Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಪು: ‘ತುಲಂ ಕಾಟೇಜಸ್’ ಹೋಂಸ್ಟೇ ಧ್ವಂಸಗೊಳಿಸಿ ₹20 ಲಕ್ಷ ಆಸ್ತಿಪಾಸ್ತಿ ಲೂಟಿ – ಗೌತಮ್ ಸೇರಿದಂತೆ 5 ಮಂದಿ ವಿರುದ್ಧ FIR!

Spread the love

ಕಾಪು (ಉಡುಪಿ): ಕಲ್ಮಾಡಿ ಮೂಲದ ಉದ್ಯಮಿ ಹರ್ಷಿತ್ ಎಸ್. ಕುಂದರ್ ಎಂಬುವವರಿಗೆ ಸೇರಿದ ಕಾಪುವಿನ ಪ್ರಸಿದ್ಧ ‘ತುಲಂ ಕಾಟೇಜಸ್ ಹೋಂಸ್ಟೇ’ (Tulam Cottages Homestay) ಗೆ ಅಕ್ರಮವಾಗಿ ಅತಿಕ್ರಮಣ ಪ್ರವೇಶ ನಡೆಸಿದ ದುಷ್ಕರ್ಮಿಗಳ ತಂಡವೊಂದು, ಕಟ್ಟಡ ಹಾಗೂ ಸೌಲಭ್ಯಗಳನ್ನು ಧ್ವಂಸಗೊಳಿಸಿ ಸುಮಾರು ₹20 ಲಕ್ಷ ರೂಪಾಯಿ ಆರ್ಥಿಕ ನಷ್ಟ ಉಂಟುಮಾಡಿದ ಘಟನೆ ನಡೆದಿದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಕಳವು ಮಾಡಲಾಗಿದ್ದು, ಬೆದರಿಕೆ ಕರೆ ಒಡ್ಡಿದ್ದ ಗೌತಮ್ ಸೇರಿದಂತೆ ಐದು ಮಂದಿ ಶಂಕಿತರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅತ್ಯಂತ ಕಠಿಣ ಕಾನೂನು ಕಲಂಗಳಡಿ ಪ್ರಕರಣ ದಾಖಲಾಗಿದೆ.

ದೂರುದಾರರಾದ ಉಡುಪಿ ಕಲ್ಮಾಡಿ 2ನೇ ಕ್ರಾಸ್ ನಿವಾಸಿ ಹರ್ಷಿತ್ ಎಸ್. ಕುಂದರ್ ಅವರಿಗೆ ಅಕ್ಟೋಬರ್ 31, 2026 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಸ್ನೇಹಿತರೊಬ್ಬರು ಕರೆ ಮಾಡಿ, ಅವರ ಹೋಂಸ್ಟೇ ಆಸ್ತಿಗೆ ಭಾರಿ ಹಾನಿ ಉಂಟಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅಘಾತಕಾರಿ ದೃಶ್ಯ ಬೆಳಕಿಗೆ ಬಂದಿದೆ: ಅಪರಿಚಿತ ದುಷ್ಕರ್ಮಿಗಳ ಪಡೆ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, ಎರಡು ಕಾಟೇಜ್‌ಗಳ ಗೋಡೆಗಳನ್ನು ಸಂಪೂರ್ಣವಾಗಿ ಒಡೆದು ಹಾಕಿ ನೆಲಸಮಗೊಳಿಸಿದೆ.

ಕೊಠಡಿಗಳಲ್ಲಿದ್ದ ಎರಡು ಏರ್ ಕಂಡಿಷನರ್‌ಗಳನ್ನು (AC) ಕಳವು ಮಾಡಲಾಗಿದೆ. ಬಾತ್‌ರೂಮ್‌ಗಳ ಟೈಲ್ಸ್‌ಗಳು, ಕಮೋಡ್‌ಗಳು, ಶವರ್, ವಾಶ್‌ಬೇಸಿನ್, ಕನ್ನಡಿಗಳು, ಬಾಗಿಲುಗಳು ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ಕಟುಕತನದಿಂದ ಒಡೆದು ಚೂರುಚೂರು ಮಾಡಲಾಗಿದೆ. ಕಟ್ಟಡದ ಅವಶೇಷಗಳು ಆವರಣದಾದ್ಯಂತ ಚದುರಿಕೊಂಡಿದ್ದು, ಬರೋಬ್ಬರಿ ₹20,00,000/- (ಇಪ್ಪತ್ತು ಲಕ್ಷ ರೂಪಾಯಿ) ಆರ್ಥಿಕ ನಷ್ಟ ಸಂಭವಿಸಿದೆ.

ತಮ್ಮ ಕೃತ್ಯ ಮತ್ತು ಗುರುತು ಸಿಸಿಟಿವಿಯಲ್ಲಿ ಸೆರೆಯಾಗಬಾರದು ಎನ್ನುವ ದುರುದ್ದೇಶದಿಂದ ಹಾಗೂ ಸಾಕ್ಷ್ಯ ನಾಶಪಡಿಸಲು ದುಷ್ಕರ್ಮಿಗಳು ಹೋಂಸ್ಟೇನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನೂ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಪ್ರಮುಖ ಶಂಕಿತರೆಂದು ಈ ಕೆಳಗಿನ ವ್ಯಕ್ತಿಗಳನ್ನು ದೂರಿನಲ್ಲಿ ಹೆಸರಿಸಲಾಗಿದೆ: ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ: ಕಾಪು ಪೊಲೀಸರು ಸ್ಥಳ ಮಹಜರು ನಡೆಸಿ, ಶಂಕಿತರ ಬಂಧನಕ್ಕೆ ಬಲೆ ಬೀಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *