ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ ಮುಡಿಗೇರಿಸಿಕೊಂಡ ಕೇರಳದ ಕಾಜಿಯಾ ಲಿಜ್ ಮೆಜೊ

ಜೈಪುರ/ತಿರುವನಂತಪುರಂ: ಕೇರಳದ 19 ವರ್ಷದ ಮಾಡೆಲ್ ಹಾಗೂ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ (Kaziah Liz Mejo) ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಈ ಪ್ರತಿಷ್ಠಿತ ವೇದಿಕೆಯಲ್ಲಿ ಸೌಂದರ್ಯ ಕಿರೀಟ ಗೆದ್ದ ಕೇರಳದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕಾಜಿಯಾ ಲಿಜ್ ಮೆಜೊ (Kaziah Liz Mejo 2026ರ ಮಿಸ್ ಯೂನಿವರ್ಸ್ ಇಂಡಿಯಾ (Miss Universe India 2026) ಕಿರೀಟ ಗೆದ್ದಿದ್ದಾರೆ. ಈ ಮೂಲಕ ಈ ವೇದಿಕೆಯಲ್ಲಿ ಗೆಲುವು ಕಂಡ ಕೇರಳದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಆಗಸ್ಟ್ 23ರ ಭಾನುವಾರ ಜೈಪುರದ ಜೀ ಸ್ಟುಡಿಯೋದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ 52 ಫೈನಲಿಸ್ಟ್ಗಳನ್ನು ಹಿಂದಿಕ್ಕಿ ಕಾಜಿಯಾ ಈ ಗೆಲುವು ಸಾಧಿಸಿದ್ದಾರೆ. ಇದೀಗ ಅವರು ನವೆಂಬರ್ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಕೇರಳದ ಮಾವೆಲಿಕ್ಕರದ ನಿವಾಸಿಯಾಗಿರುವ ಕಾಜಿಯಾ, ಪ್ರಸ್ತುತ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. ಮಾಡೆಲಿಂಗ್, ನಟನೆ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ, ಇವರು 2025ರ ‘ಮಿಸ್ ಟೀನ್ ಇಂಟರ್ನ್ಯಾಷನಲ್’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೊದಲ ರನ್ನರ್-ಅಪ್ ಆಗಿ ಗಮನ ಸೆಳೆದಿದ್ದರು. 2021ರಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಗೆದ್ದಿದ್ದನ್ನು ನೋಡಿ ಪ್ರೇರಿತರಾದ ಕಾಜಿಯಾ, ಇದೀಗ ಕೇವಲ 19ನೇ ವಯಸ್ಸಿನಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ
1994ರ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ನೇತೃತ್ವದ ತೀರ್ಪುಗಾರರ ಮಂಡಳಿಯಲ್ಲಿ ಮಾಜಿ ಪ್ರಶಸ್ತಿ ವಿಜೇತರಾದ ಸೆಲೀನಾ ಜೇಟ್ಲಿ, ಊರ್ವಶಿ ರೌಟೇಲಾ, ರಿಯಾ ಸಿಂಘಾ ಹಾಗೂ ಚಲನಚಿತ್ರ ನಿರ್ಮಾಪಕಿ ಪ್ರಜ್ಞಾ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ದೇಶಾದ್ಯಂತ ಸುಮಾರು 9,000 ಆಕಾಂಕ್ಷಿಗಳಿಂದ ಆಯ್ಕೆಯಾದ 52 ಫೈನಲಿಸ್ಟ್ಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿತ್ತು.
ಕಾಜಿಯಾ ಈಗ ಜಾಗತಿಕ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಸಿದ್ಧತೆಗಳನ್ನು ಪ್ರಾರಂಭಿಸಲಿದ್ದಾರೆ. ಪೋರ್ಟೊ ರಿಕೊಗೆ ಪ್ರಯಾಣಿಸುವ ಮೊದಲು ಅವರು ಸ್ಟೈಲಿಂಗ್, ಫಿಟ್ನೆಸ್, ಸಾರ್ವಜನಿಕ ಭಾಷಣ ಮತ್ತು ಒಟ್ಟಾರೆ ಪ್ರಸ್ತುತಿಯಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ತರಬೇತಿಯನ್ನು ಪಡೆಯುವ ನಿರೀಕ್ಷೆಯಿದೆ. ಒಂದು ಕಾಲದಲ್ಲಿ ಆತ್ಮವಿಶ್ವಾಸಕ್ಕಾಗಿ ಹೋರಾಡುತ್ತಿದ್ದ ಹದಿಹರೆಯದವಳಿಂದ 2026ರ ಮಿಸ್ ಯೂನಿವರ್ಸ್ ಇಂಡಿಯಾ ಆಗುವವರೆಗಿನ ಅವರ ಪ್ರಯಾಣವು ಈಗಾಗಲೇ ಅವರಿಗೆ ಕಿರೀಟವನ್ನು ಮೀರಿದ ಕಥೆಯನ್ನು ನೀಡಿದೆ. ಈಗ, ಅವರು ಈ ಪ್ರಯಾಣವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯಲಿದ್ದಾರೆ. 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತದ ಭರವಸೆಗಳನ್ನು ಹೊತ್ತುಕೊಳ್ಳಲಿದ್ದಾರೆ. ಗೆಲುವಿನೊಂದಿಗೆ ಮರಳಲಿ ಎಂಬುದು ಭಾರತೀಯರ ಹಾರೈಕೆಯಾಗಿದೆ.