Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಧಾನಸೌಧಕ್ಕೆ ಬಾಂಬ್ ಇಟ್ಟಂತೆ ಎಐ ವಿಡಿಯೋ ಎಡಿಟ್: ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹ!

Spread the love

ಬೆಂಗಳೂರು: ವಿಧಾನಸೌಧಕ್ಕೆ (Vidhana Soudha) ಬಾಂಬ್ ಇಟ್ಟು ಉಡಾಯಿಸಿದಂತೆ ಎಐ (AI Video) ಬಳಸಿ ಎಡಿಟ್ ಮಾಡಿದ ವೀಡಿಯೊವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆಗಿರುವ ಈ ವೀಡಿಯೊದಲ್ಲಿ ಕಿಡಿಗೇಡಿ ಯುವಕ ತನ್ನನ್ನು ಭಯೋತ್ಪಾದಕನಂತೆ ಬಿಂಬಿಸಿಕೊಂಡಿದ್ದು, ದಸರಾ ವೇಳೆ ಆತಂಕ ಸೃಷ್ಟಿಸಲು ಯತ್ನಿಸಿದ್ದಾನೆJnx king Hg ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗ ಶೂಟ್ ಮಾಡಿ, ಎಐ ತಂತ್ರಜ್ಞಾನ ಬಳಸಿ ಅದನ್ನು ಬಾಂಬ್ ಬ್ಲಾಸ್ಟ್ ಮಾಡಿದಂತೆ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ.ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಈ ರೀತಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸುವ ವಿಡಿಯೋ ಹಂಚಿಕೊಂಡಿರುವ ಕಿಡಿಗೇಡಿಯ ಉದ್ದೇಶವೇನು ಎಂಬ ಬಗ್ಗೆ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಅತ್ಯುನ್ನತ ಭದ್ರತಾ ವಲಯವಾದ ವಿಧಾನಸೌಧಕ್ಕೆ ಈ ರೀತಿ ಬೆದರಿಕೆ ಒಡ್ಡುವ ವಿಡಿಯೋ ಪ್ರಸಾರ ಮಾಡಿರುವ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *