Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದುಬೈ: ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಮಹಿಳಾ ಕ್ರಿಕೆಟ್ ತಂಡ!

Spread the love

ದುಬೈ: ಶಫಾಲಿ ವರ್ಮಾ ಅವರ ಸೊಗಸಾದ ಅರ್ಧಶತಕ ಹಾಗೂ ಸ್ಪಿನ್ನರ್ ಗಳ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ಗುರುವಾರ ಇಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶವನ್ನು 40 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಸ್ಪಿನ್‌ಗೆ ನೆರವಾಗುತ್ತಿದ್ದ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಗೆ 149 ರನ್ ಗಳಿಸಿತು. ಗುರಿ ಬೆನ್ನತ್ತಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ಗೆ 109 ರನ್ ಗಳಿಸಲಷ್ಟೇ ಶಕ್ತವಾಯಿತು.ಬಾಂಗ್ಲಾದೇಶದ ಫೀಲ್ಡರ್‌ಯಗಳು ನೀಡಿದ ಜೀವದಾನಗಳ ಸಂಪೂರ್ಣ ಲಾಭ ಪಡೆದ ಶಫಾಲಿ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 64 ರನ್ ಗಳಿಸಿದರು. ಅವರನ್ನು ಮೂರು ಬಾರಿ ಕ್ಯಾಚ್ ಕೈಬಿಡಲಾಗಿತ್ತು. ಅಲ್ಲದೆ, 35 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಸಂದರ್ಭದಲ್ಲಿ ಸುಲಭದ ರನ್‌ಔಟ್ ಅವಕಾಶದಿಂದಲೂ ಅವರು ಪಾರಾದರು. ಚೆಂಡು ಪಿಚ್ ನಲ್ಲಿ ಹಿಡಿತ ಪಡೆದು ತಿರುವು ಪಡೆಯುತ್ತಿದ್ದರೂ ಶಫಾಲಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದರು.
ಉಪನಾಯಕಿ ಸ್ಮೃತಿ ಮಂಧಾನ ಬೇಗನೆ ವಿಕೆಟ್ ಒಪ್ಪಿಸಿದ ಬಳಿಕ ಶಫಾಲಿ ಭಾರತದ ಇನಿಂಗ್ಸ್ ಗೆ ಆಧಾರವಾದರು. ನಾಯಕಿ ಹರ್ಮನ್‌ಪ್ರೀತ್ ಕೌ‌ರ್ 28 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಪ್ರತಿಕಾ ರಾವಲ್ 20 ರನ್ ಗಳಿಸಿದರು. ವಿಕೆಟ್ ಕೀಪರ್ ರಿಚಾ ಘೋಷ್ 16 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 21 ರನ್ ಗಳಿಸಿದರು. ದೀಪ್ತಿ ಶರ್ಮಾ 6 ಎಸೆತಗಳಲ್ಲಿ 13 ರನ್ ಗಳಿಸಿ ಭಾರತದ ಮೊತ್ತವನ್ನು 149ಕ್ಕೆ ಕೊಂಡೊಯ್ದರು.’ಇದು ನಮಗೆ ಬಹಳ ಅರ್ಥಪೂರ್ಣ ಗೆಲುವು. ನಾವು ಮುಂದುವರಿಯಬೇಕಾಗಿತ್ತು. ಹಿಂದಿನ ಕೆಲವು ಪಂದ್ಯಗಳಲ್ಲಿಯೂ ಇದನ್ನು ಮಾಡಲು ಪ್ರಯತ್ನಿಸಿದ್ದೆವು. ಆದರೆ ಇಂದು ಯಶಸ್ವಿಯಾದೆವು. ಅದು ನಿಜವಾಗಿಯೂ ಒಳ್ಳೆಯದೆನಿಸಿತು’ ಎಂದು ಇನಿಂಗ್ಸ್ ವಿರಾಮದ ವೇಳೆ ರಿಚಾ ಹೇಳಿದರು.
‘ಪಿಚ್ ನಿಧಾನವಾಗಿತ್ತು. ಸ್ವಲ್ಪ ತಿರುವೂ ಇತ್ತು. ಹೀಗಾಗಿ ಈ ರೀತಿಯ ಬ್ಯಾಟಿಂಗ್ ಬಹಳ ಮುಖ್ಯವಾಗಿತ್ತು’ ಎಂದರು.
ಚರಣಿಗೆ 50ನೇ ಟಿ20ಐ ವಿಕೆಟ್
ಭಾರತದ ಯುವ ಸ್ಪಿನ್ನರ್ ಶ್ರೀ ಚರಣಿ ಅವರಿಗೂ ಈ ಪಂದ್ಯ ವಿಶೇಷವಾಗಿತ್ತು. ಬಾಂಗ್ಲಾದೇಶದ ಜುಯಿರಿಯಾ ಅವರ ವಿಕೆಟ್ ಪಡೆಯುವ ಮೂಲಕ ಚರಣಿ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ 50 ವಿಕೆಟ್ ಗಳ ಸಾಧನೆ ಮಾಡಿದರು. ಈ ಮೈಲಿಗಲ್ಲು ತಲುಪಿದ ಅತ್ಯಂತ ವೇಗದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಅವರದಾಯಿತು.ಚರಣಿ ತಮ್ಮ 29ನೇ ಟಿ20ಐ ಪಂದ್ಯದಲ್ಲಿ 50ನೇ ವಿಕೆಟ್ ಪಡೆದರು. ಇದರೊಂದಿಗೆ ಈ ಮಾದರಿಯಲ್ಲಿ 50 ವಿಕೆಟ್‌ಗಳನ್ನು ಅತಿ ಕಡಿಮೆ ಪಂದ್ಯಗಳಲ್ಲಿ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅವರು ಜಂಟಿ ಎರಡನೇ ಸ್ಥಾನ ಪಡೆದರು. ಚೀನಾದ ಮೆಂಗ್ಲಿಂಗ್ ಲಿಯು 28 ಪಂದ್ಯಗಳಲ್ಲಿ 50 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ನ್ಯೂಝಿಲೆಂಡ್ ನ ಲೀ ಕ್ಯಾಸ್ಪೆರೆಕ್ ಹಾಗೂ ವೆಸ್ಟ್ ಇಂಡೀಸ್‌ನ ಅನಿಸಾ ಮೊಹಮ್ಮದ್ ಕೂಡ 29 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಮಹಿಳಾ ಟಿ20ಐಗಳಲ್ಲಿ 50 ವಿಕೆಟ್‌ಗಳನ್ನು ವೇಗವಾಗಿ ಪಡೆದವರು
ಇದನ್ನೂ ಓದಿ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಗೆ ಜಸ್‌ಪ್ರೀತ್ ಬುಮ್ರಾ ಲಭ್ಯ
28 ಪಂದ್ಯ – ಮೆಂಗ್ವಿಂಗ್ ಲಿಯು (ಚೀನಾ)
29 ಪಂದ್ಯ – ಲೀ ಕ್ಯಾಸ್ಪೆರೆಕ್ (ನ್ಯೂಜಿಲೆಂಡ್)
29 ಪಂದ್ಯ – ಅನಿಸಾ ಮೊಹಮ್ಮದ್ (ವೆಸ್ಟ್ ಇಂಡೀಸ್
29 ಪಂದ್ಯ – ಶ್ರೀ ಚರಣಿ (ಭಾರತ)
34 ಪಂದ್ಯ – ಸೋಫಿ ಎಕ್ಸೆಸ್ಟೋನ್ (ಇಂಗ್ಲೆಂಡ್
*ಕಿರಿಯರ ಪಟ್ಟಿಯಲ್ಲೂ ಚರಣಿ
22 ವರ್ಷ 37 ದಿನಗಳ ವಯಸ್ಸಿನಲ್ಲಿ 50 ಟಿ20ಐ ವಿಕೆಟ್ ಪಡೆದ ಚರಣಿ, ಈ ಸಾಧನೆ ಮಾಡಿದ ಎರಡನೇ ಅತ್ಯಂತ ಕಿರಿಯ ಭಾರತೀಯ ಆಟಗಾರ್ತಿಯಾದರು. ಭಾರತದ ರಾಧಾ ಯಾದವ್ 20 ವರ್ಷ 334 ದಿನಗಳ ವಯಸ್ಸಿನಲ್ಲಿ 50 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.
ಪೂರ್ಣ ಸದಸ್ಯ ರಾಷ್ಟ್ರಗಳ ಆಟಗಾರ್ತಿಯರನ್ನು ಪರಿಗಣಿಸಿದರೆ, ಇಂಗ್ಲೆಂಡ್‌ನ ಸೋಫಿ ಎಕ್ಸೆಸ್ಟೋನ್ 20 ವರ್ಷ 300 ದಿನಗಳ ವಯಸ್ಸಿನಲ್ಲಿ 50 ವಿಕೆಟ್ ಪಡೆದು ದಾಖಲೆ ಹೊಂದಿದ್ದಾರೆ. ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ 21 ವರ್ಷ 354 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಚರಣಿ 22 ವರ್ಷ 37 ದಿನಗಳಲ್ಲಿ ಸಾಧನೆ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
*ಮಹಿಳಾ ಟಿ20ಐಗಳಲ್ಲಿ 50 ವಿಕೆಟ್ ಪಡೆದ ಅತ್ಯಂತ ಕಿರಿಯ ಆಟಗಾರ್ತಿಯರು
20 ವರ್ಷ 300 ದಿನ – ಸೋಫಿ ಎಕ್ಸೆಸ್ಟೋನ್ (ಇಂಗ್ಲೆಂಡ್)
20 ವರ್ಷ 334 ದಿನ – ರಾದಾ ಯಾದವ್ (ಭಾರತು.21 21 ವರ್ಷ 354 ದಿನ – ಅಮೆಲಿಯಾ ಕೆರ್ (ನ್ಯೂಜಿಲೆಂಡ್
22 ವರ್ಷ 37 ದಿನ – ಶ್ರೀ ಚರಣಿ (ಭಾರತ)
22 ವರ್ಷ 135 ದಿನ – ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್)
22 ವರ್ಷ 187 ದಿನ – ದೀಪ್ತಿ ಶರ್ಮಾ (ಭಾರತ)
ಆರನೇ ಓವರ್ ನಲ್ಲಿ ಚರಣಿ ಎಸೆತದಲ್ಲಿ ಜುಯಿರಿಯಾ 14 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಮುಂದಾದರು. ವಿಕೆಟ್‌ ಕೀಪರ್ ರಿಚಾ ಘೋಷ್ ಕ್ಯಾಚ್ ಪಡೆದರು. ಇದು ಚರಣಿ ಅವರ 50ನೇ ಟಿ20ಐ ವಿಕೆಟ್ ಎನಿಸಿತು.
ಚರಣಿ ಅವರ ಮೈಲಿಗಲ್ಲಿನೊಂದಿಗೆ ಭಾರತದ ಸ್ಪಿನ್ ದಾಳಿಗೂ ಮತ್ತಷ್ಟು ಬಲ ದೊರೆಯಿತು. ಗುರಿ ಬೆನ್ನತ್ತಿದ ಬಾಂಗ್ಲಾದೇಶದ ಬ್ಯಾಟರ್ ಗಳ ಮೇಲೆ ಭಾರತದ ಸ್ಪಿನ್ನರ್ ಗಳು ಪಂದ್ಯದ ಉದ್ದಕ್ಕೂ ಒತ್ತಡ ಹೇರಿದರು. ಪರಿಣಾಮವಾಗಿ ಬಾಂಗ್ಲಾದೇಶ 7 ವಿಕೆಟ್‌ಗೆ 109 ರನ್‌ ಗಳಿಸಲಷ್ಟೇ ಶಕ್ತವಾಯಿತು.
ಏಳು ಬಾರಿ ಚಾಂಪಿಯನ್ ಆಗಿರುವ ಭಾರತ ಇದೀಗ ರವಿವಾರ ನಡೆಯಲಿರುವ ಫೈನಲ್ ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.


Spread the love
Share:

administrator

Leave a Reply

Your email address will not be published. Required fields are marked *