರೆಯ ಐದನೇ ಮಹಡಿಯ ಹೆರಿಗೆ ವಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ನರ್ಸ್ಗಳ ಮೆದುಳಿನಲ್ಲಿ ಸಣ್ಣ ಪ್ರಮಾದ ಗಡ್ಡೆಗಳು ಕಾಣಿಸಿಕೊಂಡಿವೆ. ಐದನೇ ಮಹಡಿಯಲ್ಲಿ ವಿವಿಧ ಅವಧಿಗಳಿಗೆ ಕೆಲಸ ಮಾಡಿದ ಆರು ಸಿಬ್ಬಂದಿಯನ್ನು ಒಎಚ್ಎಸ್ ಗುರುತಿಸಿದೆ ಮತ್ತು ಅವರಿಗೆ ಹಾನಿಕರವಲ್ಲದ (ಕ್ಯಾನ್ಸರ್ ಅಲ್ಲದ) ಮೆದುಳಿನ ಗಡ್ಡೆಗಳು ಕಾಣಿಸಿಕೊಂಡಿವೆ ಎಂದು ಹೇಳಲಾಗಿದೆ.