Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೆಪ್ಟೆಂಬರ್‌ ಆರಂಭದಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಮಾಲೀಕರಿಗೆ ಬೆಲೆ ಶಾಕ್!

Spread the love

ನವದೆಹಲಿ: ಸೆಪ್ಟೆಂಬರ್‌ ತಿಂಗಳ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್‌ ಮಾಲೀಕರು ಹಾಗೂ ರೆಸ್ಟೋರೆಂಟ್‌ ಮಾಲೀಕರಿಗೆ ಬೆಲೆ ಏರಿಕೆ ಶಾಕ್‌ ನೀಡಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಮೇಲಿನ ದರವನ್ನು ಹೆಚ್ಚಿಸಿವೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಮಾಹಿತಿಯ ಪ್ರಕಾರ, ಕಮರ್ಷಿಯಲ್‌ ಸಿಲಿಂಡರ್‌ ದರದಲ್ಲಿ 9.50 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆದಾರರಿಗೆ ಕೊಂಚ ರಿಲೀಫ್‌ ಸಿಕ್ಕಿದೆ. ಸದ್ಯ 14 ಕೆಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಇಲ್ಲ, ಜೊತೆಗೆ 5 ಕೆಜಿ, 10 ಕೆಜಿ ಸಿಲಿಂಡರ್‌ ಬೆಲೆಯಲ್ಲೂ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿದುಬಂದಿದೆ.5 ಕೆಜಿ ಸಾಮಾನ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 349.50 ರೂ. ಆಗಿಯೇ ಮುಂದುವರಿದಿದೆ. 5 ಕೆಜಿ XTRALITE ಸಿಲಿಂಡರ್‌ ದರ 339 ರೂ.ಗೆ ಸ್ಥಿರವಾಗಿದೆ. 5 ಕೆಜಿ ನಾನ್‌-ಡೊಮೆಸ್ಟಿಕ್‌ ಸಿಲಿಂಡರ್‌ ಬೆಲೆ ಮಾತ್ರ 762 ರಿಂದ 764 ರೂ.ವರೆಗೆ ಏರಿಕೆಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *