ಹಾರ್ಮುಜ್ ಜಲಸಂಧಿ: ಭಾರತೀಯ ತೈಲ ಟ್ಯಾಂಕರ್‌ಗೆ ತಡೆ ಒಡ್ಡಿ ಎಚ್ಚರಿಕೆ ನೀಡಿದ ಇರಾನ್ ನೌಕಾಪಡೆ!

ಟೆಹ್ರಾನ್:ಜಾಗತಿಕ ಇಂಧನ ಸಾಗಣೆಯ ಪ್ರಮುಖ ನರನಾಡಿಯಾಗಿರುವ ಹಾರ್ಮುಜ್ ಜಲಸಂಧಿಯ ( ದಕ್ಷಿಣ ಮಾರ್ಗದಲ್ಲಿ ಹಾದುಹೋಗಲು ಯತ್ನಿಸುತ್ತಿದ್ದ ‘ಹಾನಾ’ ಹೆಸರಿನ ಭಾರತೀಯ ತೈಲ ಟ್ಯಾಂಕರ್‌ಗೆ ಇರಾನ್‌ನ ನೌಕಾಪಡೆಯು ತಡೆ ಒಡ್ಡಿ ಎಚ್ಚರಿಕೆ ನೀಡಿದೆ.

ಇರಾನ್‌ನ ಎಚ್ಚರಿಕೆಯ ಬೆನ್ನಲ್ಲೇ ಭಾರತೀಯ ಹಡಗು ಮಾರ್ಗ ಬದಲಿಸಿ ಹಿಂದೆ ಸರಿದಿದೆ ಎಂದು ಇರಾನ್‌ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ‘ಫಾರ್ಸ್’ ವರದಿ ಮಾಡಿದೆ.ಪಶ್ಚಿಮ ಏಷ್ಯಾದ ಯುದ್ಧದ ನಡುವೆ ಹಾರ್ಮುಜ್ ಜಲಮಾರ್ಗದಲ್ಲಿ ವಾಣಿಜ್ಯ ನೌಕೆಗಳ ಸಂಚಾರವನ್ನು ಪುನರಾರಂಭಿಸಲು ಇರಾನ್ ಮತ್ತು ಒಮಾನ್ ನಡುವೆ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗಲೇ ಈ ಬಿಕ್ಕಟ್ಟು ಎದುರಾಗಿದೆ.ಓಮನ್ ಕಾರಿಡಾರ್ ಎಂದು ಕರೆಯಲ್ಪಡುವ ದಕ್ಷಿಣ ಮಾರ್ಗದ ಮೂಲಕ ಸಾಗಲು ಯತ್ನಿಸಿದ ಭಾರತೀಯ ಹಡಗನ್ನು ತಡೆದ ಇರಾನ್ ಪಡೆಗಳು, ಕಳೆದ ೨೪ ಗಂಟೆಗಳಲ್ಲಿ ಈ ಮಾರ್ಗದಲ್ಲಿ ಯಾವುದೇ ಸಂಚಾರಕ್ಕೆ ಅವಕಾಶ ನೀಡಿಲ್ಲ.