Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರೈಲು ಪ್ರಯಾಣಿಕರಿಗೆ ಮಹತ್ವದ ಸೂಚನೆ: ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಬಂದ್!

Spread the love

ನವದೆಹಲಿ: ರೈಲಿನಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ರೈಲ್ವೆ ಮಂಡಳಿ (Railway Board) ರಾತ್ರಿ 11 ರಿಂದ ಬೆಳಗ್ಗೆ 5ರವರೆಗೆ ರೈಲುಗಳಲ್ಲಿನ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ನ್ನು (Train Charging Points) ಬಂದ್‌ ಮಾಡಲು ನಿರ್ದೇಶಿಸಿದೆ. ಇಲಾಖೆ ವ್ಯಾಪ್ತಿಯ ಎಲ್ಲಾ ವಲಯಗಳಿಗೂ ಈ ಕ್ರಮ ಜಾರಿಗೊಳಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಚಾರ್ಜಿಂಗ್ ಪಾಯಿಂಟ್‌ ಯಾಕೆ ಬಂದ್‌?
ಆಗ್ನೇಯ ರೈಲ್ವೆ ವಲಯ ವ್ಯಾಪ್ತಿಯ ಮುಂಬೈ ಸ್ಥಳೀಯ ರೈಲಿನಲ್ಲಿ ಇತ್ತೀಚೆಗೆ ಮೊಬೈಲ್ ಚಾರ್ಜ್ ಮಾಡುವಾಗ ಪ್ರಯಾಣಿಕನ ಪವರ್ ಬ್ಯಾಂಕ್ ಸ್ಫೋಟಗೊಂಡಿತ್ತು. ಅಷ್ಟು ಮಾತ್ರವಲ್ಲದೇ ಇಡೀ ಬೋಗಿಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಈ ರೀತಿಯ ಘಟನೆಗಳಿಂದ ಇಡೀ ರೈಲಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಗೆ ಈ ಆದೇಶ ಹೊರಡಿಸಲಾಗಿದೆ.ಅಕ್ಟೋಬರ್ 26 ರಂದು ಎಲ್ಲ ವಲಯಗಳಿಗೂ ಇಲಾಖೆ ಪತ್ರದ ಮೂಲಕ ಆದೇಶದ ಪ್ರತಿ ರವಾನಿಸಿತ್ತು. ಈ ನಿಯಮದಿಂದ ಯಾವುದೇ ವಿನಾಯಿತಿಗಳಿಲ್ಲ ಎಂದು ಸಹ ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಅಂದಿನ ಮೊಬೈಲ್ ಸ್ಪೋಟ ಘಟನೆಯಲ್ಲಿ ನಿಗದಿತ ಸಮಯದಲ್ಲಿ ಚಾರ್ಜಿಂಗ್ ಪಾಯಿಂಟ್ ಆಫ್ ಮಾಡಲು ಮರೆತಿದ್ದಕ್ಕಾಗಿ ಘಟನೆ ಸಂಭವಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಪಾಸಣೆಗೆ ಸೂಚನೆ
ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ಈ ಆರು ಗಂಟೆಗಳ ಅವಧಿಯಲ್ಲಿ ಎಲ್ಲ ರೈಲುಗಳ ಬೋಗಿಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳು ಸ್ವಿಚ್ ಆಫ್ ಆಗಿದ್ದನ್ನು ಖಚಿತಪಡಿಸಿಕೊಳ್ಳಬೇಕು. ಈ ಕುರಿತು ನಿರಂತರವಾಗಿ ಮೇಲ್ವಿಚಾರಣೆಗೆ ಸೂಚನೆ ನೀಡಲಾಗಿದೆ.ಆಗಾಗ ರೈಲು ಬೋಗಿಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಆಫ್ ಆಗಿದ್ದರ ಕುರಿತು ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ಅನಿರೀಕ್ಷಿತ ತಪಾಸಣೆ ನಡೆಸಲೇಬೇಕು. ಪ್ರಯಾಣಿಕರಿಗಾಗಿ ಈ ಸುರಕ್ಷತಾ ಕ್ರಮವನ್ನು ಅನುಷ್ಠಾನಗೊಳಿಸಬೇಕು. ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *