Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: ಮಗಳನ್ನು ಪ್ರೀತಿಸುತ್ತಿದ್ದ ಸ್ವಂತ ಉದ್ಯೋಗಿಯನ್ನೇ ಹೊಡೆದು ಕೊಂ*ದ ತಂದೆ

Spread the love

ಬೆಂಗಳೂರು: ತನ್ನ 19 ವರ್ಷದ ಮಗಳನ್ನು ಪ್ರೀತಿಸುತ್ತಿದ್ದ ಸ್ವಂತ ಉದ್ಯೋಗಿ ಯುವಕನನ್ನು ಮಾಲೀಕನೊಬ್ಬ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ಪೈಪ್‌ನಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಗರದ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕೊಗಿಲು ಕ್ರಾಸ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.ಕೊಲೆಯಾದ ದುರ್ದೈವಿಯನ್ನು ಕೇರಳ ಮೂಲದ ಕಿರಣ್ (24) ಎಂದು ಗುರುತಿಸಲಾಗಿದೆ. ಕೊಲೆ ಎಸಗಿದ ಆರೋಪಿ ತಮಿಳುನಾಡು ಮೂಲದ ಆನಂದರಾಜ್ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆನಂದರಾಜ್ ಕೊಗಿಲು ಮುಖ್ಯರಸ್ತೆಯಲ್ಲಿ ತಳ್ಳುಗಾಡಿ ತಯಾರಿಕಾ ಘಟಕ ನಡೆಸುತ್ತಿದ್ದು, ಮೃತ ಕಿರಣ್ ಕಳೆದ ಕೆಲವು ವರ್ಷಗಳಿಂದ ಈತನ ಬಳಿ ಉದ್ಯೋಗಿಯಾಗಿದ್ದನು. ಆನಂದರಾಜ್‌ನ 19 ವರ್ಷದ ಮಗಳು ಮೈಸೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ರಜೆಯ ನಿಮಿತ್ತ ಮನೆಗೆ ಬಂದಿದ್ದಳು. ಈ ವೇಳೆ ಕಿರಣ್ ಹಾಗೂ ಮಗಳ ನಡುವೆ ಪ್ರೇಮಾಂಕುರವಾಗಿದ್ದು, ಇದು ಆನಂದರಾಜ್ ಗಮನಕ್ಕೂ ಬಂದಿತ್ತು.
ಮಂಗಳವಾರದಂದು ಆನಂದರಾಜ್ ತನ್ನ ಪತ್ನಿಯೊಂದಿಗೆ ತಮಿಳುನಾಡಿಗೆ ಹೋಗುತ್ತಿದ್ದು ರಾತ್ರಿ ವಾಪಸ್ ಬರುವುದಾಗಿ ಮಗಳಿಗೆ ತಿಳಿಸಿ ಹೊರಟಿದ್ದನು. ಆದರೆ, ಕೆಲವೇ ಗಂಟೆಗಳಲ್ಲಿ ದಂಪತಿ ದಿಢೀರನೆ ಮನೆಗೆ ಮರಳಿದಾಗ ಮಗಳು ಮನೆಯಲ್ಲಿ ಕಿರಣ್ ಜೊತೆಗಿರುವುದು ಕಂಡುಬಂದಿದೆ.ಇದರಿಂದ ತೀವ್ರ ಆಕ್ರೋಶಗೊಂಡ ಆನಂದರಾಜ್, ಮಗಳನ್ನು ತಾಯಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿದ್ದಾನೆ. ಬಳಿಕ ಕಿರಣ್‌ನನ್ನು ಮನೆಯೊಳಗೆ ಕೂಡಿ ಹಾಕಿ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ಪೈಪ್‌ನಿಂದ ಮನಬಂದಂತೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಕಿರಣ್‌ನ ಕಾಲು, ಕೈ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರ ಗಾಯಗಳಾಗಿ ಆತ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ಆತ ಕುಸಿದು ಬೀಳುತ್ತಿದ್ದಂತೆ ಭಯಗೊಂಡ ಆನಂದರಾಜ್ ಆಟೋರಿಕ್ಷಾದಲ್ಲಿ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾನಾದರೂ, ಪರೀಕ್ಷಿಸಿದ ವೈದ್ಯರು ಕಿರಣ್ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಆಸ್ಪತ್ರೆಯಿಂದ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಯಲಹಂಕ ಪೊಲೀಸರು ಆರೋಪಿ ಆನಂದರಾಜ್‌ನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ವೇಳೆ ಯುವತಿಯ ನಿಖರ ವಯಸ್ಸಿನ ಕುರಿತಾಗಿಯೂ ಸೂಕ್ತ ಪರಿಶೀಲನೆ ಹಾಗೂ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *