Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕ-ಇರಾನ್ ಸಶಸ್ತ್ರ ಸಂಘರ್ಷ ಉಗ್ರರೂಪ: ಇರಾನ್‌ನ 5 ತೈಲ ಟ್ಯಾಂಕರ್‌ಗಳು ಧ್ವಂಸ, ಅಮೆರಿಕ ನೆಲೆ ಮೇಲೆ ಕ್ಷಿಪಣಿ ದಾಳಿ!

Spread the love

ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವಿನ ಸಶಸ್ತ್ರ ಸಂಘರ್ಷ ಮತ್ತಷ್ಟು ಉಗ್ರರೂಪ ಪಡೆದುಕೊಂಡಿದೆ. ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ, ಪ್ರತೀಕಾರವಾಗಿ ಅಮೆರಿಕದ ಸೇನಾ ಪಡೆಗಳು ಇರಾನ್‌ನ ಐದು ಪ್ರಮುಖ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಒಮಾನ್ ಕೊಲ್ಲಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ (IRGC) ಜೊತೆ ಸಂಪರ್ಕ ಹೊಂದಿದ್ದ 4 ತೈಲ ಟ್ಯಾಂಕರ್‌ಗಳು ಹಾಗೂ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಬಳಿಯಿದ್ದ ಮತ್ತೊಂದು ಟ್ಯಾಂಕರ್ ಮೇಲೆ ದಾಳಿ ನಡೆಸಲಾಗಿದೆ. ಈ ಟ್ಯಾಂಕರ್‌ಗಳು ಐಆರ್‌ಜಿಸಿ ಹಾಗೂ ಅದರ ಪ್ರಾದೇಶಿಕ ಉಗ್ರ ಸಂಘಟನೆಗಳಿಗೆ ಹಣಕಾಸು ಒದಗಿಸುವ ಅಕ್ರಮ ಜಾಲದ ಭಾಗವಾಗಿದ್ದವು ಎಂದು ಅಮೆರಿಕ ಹೇಳಿದೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಜೋರ್ಡಾನ್‌ನಲ್ಲಿರುವ ಅಮೆರಿಕನ್ ಸೇನಾ ನೆಲೆಯತ್ತ 20 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ, ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ 18 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದ್ದು, ಇನ್ನುಳಿದ 2 ಕ್ಷಿಪಣಿಗಳು ಜನವಸತಿ ಇಲ್ಲದ ಪ್ರದೇಶದಲ್ಲಿ ಬಿದ್ದಿವೆ ಎಂದು ಜೋರ್ಡಾನ್ ಸೇನೆ ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಕುವೈತ್ ಮತ್ತು ಬಹ್ರೇನ್ ಬಂದರುಗಳಲ್ಲಿರುವ ಅಮೆರಿಕ ಸಂಪರ್ಕಿತ ತೈಲ ಟ್ಯಾಂಕರ್‌ಗಳ ಸಿಬ್ಬಂದಿ ತಕ್ಷಣ ಹಡಗುಗಳನ್ನು ತೊರೆಯುವಂತೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಅಮೆರಿಕ ದಾಳಿ ನಡೆಸಿದ ಖಾರ್ಗ್ ದ್ವೀಪವು ಇರಾನ್‌ನ ಅತ್ಯಂತ ಪ್ರಮುಖ ತೈಲ ರಫ್ತು ಕೇಂದ್ರವಾಗಿದ್ದು, ದೇಶದ ಒಟ್ಟು ಕಚ್ಚಾ ತೈಲದ ಶೇ. 90 ರಷ್ಟು ಭಾಗ ಈ ದ್ವೀಪದ ಮೂಲಕವೇ ರಫ್ತಾಗುತ್ತದೆ. ಈ ಸಂಘರ್ಷದ ನೇರ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಬಿದ್ದಿದೆ.

ಬುಧವಾರ ಏಷ್ಯನ್ ಮಾರುಕಟ್ಟೆಯಲ್ಲಿ ಇಂಟರ್ನ್ಯಾಷನಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.5 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 99.41 ಡಾಲರ್‌ಗೆ ತಲುಪಿದ್ದರೆ, ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 1.6 ರಷ್ಟು ಏರಿಕೆಯಾಗಿ 94.55 ಡಾಲರ್‌ಗೆ ಜಿಗಿದಿದೆ. ಮತ್ತೊಂದೆಡೆ, ಇರಾನ್ ಬೆಂಬಲಿತ ಯೆಮನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳು ಹಾಗೂ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 73 ಮಂದಿ ಗಾಯಗೊಂಡಿದ್ದು, ತೈಲ ಸಂಸ್ಕರಣಾಗಾರಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ಪಾದನಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, “ಇರಾನ್ ಪ್ರತಿಬಾರಿ ಅಮೆರಿಕದ ನೌಕಾಪಡೆಯ ಹಡಗುಗಳನ್ನು ಗುರಿಯಾಗಿಸಲು ಯತ್ನಿಸಿದಾಗಲೆಲ್ಲಾ, ಅವರು ತಮ್ಮ ತೈಲ ಟ್ಯಾಂಕರ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ 28ರಂದು ಆರಂಭವಾದ ಈ ಯುದ್ಧವು ಇದೀಗ ಜಾಗತಿಕ ಆರ್ಥಿಕತೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ


Spread the love
Share:

administrator

Leave a Reply

Your email address will not be published. Required fields are marked *