ಪಬ್ ಗಲಾಟೆ ಬೆನ್ನಲ್ಲೇ ನೆರೆಮನೆಯವರ ಜೊತೆ ಕಿರಿಕ್: ಅಮುಕು ಡುಮುಕು ಮಂಜು ವಿರುದ್ಧ ದೂರು

ಬೆಂಗಳೂರು: ಪಬ್ನಲ್ಲಿ ಗಲಾಟೆ ಮಾಡಿಕೊಂಡಿದ್ದ ಯುಟ್ಯೂಬರ್ ಅಮುಕು ಡುಮುಕು ಮಂಜು (Amuku Dumuku Manja) ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ (FIR) ದಾಖಲಾಗಿದೆ.ಈ ಹಿಂದೆ ಪಬ್ನಲ್ಲಿ ಗಲಾಟೆ ಆಗಿತ್ತು. ಇದೀಗ ಪಕ್ಕದ ಮನೆಯವರ ಜೊತೆ ಗಲಾಟೆಯಾಗಿದೆ. ಪಕ್ಕದ ಮನೆಯ ವಿಕ್ರಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ (Yeshwantpur Police Station) ಅಮುಕು ಡುಮುಕು ಮಂಜ @ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರುದಾರ ವಿಕ್ರಂ ಹಾಗೂ ಮಂಜು ಅಕ್ಕಪಕ್ಕದ ಮನೆಯವರೇ ಆಗಿದ್ದು, ಇದೀಗ ಮಂಜುನಾಥ್ ತಮ್ಮ ಸಿದ್ದ ಎಂಬಾತನ ವಿಚಾರವಾಗಿ ಕಿರಿಕ್ ನಡೆದಿದೆ. ಈ ವೇಳೆ ಎರಡು ಮನೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಅವರು ಕೂಡ ವಿಕ್ರಂ ವಿರುದ್ಧ ದೂರು ನೀಡಿದ್ದು, ದೂರು-ಪ್ರತಿದೂರು ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ
