Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಡೋಪ್ ಪರೀಕ್ಷೆಯಲ್ಲಿ ವಿಫಲ: ಕಬಡ್ಡಿ ಆಟಗಾರ ಬ್ರಿಜೇಂದ್ರ ಸಿಂಗ್ ಚೌಧರಿ ಬೆಳ್ಳಿ ಪದಕ ಹಿಂಪಡೆದ ITA!”

Spread the love

ಹೊಸದಿಲ್ಲಿ : ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಬೀಚ್ ಗೇಮ್ಸ್ ನಲ್ಲಿ ಭಾರತದ ಬೆಳ್ಳಿ ಪದಕ ವಿಜೇತ ಪುರುಷರ ಕಬಡ್ಡಿ ತಂಡದ ಸದಸ್ಯರಾಗಿದ್ದ ಬ್ರಿಜೇಂದ್ರ ಸಿಂಗ್ ಚೌಧರಿ ಅವರು ಡೋಪ್ ಪರೀಕ್ಷೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರ ಪದಕವನ್ನು ಹಿಂಪಡೆಯಲಾಗಿದೆ.
ಕ್ರೀಡಾಕೂಟದ ವೇಳೆ ನಡೆಸಿದ ಡೋಪ್ ಪರೀಕ್ಷೆಯಲ್ಲಿ ನಿಷೇಧಿತ ಮಾಸ್ಕಿಂಗ್ ಏಜೆಂಟ್ ಬ್ರಿಂಲಮೈಡ್ ಸೇವಿಸಿರುವುದು ದೃಢಪಟ್ಟಿದೆ. ತಮ್ಮ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮವನ್ನು ಬ್ರಿಜೇಂದ್ರ ಸಿಂಗ್ ಚೌಧರಿ ಒಪ್ಪಿಕೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ITA) ತಿಳಿಸಿದೆ.

ಚೀನಾದ ಸನ್ಯಾನಗರದಲ್ಲಿ ಏಪ್ರಿಲ್ 22ರಿಂದ 30ರವರೆಗೆ ಏಷ್ಯನ್ ಬೀಚ್ ಗೇಮ್ಸ್ ನಡೆದಿತ್ತು. ಈ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಕಬಡ್ಡಿ ತಂಡ ಬೆಳ್ಳಿ ಪದಕ ಗೆದ್ದಿದ್ದರೆ, ಮಹಿಳಾ ತಂಡ ಚಿನ್ನದ ಪದಕ ಜಯಿಸಿತ್ತು.
“ಭಾರತೀಯ ಕಬಡ್ಡಿ ಆಟಗಾರ ಬ್ರಿಜೇಂದ್ರ ಸಿಂಗ್ ಚೌಧರಿ ಅವರು ಉದ್ದೀಪನಾ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ” ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಪರವಾಗಿ ITA ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವ ಉದ್ದೀಪನಾ ಮದ್ದು ವಿರೋಧಿ ಸಂಸ್ಥೆ (WADA) ನಿಯಮಗಳ ಪ್ರಕಾರ, ಬ್ರಿಂಲಮೈಡ್ ನಿಷೇಧಿತ ವಸ್ತುವಾಗಿದ್ದು, ಕ್ರೀಡಾಕೂಟದ ಅವಧಿಯಲ್ಲಿ ಮಾತ್ರವಲ್ಲದೆ ಕ್ರೀಡಾಕೂಟದ ಹೊರಗಡೆಯೂ ಅಂದರೆ ಎಲ್ಲಾ ಸಮಯದಲ್ಲೂ ಇದರ ಬಳಕೆಯನ್ನು ನಿಷೇಧಿಸಲಾಗಿದೆ.
“OCA ಉದ್ದೀಪನಾ ವಿರೋಧಿ ನಿಯಮಗಳ ಅಡಿಯಲ್ಲಿ ಆಟಗಾರನು ನಿಯಮ ಉಲ್ಲಂಘನೆಯ ಪರಿಣಾಮಗಳನ್ನು ಒಪ್ಪಿಕೊಂಡಿದ್ದಾರೆ. ನಿಯಮ ಉಲ್ಲಂಘನೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ 6ನೇ ಏಷ್ಯನ್ ಬೀಚ್ ಗೇಮ್ಸ್ ಸನ್ಯಾ 2026ರಲ್ಲಿ ಪುರುಷರ ಬೀಚ್ ಕಬಡ್ಡಿ ವಿಭಾಗದಲ್ಲಿ ಅವರು ಪಡೆದ ಎರಡನೇ ಸ್ಥಾನ ಸೇರಿದಂತೆ ಅವರ ವೈಯಕ್ತಿಕ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ’ ಎಂದು ITA ಹೇಳಿದೆ.


Spread the love
Share:

administrator

Leave a Reply

Your email address will not be published. Required fields are marked *