79ನೇ ವಯಸ್ಸಿನಲ್ಲಿ ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟ ಸೋನಿಯಾ ಗಾಂಧಿ!

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಹಾಗೂ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ(Sonia Gandhi) ಅವರು ಗುರುವಾರ ಅಧಿಕೃತವಾಗಿ ಇನ್ಸ್ಟಾಗ್ರಾಮ್ (Instagram) ಸಾಮಾಜಿಕ ಜಾಲತಾಣಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ತಮ್ಮ ಮೊದಲ ಪೋಸ್ಟ್ನಲ್ಲೇ ಅವರು, ಶೀಘ್ರದಲ್ಲೇ ಪ್ರಕಟವಾಗಲಿರುವ ತಮ್ಮ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಕೃತಿಯ ಮುಖಪುಟವನ್ನು ಹಂಚಿಕೊಳ್ಳುವ ಮೂಲಕ ಓದುಗರಲ್ಲಿ ಕುತೂಹಲ ಮೂಡಿಸಿದ್ದಾರೆ.
79 ವರ್ಷದ ಸೋನಿಯಾ ಗಾಂಧಿ ತಮ್ಮ ಮೊದಲ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, “ಎಲ್ಲರಿಗೂ ನಮಸ್ಕಾರ, ನನ್ನ ಆತ್ಮಚರಿತ್ರೆಯಾದ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯ ಮೊದಲ ನೋಟವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನಾನು ನಿಜಕ್ಕೂ ಧನ್ಯಳಾಗಿದ್ದೇನೆ. ಇದು ಪ್ರೀತಿ, ಕರ್ತವ್ಯ, ನಷ್ಟ ಹಾಗೂ ಬದುಕಿನಲ್ಲಿ ನಮಗೊಂದು ಸ್ಥಾನವನ್ನು ಕಂಡುಕೊಳ್ಳುವ ಪಯಣದ ಕಥೆಯಾಗಿದೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಎದುರುನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.ಈ ಕೃತಿಯಲ್ಲಿ ಇಟಲಿಯಲ್ಲಿ(Italy) ಕಳೆದ ಸೋನಿಯಾ ಅವರ ಆರಂಭಿಕ ಬಾಲ್ಯದ ದಿನಗಳು, 1965ರಲ್ಲಿ ಕೇಂಬ್ರಿಡ್ಜ್ನಲ್ಲಿ 19ನೇ ವಯಸ್ಸಿನಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾಗಿ ಪ್ರೀತಿಸಿ 1968ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೋಚಕ ಕ್ಷಣಗಳು ದಾಖಲಾಗಿವೆ. ಇದರೊಂದಿಗೆ ತಮ್ಮ ಅತ್ತೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪತಿ ರಾಜೀವ್ ಗಾಂಧಿ ಅವರ ಹತ್ಯೆಯ ಕರಾಳ ದಿನಗಳು, ನೆಹರೂ-ಗಾಂಧಿ ಕುಟುಂಬದ ಸೊಸೆಯಾಗಿ ಭಾರತದಲ್ಲಿ ಸವೆಸಿದ ಬದುಕು ಮತ್ತು ಕಾಂಗ್ರೆಸ್ನ ಅತ್ಯಂತ ದೀರ್ಘಾವಧಿಯ ಅಧ್ಯಕ್ಷೆಯಾಗಿ ತಮ್ಮ ರಾಜಕೀಯ ಹೆಜ್ಜೆಗುರುತುಗಳನ್ನು ಈ ಪುಸ್ತಕದಲ್ಲಿ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಕೃತಿಯಲ್ಲಿ ಇಟಲಿಯಲ್ಲಿ(Italy) ಕಳೆದ ಸೋನಿಯಾ ಅವರ ಆರಂಭಿಕ ಬಾಲ್ಯದ ದಿನಗಳು, 1965ರಲ್ಲಿ ಕೇಂಬ್ರಿಡ್ಜ್ನಲ್ಲಿ 19ನೇ ವಯಸ್ಸಿನಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾಗಿ ಪ್ರೀತಿಸಿ 1968ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೋಚಕ ಕ್ಷಣಗಳು ದಾಖಲಾಗಿವೆ. ಇದರೊಂದಿಗೆ ತಮ್ಮ ಅತ್ತೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪತಿ ರಾಜೀವ್ ಗಾಂಧಿ ಅವರ ಹತ್ಯೆಯ ಕರಾಳ ದಿನಗಳು, ನೆಹರೂ-ಗಾಂಧಿ ಕುಟುಂಬದ ಸೊಸೆಯಾಗಿ ಭಾರತದಲ್ಲಿ ಸವೆಸಿದ ಬದುಕು ಮತ್ತು ಕಾಂಗ್ರೆಸ್ನ ಅತ್ಯಂತ ದೀರ್ಘಾವಧಿಯ ಅಧ್ಯಕ್ಷೆಯಾಗಿ ತಮ್ಮ ರಾಜಕೀಯ ಹೆಜ್ಜೆಗುರುತುಗಳನ್ನು ಈ ಪುಸ್ತಕದಲ್ಲಿ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ ರಾಜೀವ್ ಗಾಂಧಿ ಅವರ ಜನ್ಮದಿನದ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕೃತಿಯ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡು, “ಸದಾ ಏಕಾಂತ ಬಯಸುವ ನನ್ನ ತಾಯಿ ತಮ್ಮ ಸುಂದರ ಕಥೆಯನ್ನು ಜಗತ್ತಿಗೆ ಹೇಳುತ್ತಿರುವುದು ಹೆಮ್ಮೆಯ ವಿಚಾರ,” ಎಂದು ಸಂತಸ ವ್ಯಕ್ತಪಡಿಸಿದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಆಲ್ಫ್ರೆಡ್ ಎ ನಾಫ್ (Alfred A Knopf) ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ಆದರೆ ಭಾರತದಲ್ಲಿ ಇದರ ಮುದ್ರಣದ ವಿಚಾರವಾಗಿ ಆರಂಭದಲ್ಲಿ ವಿವಾದ ಉಂಟಾಗಿತ್ತು. ಕರಡು ತಿದ್ದುಪಡಿ ವೇಳೆ ಪ್ರಕಾಶನ ಸಂಸ್ಥೆಯಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ಮತ್ತು ಲೇಖಕರ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಪೆಂಗ್ವಿನ್ ಒಪ್ಪಂದದಿಂದ ಹಿಂದೆ ಸರಿದಿತ್ತು.
ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಹಾಗೂ ಭಾರತದ ಗಡಿ ಪ್ರದೇಶಗಳ ಮೇಲಿನ ಚೀನಾದ ಆಕ್ರಮಣಕ್ಕೆ ಸಂಬಂಧಿಸಿದ ಅಂಶಗಳನ್ನು ತೆಗೆದುಹಾಕಲು ರಾಜಕೀಯ ಒತ್ತಡ ಹೇರಲಾಗಿತ್ತು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆದರೆ ಪೆಂಗ್ವಿನ್ ಸಂಸ್ಥೆ ಬಾಹ್ಯ ಒತ್ತಡದ ಆರೋಪವನ್ನು ನಿರಾಕರಿಸಿತ್ತು. ಅಂತಿಮವಾಗಿ ಹಾರ್ಪರ್ಕಾಲಿನ್ಸ್ ಇಂಡಿಯಾ (HarperCollins India) ಸಂಸ್ಥೆಯು ಭಾರತೀಯ ಆವೃತ್ತಿಯನ್ನು ಪ್ರಕಟಿಸಲು ಮುಂದಾಗಿದೆ.
