Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಬ್ಬರ್ ಧಾರಣೆಯಲ್ಲಿ ದಿಢೀರ್ ಕುಸಿತ: ಬೆಳೆಗಾರರಿಗೆ ₹22 ನಷ್ಟದ ಹೊಡೆತ

Spread the love

ಮಂಗಳೂರು:ರಬ್ಬ‌ರ್ ಧಾರಣೆ ದಿಢೀ‌ರ್ ಇಳಿಕೆ; ಬೆಳೆಗಾರರಲ್ಲಿ ನಿರಾಸೆ , 302 ರೂ. ಗಡಿ ದಾಟಿದ್ದ ಗ್ರೇಡ್ ರಬ್ಬರ್ ಕೆ.ಜಿ.ಗೆ ಈಗ 280 ರೂ.ಧಾರಣೆ ಏರಿಕೆಯ ಹಾದಿಯಲ್ಲಿರುವಾಗಲೇ ರಬ್ಬರ್‌ಗೆ ಧಾರಣೆ ಇಳಿಕೆಯ ಹೊಡೆತ ಬಿದ್ದಿದೆ. ಅಕ್ಟೋಬರ್‌ನಲ್ಲಿ ಕೆ.ಜಿ.ಗೆ 302 ರೂ. ಇದ್ದ ಗ್ರೇಡ್ ರಬ್ಬರ್ ಧಾರಣೆ ನ. 19 ರಂದು 280 ರೂ. ಗೆ ಇಳಿದಿದೆ. ಇದೇ ಅವಧಿಯಲ್ಲಿ ಸಾಕೀéಪ್ ರಬ್ಬರ್‌ಧಾರಣೆಯೂ 195ರಿಂದ 269 ರೂ. ಗೆ ಕುಸಿದಿದೆ. ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದ ರಬ್ಬರ್ ಬೆಳೆಗಾರರಿಗೆ ಈ ದಿಢೀರ್ ಇಳಿಕೆ ನಿರಾಸೆ ಮೂಡಿಸಿದೆ.ಅಕ್ಟೋಬರ್‌ನಿಂದ ನ. 19ರ ವೇಳೆಗೆ 280 ರೂ. ಗೆ ಇಳಿದಿದ್ದು, ಕೆ. ಜಿ.ಗೆ 22 ರೂ. ಕಡಿಮೆಯಾಗಿದೆ. ಸ್ಕ್ಯಾಪ್ ರಬ್ಬರ್ ಧಾರಣೆ ಕೆ.ಜಿ.ಗೆ 26 ರೂ. ಕುಸಿತ ಕಂಡಿದೆ. ಅಲ್ಪಾವಧಿಯಲ್ಲೇ ಈ ಪ್ರಮಾಣದ ಇಳಿಕೆ ಕಂಡುಬಂದಿರುವುದು ಬೆಳೆಗಾರರ ಲೆಕ್ಕಾಚಾರವನ್ನು ಬದಲಿಸಿದೆ.ರಬ್ಬರ್ ಧಾರಣೆ ಇಳಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವ ಣಿಗೆಗಳೂ ಕಾರಣವಾಗಿರ ಬಹುದು ಎಂಬ ವಿಶ್ಲೇಷಣೆ ಇದೆ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಧಾರಣೆಯ ಇಳಿಕೆ, ಥೈಲ್ಯಾಂಡ್‌ನಲ್ಲಿ ರಬ್ಬರ್ ಉತ್ಪಾದನೆ ಹೆಚ್ಚಳ ಹಾಗೂ ಚೀನದ ವಾಹನ ಉದ್ಯಮದಲ್ಲಿನ ಹಿಂಜರಿತ ರಬ್ಬರ್ ಧಾರಣೆ ಇಳಿಕೆಗೆ ಕಾರಣವಾದ ಅಂಶಗಳು ಎನ್ನುತ್ತಾರೆ ಕೃಷಿ ಮಾರುಕಟ್ಟೆ ತಜ್ಞ ಡಾ| ವಿಶ್ವೇಶ್ವರ ವರ್ಮುಡಿ.ರಬ್ಬರ್ ಬೆಳೆಗಾರರೂ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮ ಸ್ಥಳೀಯ ರಬ್ಬರ್ ಧಾರಣೆಯಲ್ಲೂ ಇಳಿಕೆ ಕಂಡುಬಂದಿದೆ. ಉತ್ಪಾದನ ವೆಚ್ಚ, ಕಾರ್ಮಿಕರ ಕೂಲಿ ಹಾಗೂ ನಿರ್ವಹಣ ವೆಚ್ಚಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಧಾರಣೆ ಕುಸಿತ ಬೆಳೆಗಾರರ ಆದಾಯದ ಮೇಲೆ ಪರಿಣಾಮ ಬೀರುವ ಆತಂಕವಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಸ್ಥಿತಿಗತಿಗಳು ರಬ್ಬರ್ ಧಾರಣೆಯ ದಿಕ್ಕನ್ನು ನಿರ್ಧರಿಸಲಿವೆ.


Spread the love
Share:

administrator

Leave a Reply

Your email address will not be published. Required fields are marked *