Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ರೋಹಿತ್, ಕೊಹ್ಲಿ ವಾಪಸ್!

Spread the love

ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. 15 ಸದಸ್ಯರ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎರಡು ತಿಂಗಳ ಬಳಿಕ ಮರಳಿದ್ದಾರೆ. ಶುಭಮನ್ ಗಿಲ್ ನಾಯಕನಾಗಿ ಮುಂದುವರಿದಿದ್ದಾರೆ. ಕೆಎಲ್ ರಾಹುಲ್ ಉಪನಾಯಕನಾಗಿದ್ದಾರೆ.
ಜುಲೈನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವೇಳೆ ರೋಹಿತ್ ಮತ್ತು ಕೊಹ್ಲಿ ಅವರ ಏಕದಿನ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೂ, ಇಬ್ಬರೂ ವೆಸ್ಟ್ ಇಂಡೀಸ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ರೋಹಿತ್ 11 ಮತ್ತು 26 ರನ್ ಗಳಿಸಿದ್ದರು. ಲಾರ್ಡ್ಸ್ ನಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ 388 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಪರ 137 ರನ್ ಗಳಿಸಿದ್ದರು. ಆದರೆ ಭಾರತ ಆ ಪಂದ್ಯದಲ್ಲಿ ಸೋಲು ಕಂಡಿತ್ತು.
ನಬಿ, ನಮನ್‌ ಧೀರ್ ಗೆ ಮೊದಲ ಅವಕಾಶ
ಉದಯೋನ್ಮುಖ ಆಕ್ರೌಂಡರ್ ನಮನ್ ಧೀರ್ ಮತ್ತು ವೇಗದ ಬೌಲರ್ ಆಕಿಬ್ ನಬಿ ಅವರಿಗೆ ಏಕದಿನ ತಂಡದಲ್ಲಿ ಮೊದಲ ಬಾರಿ ಅವಕಾಶ ನೀಡಲಾಗಿದೆ.
ಏಷ್ಯನ್ ಗೇಮ್ಸ್ ತಂಡದಲ್ಲಿದ್ದ ನಿತೀಶ್ ಕುಮಾರ್ ರೆಡ್ಡಿ ಅವರನ್ನೂ ಏಕದಿನ ತಂಡಕ್ಕೆ ಸೇರಿಸಲಾಗಿದೆ. ಅನುಭವಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೂ ಸ್ಥಾನ ನೀಡಲಾಗಿದೆ.

ಪಕ್ಕೆಲುಬಿನ ಸ್ನಾಯು ಸೆಳೆತದಿಂದ ಬಳಲುತ್ತಿರುವ ವರುಣ್ ಚಕ್ರವರ್ತಿ ಅವರನ್ನು ಏಷ್ಯನ್ ಗೇಮ್ಸ್ ಹಾಗೂ ಜಪಾನ್ ವಿರುದ್ಧದ ಏಕೈಕ T20 ಪಂದ್ಯದಿಂದ ಕೈಬಿಡಲಾಗಿದೆ. ಅವರ ಬದಲಿಗೆ ವಿಪ್ರಜ್ ನಿಗಮ್ ಅವರನ್ನು ಆಯ್ಕೆ ಮಾಡಲಾಗಿದೆ.
ಗಂಭೀರ್ ಏಕದಿನ ತಂಡದ ಉಸ್ತುವಾರಿ
ವೆಸ್ಟ್ ಇಂಡೀಸ್ ಸರಣಿಯ ವೇಳೆಯೇ ಭಾರತದ ಹಲವು ಪ್ರಮುಖ ‘ವೈಟ್-ಬಾಲ್’ ಆಟಗಾರರು ಏಷ್ಯನ್‌ ಗೇಮ್ಸ್ T20 ಕ್ರಿಕೆಟ್ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ತಂಡದ ಸಂಯೋಜನೆಯಲ್ಲಿ ಕೆಲವು ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಏಕದಿನ ತಂಡದ ಉಸ್ತುವಾರಿ ವಹಿಸಲಿದ್ದಾರೆ. BCCIಯ ‘ಸೆಂಟರ್ ಆಫ್ ಎಕ್ಸಲೆನ್ಸ್ (COE) ಮುಖ್ಯಸ್ಥ VVS ಲಕ್ಷ್ಮಣ್ ಅವರು 120 ತಂಡದೊಂದಿಗೆ ಜಪಾನ್ಗ ತೆರಳಲಿದ್ದಾರೆ.

ಮೂರು ಏಕದಿನ ಪಂದ್ಯ
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳು ಸೆಪ್ಟೆಂಬರ್ 27ರಿಂದ ನಡೆಯಲಿವೆ.
ಸೆಪ್ಟೆಂಬರ್ 27: ಮೊದಲ ODI – ತಿರುವನಂತಪುರ, ಮಧ್ಯಾಹ್ನ 2
ಸೆಪ್ಟೆಂಬರ್ 30: ಎರಡನೇ ODI ಗುವಾಹಟಿ, ಮಧ್ಯಾಹ್ನ 2
ಅಕ್ಟೋಬರ್ 3: ಮೂರನೇ ODI – ನ್ಯೂ ಚಂಡೀಗಢ, ಮಧ್ಯಾಹ್ನ 2
ಭಾರತದ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ (ಉಪನಾಯಕ), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿದ್ ಕೃಷ್ಣ ಗುರ್ನೂರ್ ಬ್ರಾರ್, ಮುಹಮ್ಮದ್ ಸಿರಾಜ್, ಆಕಿಬ್ ನಬಿ, ಯಶಸ್ವಿ ಜೈಸ್ವಾಲ್, ನಮನ್ ಧೀರ್.

T20 ತಂಡದಲ್ಲಿ ಶ್ರೇಯಸ್ ನಾಯಕ
ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ T20 ಸರಣಿಗೆ ಶ್ರೇಯಸ್ ಅಯ್ಯ‌ರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ತಿಲಕ್ ವರ್ಮಾ ಉಪನಾಯಕರಾಗಿದ್ದಾರೆ.
ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಟ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಟೋಯಿ, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್.
ಐದು T20 ಪಂದ್ಯಗಳ ವೇಳಾಪಟ್ಟಿ
ಅಕ್ಟೋಬ‌ರ್ 6: ಮೊದಲ T201 – ಲಕ್ಷ್ಮೀ, ರಾತ್ರಿ 7
ಅಕ್ಟೋಬರ್ 9: ಎರಡನೇ 1201 – ರಾಂಚಿ, ರಾತ್ರಿ 7
ಅಕ್ಟೋಬರ್ 11: ಮೂರನೇ T201 – ಇಂದೋರ್, ರಾತ್ರಿ 7
ಅಕ್ಟೋಬರ್ 14: ನಾಲ್ಕನೇ T201 – ಹೈದರಾಬಾದ್, ರಾತ್ರಿ 7
ಅಕ್ಟೋಬರ್ 17: ಐದನೇ T201 ಬೆಂಗಳೂರು, ರಾತ್ರಿ 7

ಪಂತ್ ಗೆ ಇರಾನಿ ಕಪ್ ನಾಯಕತ್ವ
ಭಾರತದ ಏಕದಿನ ಮತ್ತು T20 ತಂಡಗಳಲ್ಲಿ ಸ್ಥಾನ ಪಡೆಯದ ರಿಷಭ್ ಪಂತ್ ಅವರು ಇರಾನಿ ಕಪ್ನಲ್ಲಿ ‘ರೆಸ್ಟ್ ಆಫ್ ಇಂಡಿಯಾ’ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರನ್ನೂ ತಂಡಗಳಿಗೆ ಆಯ್ಕೆ ಮಾಡಲಾಗಿಲ್ಲ. ಫಿಟ್ ನೆಸ್ ಅನುಮೋದನೆಗೆ ಒಳಪಟ್ಟು, ಅಕ್ಟೋಬರ್ 6, 9 ಮತ್ತು 11ರಂದು ಪುದುಚೇರಿಯಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ ನಡೆಯಲಿರುವ ಪಂದ್ಯಗಳ ಮೂಲಕ ಅವರು ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳುವ ನಿರೀಕ್ಷೆಯಿದೆ.
ಇರಾನಿ ಕಪ್ ಗೆ ‘ರೆಸ್ಟ್ ಆಫ್ ಇಂಡಿಯಾ’ ತಂಡ
ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್ರ್, ಸನತ್ ಸಾಂಗ್ವಾನ್, ಶಿಖರ್ ಮೋಹನ್, ಸುದೀಪ್ ಘರಾಮಿ, ಸರ್ಫರಾಜ್ ಖಾನ್ (ಉಪನಾಯಕ), ಸ್ಮರಣ್ ರವಿಚಂದ್ರನ್, ಮಾನವ್ ಸುತಾರ್, ಸರನ್ ಜೈನ್, ಆಕಾಶ್ ದೀಪ್, ಮುಖೇಶ್ ಕುಮಾರ್, ಮುಖೇಶ್ ಚೌಧರಿ, ಆರ್ಯನ್ ಜುಯಲ್ (ವಿಕೆಟೀಪರ್), ಆರ್ಯನ್ ಪಾಂಡೆ, ಅನುಕುಲ್ ರಾಯ್, ಆಯುಷ್ ದೋಸೆಜಾ.


Spread the love
Share:

administrator

Leave a Reply

Your email address will not be published. Required fields are marked *