Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕದ ಬೆನ್ನಲ್ಲೇ ಪಂಜಾಬ್‌ನಲ್ಲೂ ಕೃತಕ ಪನ್ನೀರ್ ಉತ್ಪಾದನೆ ಹಾಗೂ ಮಾರಾಟಕ್ಕೆ 1 ವರ್ಷದ ನಿಷೇಧ!

Spread the love

ಚಂಡೀಗಢ: ಕರ್ನಾಟಕದಲ್ಲಿ ಆಹಾರ ಸುರಕ್ಷತಾ ಇಲಾಖೆ 1 ವರ್ಷದ ಅವಧಿಗೆ ಕೃತಕ ಪನ್ನೀರ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಂಜಾಬ್ ಸರ್ಕಾರ ಕೂಡ ಕೃತಕ ಪನ್ನೀರ್ ಉತ್ಪಾದನೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿದೆ.

ಪಂಜಾಬ್ ಸರ್ಕಾರವು ರಾಜ್ಯಾದ್ಯಂತ ಅನಲಾಗ್ ಅಥವಾ ಕೃತಕ ಪನ್ನೀರ್ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟದ ಮೇಲೆ 1 ವರ್ಷದ ನಿಷೇಧ ಹೇರಿದೆ. ಈ ಕ್ರಮವು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಂಜಾಬ್‌ನ ಆಹಾರ ಮತ್ತು ಔಷಧ ಆಡಳಿತದ ಆಯುಕ್ತರಾದ ಕನ್ವಾಲ್ ಪ್ರೀತ್ ಬ್ರಾರ್ ಆದೇಶ ಹೊರಡಿಸಿದ್ದಾರೆ.ಸೆಕ್ಷನ್ 30(2)(ಎ)ರ ಅಡಿಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 18 ಹಾಗೂ 29ರ ಅನ್ವಯ ಈ ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ‘ನಾನ್-ಡೈರಿ ಪನ್ನೀರ್’, ‘ವೀಗನ್ ಪನ್ನೀರ್’, ‘ಸಿಂಥೆಟಿಕ್ ಪನ್ನೀರ್’ ಮತ್ತು ‘ಪ್ಲಾಂಟ್-ಬೇಸ್ಡ್ ಪನ್ನೀರ್’ ಸೇರಿದಂತೆ ಇತರ ಸಮಾನ ರೀತಿಯ ಹೆಸರುಗಳಲ್ಲಿ ಉತ್ಪನ್ನಗಳನ್ನ ತಯಾರಿಸಿ, ಸಂಗ್ರಹಿಸಿ, ಸಾಗಿಸಿ, ವಿತರಿಸಿ ಮತ್ತು ಮಾರಾಟ ಮಾಡಲಾಗುತ್ತಿದೆ. ಆದರೆ ಇವುಗಳನ್ನು ‘ಪನ್ನೀರ್’ ಅಂತ ತೋರಿಸಿ ಮಾರಾಟ ಮಾಡಲಾಗ್ತಿದೆ ಎಂದು ಉಲ್ಲೇಖಿಸಲಾಗಿದೆ.2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರ ವರೆಗೆ ಪಂಜಾಬ್‌ನ ವಿವಿಧೆಡೆಗಳಿಂದ ಸಂಗ್ರಹಿಸಲಾದ ಪನ್ನೀರ್ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಈವರೆಗೆ 512 ಮಾದರಿಗಳ ಪೈಕಿ 215 ಮಾದರಿಗಳು (42%) ನಿಯಮಾನುಸಾರವಾಗಿಲ್ಲ ಎಂದು ವರದಿ ಬಂದಿದೆ. 156 ಮಾದರಿಗಳು ಗುಣಮಟ್ಟದ ಮಾನದಂಡಕ್ಕಿಂತ ಕಡಿಮೆ ಹಾಗೂ 59 ಮಾದರಿಗಳು ಅಸುರಕ್ಷಿತ ಎಂದು ತಿಳಿದುಬಂದಿದೆ.ಈ ವರದಿಯ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳ ಅಡಿಯಲ್ಲಿ ಆ ಆಹಾರವನ್ನು ಅಸುರಕ್ಷಿತ ಹಾಗೂ ತಪ್ಪು ಲೇಬಲ್ ಹೊಂದಿರುವ ಉತ್ಪನ್ನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮುಂದಿನ 1 ವರ್ಷದ ಅವಧಿಗೆ ಕೃತಕ ಪನ್ನೀರ್ ಉತ್ಪಾದನೆ ಹಾಗೂ ಮಾರಾಟವನ್ನ ಸಂಪೂರ್ಣ ಬ್ಯಾನ್ ಮಾಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *