Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಜೋಕಟ್ಟೆ ಕ್ರಾಸ್ ಬಳಿ ಅಕ್ರಮ ಗಾಂಜಾ ಮಾರಾಟ – 3.8 ಕೆ.ಜಿ ಡ್ರಗ್ಸ್ ವಶಕ್ಕೆ, ಯುವಕ ಬಂಧನ!”

Spread the love

ಮಂಗಳೂರು : ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಂದಾಜು ರೂ. 1.90 ಲಕ್ಷ ಮೌಲ್ಯದ 3 ಕೆ.ಜಿ 800 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡ್ನೂರ್‌ ಪೋಸ್ಟ್‌ನ ಪಡ್ಡಾಯೂರ್‌ ಹೌಸ್‌ನ ನಿವಾಸಿ ಮೊಹಮ್ಮದ್ ನಿಸಾರ್ (23) ಬಂಧಿತ ಆರೋಪಿ.ನವೆಂಬರ್ 05 ರಂದು ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಬಳಿ ಗಾಂಜಾವನ್ನು ಮಾರಾಟ ಮಾಡಲು ತಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉತ್ತರ ಉಪ ವಿಭಾಗದ ಎ.ಸಿ.ಪಿ. ಅವರ ತಂಡ ಹಾಗೂ ಪಣಂಬೂರು ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.ಆರೋಪಿಯ ವಶದಿಂದ ಈ ಕೆಳಗಿನ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ:ಗಾಂಜಾ: 3 ಕೆ.ಜಿ 800 ಗ್ರಾಂ (ಅಂದಾಜು ಮೌಲ್ಯ ರೂ. 1,90,000/-)
ಮೊಬೈಲ್ ಫೋನ್: 1 (ಅಂದಾಜು ಮೌಲ್ಯ ರೂ. 4,000/-)
ಕಾರು : ಗಾಂಜಾ ಸಾಗಿಸಲು ಬಳಸಿದ್ದು (ಅಂದಾಜು ಮೌಲ್ಯ ರೂ. 2,00,000/-)
ಸ್ವಾಧೀನಪಡಿಸಿಕೊಳ್ಳಲಾದ ಒಟ್ಟು ಸೊತ್ತಿನ ಮೌಲ್ಯ ರೂ. 3,94,000/-  ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿತನು ಸುರತ್ಕಲ್, ಪಣಂಬೂರು, ಕಾವೂರು ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದನು. ಈ ಹಿಂದೆ ಕೂಡ ಈತ ಮಂಗಳೂರು ನಗರದಲ್ಲಿ ಹಲವು ಬಾರಿ ಗಾಂಜಾವನ್ನು ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆಯನ್ನು ಮುಂದುವರಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *