Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಲಬುರಗಿಯಲ್ಲಿ ಜಲಕ್ಷಾಮದ ಭೀಕರತೆ; ಒಂದು ಬಿಂದಿಗೆ ನೀರಿಗೆ 6 ರೂಪಾಯಿ, ಡ್ರಂಗೆ 60 ರೂಪಾಯಿ!

Spread the love

ಕಲಬುರಗಿ: ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು, ಕೆರೆ-ಕಟ್ಟೆ ಹಾಗೂ ಬೋರ್‌ವೆಲ್‌ಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದರ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಹನಿ ನೀರಿಗೂ ಸಹ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಇದೀಗ ಬಿಂದಿಗೆ ನೀರನ್ನು ಸಹ ಹಣ ನೀಡಿ ಖರೀದಿಸಿ ಜನ ತಮ್ಮ ಜಲ ದಾಹ ತೀರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯಲ್ಲಿ 1975ರ ಬರಗಾಲದ ಬಳಿಕ ಇದೀಗ ಅಂತಹದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರ ಪರಿಣಾಮ ಬೇಸಿಗೆಗೂ ಮುನ್ನವೇ ಜಿಲ್ಲೆಯ ಜಲಮೂಲಗಳು ಸಂಪೂರ್ಣ ಬತ್ತಿ ಹೋದ ಹಿನ್ನೆಲೆ ಹನಿ ನೀರಿಗೂ ಸಹ ಜನ ಕಿ.ಮೀ ಗಟ್ಟಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲಿಯೂ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ (ಬಿ) ಗ್ರಾಮದ ಎಲ್ಲಾ ಬೋರ್‌ವೆಲ್‌ಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಹೀಗಾಗಿ, ಇಡೀ ಗ್ರಾಮಕ್ಕೆ ಒಂದೇ ಒಂದು ಬಿಂದಿಗೆ ನೀರನ್ನು ಸಹ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗು ಜಿಲ್ಲಾಡಳಿತ ಮಾಡುತ್ತಿಲ್ಲ. ಹೀಗಾಗಿ, ನೀರು ಸಿಗದ ಕಾರಣ ಹಣ ಕೊಟ್ಟು ನೀರು ಖರೀದಿಸುವ ಅನಿವಾರ್ಯತೆ ಎದುರಾಗಿದೆ

ಇದನ್ನೇ ಟ್ಯಾಂಕರ್ ಮಾಫಿಯಾದ ಜನ ಬಂಡವಾಳ ಮಾಡಿಕೊಂಡು ಗ್ರಾಮದ ಹೊರವಲಯದ ಜಮೀನಿನಲ್ಲಿನ ಬಾವಿಗಳಿಂದ ನೀರು ಖರೀದಿಸಿ ಅದರ ನಾಲ್ಕು ಪಟ್ಟು ದರ ಹೆಚ್ಚಿಗೆ ಮಾಡಿ ಗೋಳಾ ಗ್ರಾಮಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಸದ್ಯ ಈ ಗ್ರಾಮದ ಜನ ಒಂದು ಬಿಂದಿಗೆ ನೀರಿಗೆ 6 ರೂಪಾಯಿ, ಒಂದು ಡ್ರಂ ನೀರಿಗೆ 60 ರೂಪಾಯಿ ನೀಡಿ ಖರೀದಿಸಬೇಕಾಗಿದೆ. ಹೀಗಾಗಿ, ದಿನ ಬೆಳಗಾದ್ರೆ ಸಾಕು ಈ ಗ್ರಾಮಕ್ಕೆ ಹತ್ತಾರು ಖಾಸಗಿ ನೀರಿನ ಟ್ಯಾಂಕರ್‌ಗಳು ನೀರು ಮಾರಾಟ ಮಾಡುತ್ತಿವೆ.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನಸಾಮಾನ್ಯರಿಗೆ ನೀರಿಗಾಗಿ ಹಣ ಖರ್ಚು ಮಾಡುವ ಸಂಕಷ್ಟ ಎದುರಾಗಿದೆ. ದಿನನಿತ್ಯದ ಅಗತ್ಯವಾದ ಕುಡಿಯುವ ನೀರಿಗೂ ಹಣ ನೀಡಬೇಕಾದ ಪರಿಸ್ಥಿತಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿಬರುತ್ತಿದೆನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಡಳಿತಕ್ಕೆ ಒತ್ತಾಯಿಸಿದ್ದರು ಸಹ ಯಾವ ಪ್ರಯೋಜನವಾಗಿಲ್ಲ. ಇಲ್ಲಿನ ಗ್ರಾಮ ಪಂಚಾಯತ್ ಪಿಡಿಓ ಅವರನ್ನ ಸಂಪರ್ಕ ಮಾಡಿದ್ರು ಸಹ ಪಂಚಾಯತ್‌ನಲ್ಲಿ ಹಣವೇ ಇಲ್ಲ, ಗ್ರಾಮಕ್ಕೆ ಏಲ್ಲಿಂದ ನೀರು ಸರಬರಾಜು ಮಾಡಬೇಕು ಅಂತಾ ತಮ್ಮ ಅಸಹಾಯಕತೆಯನ್ನ ಪ್ರದರ್ಶಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *