Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಿಳಾ ಹಾಕಿ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಗೋಲುರಹಿತ ಡ್ರಾ; ಸೆಮಿಫೈನಲ್ ಪ್ರವೇಶದಿಂದ ವಂಚಿತವಾದ ಭಾರತ!

Spread the love

ಆಮ್ನರ್ವೀನ್: ಆಸ್ಟ್ರೇಲಿಯಾ ವಿರುದ್ಧದ ಗೋಲು ರಹಿತ ಡ್ರಾ ಪಂದ್ಯದ ಮೂಲಕ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡದ ಅಭಿಯಾನ ಅಂತ್ಯಗೊಂಡಿದೆ. ಪೂಲ್ ಹಂತದಲ್ಲಿ ಹೆಚ್ಚು ಗೋಲುಗಳನ್ನು ಗಳಿಸಿದ್ದ ಆಧಾರದ ಮೇಲೆ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಆಸ್ಟ್ರೇಲಿಯಾ ಪಂದ್ಯವನ್ನು ಅತ್ಯಂತ ಬಲಿಷ್ಠವಾಗಿ ಆರಂಭಿಸಿತು. ಎರಡನೇ ನಿಮಿಷದಲ್ಲೇ ಗ್ರೇಸ್ ಸ್ಟೀವರ್ಟ್ ಗೋಲು ಗಳಿಸುವ ಮೂಲಕ ಆಸ್ಟ್ರೇಲಿಯಾಗೆ ಮುನ್ನಡೆ ತಂದುಕೊಟ್ಟರು. ಆದರೆ, ಭಾರತ ತಂಡವು ಅಪಾಯಕಾರಿ ಆಟದ ಆಕ್ಷೇಪ ವ್ಯಕ್ತಪಡಿಸಿ ವಿಡಿಯೋ ರೆಫೆರಲ್ ಮೊರೆಹೋಯಿತು. ಬಳಿಕ ಗೋಲು ಅಮಾನ್ಯ ಎಂದು ತೀರ್ಪು ಬಂದಿದ್ದರಿಂದ ಭಾರತ ತಂಡ ನಿಟ್ಟುಸಿರು ಬಿಟ್ಟಿತು.

ಆಸ್ಟ್ರೇಲಿಯಾ ತಂಡವು ಚೆಂಡಿನ ಮೇಲಿನ ನಿಯಂತ್ರಣವನ್ನು ಮುಂದುವರಿಸಿ ಹಲವು ಗೋಲು ಅವಕಾಶಗಳನ್ನು ಸೃಷ್ಟಿಸುತ್ತಲೇ ಇತ್ತು. ಆದರೆ ಭಾರತದ ಗೋಲ್‌ಕೀಪರ್‌ಗಳಾದ ಬಿಚು ದೇವಿ ಹಾಗೂ ಸವಿತಾ ಅವರ ಅದ್ಭುತ ಸೇವ್‌ಗಳಿಂದ ಆಸ್ಟ್ರೇಲಿಯಾಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಹಂತದಲ್ಲಿ ಭಾರತ ತಂಡವು ಚೆಂಡಿನ ನಿಯಂತ್ರಣಕ್ಕಾಗಿ ಹೆಣಗಾಡಿದರೂ, ಬಳಿಕ ನಿಧಾನವಾಗಿ ಲಯ ಕಂಡುಕೊಂಡಿತು.
ಆಸ್ಟ್ರೇಲಿಯಾ ಹಲವು ಪೆನಾಲ್ಟಿ ಕಾರ್ನ‌್ರಗಳನ್ನು ಪಡೆದರೂ, ಅವುಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಭಾರತದ ರಕ್ಷಣಾ ಪಡೆ ಪದೇಪದೇ ಅಪಾಯವನ್ನು ದೂರಮಾಡಿತು. ಮೊದಲಾರ್ಧ ಮುಕ್ತಾಯಕ್ಕೆ ಕೇವಲ 21 ಸೆಕೆಂಡುಗಳು ಬಾಕಿ ಇರುವಾಗ ಭಾರತ ಪೆನಾಲ್ಟಿ ಕಾರ್ನರ್ ಪಡೆದರೂ, ಮೊದಲಾರ್ಧ ಗೋಲ್ ರಹಿತವಾಗಿಯೇ ಅಂತ್ಯಗೊಂಡಿತು.

ವಿರಾಮದ ಬಳಿಕ ಭಾರತ ತಂಡವು ಹೆಚ್ಚಿನ ತೀವ್ರತೆಯೊಂದಿಗೆ ಕಣಕ್ಕಿಳಿದು, ಆಸ್ಟ್ರೇಲಿಯಾ ಮೇಲೆ ಒತ್ತಡ ಹೇರಲು ಪ್ರಾರಂಭಿಸಿತು. ಆದರೆ, ಕೌಂಟ‌ರ್ ಅಟ್ಯಾಕ್‌ನಲ್ಲಿ ಆಸ್ಟ್ರೇಲಿಯಾ ಅಪಾಯಕಾರಿಯಾಗಿಯೇ ಉಳಿದು, ಭಾರತದ ರಕ್ಷಣಾ ಪಡೆಯನ್ನು ಪರೀಕ್ಷಿಸುತ್ತಲೇ ಇತ್ತು.
ಕೊನೆಯ ಅವಧಿಯಲ್ಲಿ ಗೆಲುವಿನ ಗೋಲು ಗಳಿಸುವ ಅಂತಿಮ ಪ್ರಯತ್ನವಾಗಿ ಭಾರತ ತಂಡವು ಬಿಚು ದೇವಿ ಅವರನ್ನು ಹಿಂಪಡೆದು, ದೀಪಿಕಾ ಅವರನ್ನು ಹೆಚ್ಚುವರಿ ಔಟ್‌ಫೀಲ್ಡ್ ಆಟಗಾರ್ತಿಯಾಗಿ ಕಣಕ್ಕಿಳಿಸಿತು.
ಆದರೆ, ಉಭಯ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪಂದ್ಯ ಗೋಲ್‌ರಹಿತ ಡ್ರಾದಲ್ಲಿ ಅಂತ್ಯಗೊಂಡಿತು.
ಪೂಲ್ ಹಂತದಲ್ಲಿ ಹೆಚ್ಚು ಗೋಲುಗಳನ್ನು ಗಳಿಸಿದ್ದ ಆಧಾರದ ಮೇಲೆ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿತು.
ಭಾರತ ತಂಡವು ಇದೀಗ ಐದನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ.


Spread the love
Share:

administrator

Leave a Reply

Your email address will not be published. Required fields are marked *