ಕ್ಲಾಡ್ AI ನೆರವಿನಿಂದ ನೂತನ ಕಿಣ್ವ ವ್ಯವಸ್ಥೆ ಪತ್ತೆ: ಜೈವಿಕ ಸಂಶೋಧನಾ ರಂಗದಲ್ಲಿ ಆಂಥೋಪಿಕ್ ಕ್ರಾಂತಿಕಾರಿ ಮೈಲಿಗಲ್ಲು!

ನೂತನ ಕಿಣ್ವ ವ್ಯವಸ್ಥೆಯನ್ನು ಕಂಡುಹಿಡಿಯಲು ಸಹಾಯ ಮಾಡಿರುವುದು ಕೃತಕ ಬುದ್ಧಿಮತ್ತೆ ಮತ್ತು ಜೀವವಿಜ್ಞಾನ ಕ್ಷೇತ್ರಗಳಿಗೆ ಮಹತ್ವದ ಮೈಲಿಗಲ್ಲು ಎನ್ನಬಹುದು.
ಆಂಥೋಪಿಕ್ ಬುಧವಾರ ತನ್ನ Claude ಮಾಡಲ್ ಜೇನ್ ಎಡಿಟಿಂಗ್ ತಂತ್ರಜ್ಞಾನವಾದ ‘ಕ್ರಿಸ್ಟರ್ (CRISPR)ನ ಕಾರ್ಯವಿಧಾನಗಳನ್ನು ಹೋಲುವ ಗುಣಲಕ್ಷಣಗಳನ್ನು ಹೊಂದಿರುವ ಒಂದು ನೂತನ ಕಿಣ್ವ ವ್ಯವಸ್ಥೆಯನ್ನು (enzyme system) ಕಂಡುಹಿಡಿಯಲು ಸಹಾಯ ಮಾಡಿದೆ ಎಂದು ತಿಳಿಸಿದೆ.
AI ಸ್ಪಾರ್ಟಪ್ ಅಂಥೋಪಿಕ್ಷ ಜೈವಿಕ ಸಂಶೋಧನಾ ಪ್ರಯತ್ನಗಳ ಮೊದಲ ಫಲಿತಾಂಶ ಇದಾಗಿದೆ. ಅಂದರೆ, ವಿಜ್ಞಾನದಲ್ಲಿ ಅತ್ಯಂತ ಕ್ರಾಂತಿಕಾರಕ ಎನಿಸಿಕೊಂಡಿರುವ CRISPR ಎಂಬ ಜೀನ್ ಎಡಿಟಿಂಗ್ (ಡಿಎನ್ಎ ಬದಲಿಸುವ ತಂತ್ರಜ್ಞಾನದಂತೆ ಕೆಲಸ ಮಾಡುವ ಈವರೆಗೆ ಜಗತ್ತಿಗೇ ತಿಳಿಯದಿದ್ದ ಹೊಸ ಕಿಣ್ವ ವ್ಯವಸ್ಥೆಯನ್ನು ಹತ್ತೆ ಹಚ್ಚಲು ಕೌಡ್ ನೆರವಾಗಿದೆ.
ಕೃತಕ ಬುದ್ಧಿಮತ್ತೆ ಮತ್ತು ಜೀವವಿಜ್ಞಾನ ಕ್ಷೇತ್ರಗಳಿಗೆ ಇದೊಂದು ಮಹತ್ವದ ಮೈಲಿಗಲ್ಲನ್ನು ವಿವರಿಸುತ್ತದೆ.
ಅಂಥೋಪಿಕ್ ಸ್ಯಾನ್ ಫ್ರಾನ್ಸಿಸ್ಕೋ ಬೇಯಲ್ಲಿ ಒಂದು ವೆಟ್ ಲ್ಯಾಬ್ ಅನ್ನು ಸ್ಥಾಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಕೆಲವು ದಿನಗಳಲ್ಲಿ ಈ ಸಂಶೋಧನೆ ಬಂದಿದೆ. ಏಕೆಂದರೆ ಕಂಪನಿಯು ತನ್ನ ಮಹತ್ವಾಕಾಂಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಕೆಲಸಕ್ಕೆ ಸೀಮಿತವಾಗಿರಿಸದೆ, ಜೀವ ವಿಜ್ಞಾನ ಮತ್ತು ಔಷಧ-ಸಂಬಂಧಿತ ಸಂಶೋಧನೆಗೂ ವಿಸ್ತರಿಸಿಕೊಂಡಿದೆ.
ಸಾಮಾನ್ಯವಾಗಿ AI ಕಂಪನಿಗಳು ಕೇವಲ ಕಂಪ್ಯೂಟರ್ಗಳು ಮತ್ತು ಸಾಪ್ಟರ್ಗಳನ್ನು ಬಳಸಿ ಕೆಲಸ ಮಾಡುವುದಕ್ಕೆ ಡ್ರೈ ಲ್ಯಾಬ್ ಎನ್ನುತ್ತಾರೆ. ವೆಟ್ ಲ್ಯಾಬ್ ಎಂದರೆ ರಾಸಾಯನಿಕಗಳು, ದ್ರವಗಳು, ಜೀವಕೋಶಗಳು ಮತ್ತು ಜೈವಿಕ ಮಾದರಿಗಳನ್ನು ಪ್ರತ್ಯಕ್ಷವಾಗಿ ಪರೀಕ್ಷಿಸುವ ನಿಜವಾದ ವೈಜ್ಞಾನಿಕ ಪ್ರಯೋಗಾಲಯವಾಗಿದೆ. ಕಂಪನಿ ಜೀವ ವಿಜ್ಞಾನ ಮತ್ತು ಹೊಸ ಔಷಧಿ ಕಂಡು ಹಿಡಿಯುವ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಲು ಯೋಜಿಸುತ್ತಿದೆ.
Claude ದೊಡ್ಡ ಪ್ರಮಾಣದ ಡಿಎನ್ಎ ಡೇಟಾಬೇಸ್ಕಳನ್ನು ವಿಶ್ಲೇಷಿಸಿದೆ ಮತ್ತು ಆರ್ಎನ್ ಅನ್ನು ಡಿಎನ್ಎ ಆಗಿ ನಕಲು ಮಾಡುವ ಕಿಣ್ಣವಾದ ರಿವರ್ಸ್ ಟ್ರಾನ್ಸ್ ಕ್ರಿಸ್ಪೇಸ್ ( Reverse Transcriptase) ಸುತ್ತ ನಿರ್ಮಾಣವಾಗಿರುವ ಒಂದು ಅಸಾಮಾನ್ಯ ವ್ಯವಸ್ಥೆಯನ್ನು ಪತ್ತೆ ಹಚ್ಚಿದೆ ಎಂದು ಅಂಥೋಪಿಕ್ ತಿಳಿಸಿದೆ. ಈ ವ್ಯವಸ್ಥೆಗೆ ಆಂಥೋಪಿಕ್ ಅರೇ ಅಸೋಸಿಯೇಟೆಡ್ ರಿವರ್ಸ್ ಟ್ರಾನ್ಸ್ಕ್ರಿಪ್ಪೇಸಸ್’ ಅಥವಾ ‘ಆರ್ಟ್’ (ART) ಎಂದು ಹೆಸರಿಟ್ಟಿದೆ. ART ವ್ಯವಸ್ಥೆಯು CRISPR ನಲ್ಲಿ ಕಂಡುಬರುವ ಮಾದರಿಗಳನ್ನು ಹೋಲುವ ಪುನರಾವರ್ತಿತ ಡಿಎನ್ಎ ಸೀಕ್ವೆನ್ಸಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಅಂದರೆ Claude Al ಕೋಟ್ಯಂತರ ಜೀವಿಗಳ ಅಗಾಧವಾದ ಡಿಎನ್ಎ ಮಾಹಿತಿಗಳನ್ನು ಅತ್ಯಂತ ವೇಗವಾಗಿ ಪರಿಶೀಲಿಸಿದೆ. ಮಾನವ ವಿಜ್ಞಾನಿಗಳಿಗೆ ಇಷ್ಟು ದೊಡ್ಡ ಪ್ರಮಾಣದ ಡೇಟಾವನ್ನು ಮ್ಯಾನುವಲ್ ಆಗಿ ಪರಿಶೀಲಿಸುವುದು ಅಸಾಧ್ಯವಾಗಿತ್ತು. ಸಾಮಾನ್ಯವಾಗಿ ಡಿಎನ್ಎಯಿಂದ ಆರ್ಎನ್ಎಗೆ ಸಂದೇಶ ರವಾನೆಯಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ವಿರುದ್ಧ ಪ್ರಕ್ರಿಯೆ ನಡೆಯುತ್ತದೆ. ಅರ್ಎನ್ಎಯಿಂದ ಡಿಎನ್ಎ ನಕಲು ಮಾಡಲಾಗುತ್ತದೆ. ಇಂತಹ ವಿಶಿಷ್ಟ ಕೆಲಸ ಮಾಡುವ ಕಿಣ್ವಕ್ಕೆರಿವರ್ಸ್ ಟ್ರಾನ್ಸ್ ಕ್ರಿಪ್ಪೇಸ್ ಎನ್ನಲಾಗುತ್ತದೆ. ಇದರ ಸುತ್ತವೇ ಈ ಹೊಸ ವ್ಯವಸ್ಥೆ ಕೆಲಸ ಮಾಡುತ್ತದೆ.
ಹಿಂದಿನ ಅಧ್ಯಯನಗಳಲ್ಲಿ ಆಧಾರವಾಗಿರುವ ‘ರಿವರ್ಸ್ ಟ್ರಾನ್ಸ್ ಕ್ರಿಸ್ಪೇಸ್ ಕಿಣ್ವವನ್ನು ಗುರುತಿಸಲಾಗಿದ್ದರೂ, ಒಂದು ಭಾಗವಾಗಿ ಅವರಿಗೆ ತಿಳಿದಿತ್ತು. ಇದೀಗ ಕೋಡಿಂಗ್ ರಹಿತ ಡಿಎನ್ಎ ಸೀಕ್ವೆನ್ಸಳ ಒಂದು ಸಮೂಹ ಮತ್ತು ಅಜ್ಞಾತ ಕಾರ್ಯವನ್ನು ಹೊಂದಿರುವ ಒಂದು ಹೆಚ್ಚುವರಿ ಪ್ರೊಟೀನ್ ಸೇರಿದಂತೆ ಒಟ್ಟು ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯಗಳನ್ನು ಮೊಟ್ಟಮೊದಲ ಬಾರಿಗೆ Claude ಮಾಡೆಲ್ ಗುರುತಿಸಿರುವುದಾಗಿ ಕಂಪನಿ ಹೇಳಿದೆ.
ಅಂದರೆ Claude ಒಂದು ಕಿಣ್ವವನ್ನು ಮಾತ್ರ ನೋಡದೆ, ಅದರ ಸುತ್ತಲೂ ಇದ್ದ ಒಟ್ಟು ದೊಡ್ಡ ವ್ಯವಸ್ಥೆಯನ್ನು ಪತ್ತೆ ಹಚ್ಚಿದೆ. ಮಾನವ ವಿಜ್ಞಾನಿಗಳ ಕಣ್ಣಿಗೆ ತಪ್ಪಿ ಹೋಗಿದ್ದ ಜೀನ್ಗಳ ನಡುವಿನ ಸೂಕ್ಷ್ಮಸಂಬಂಧಗಳನ್ನು ಮತ್ತು ಸಂಪೂರ್ಣ ವಿನ್ಯಾಸವನ್ನು AI ಮಾದರಿಯು ಅತ್ಯಂತ ನಿಖರವಾಗಿ ಗುರುತಿಸಿದೆ.
