ಕಾಸರಗೋಡು: ಶಾಲಾ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾ*ತ; 25 ವರ್ಷದ ಯುವಕ ದುರ್ಮರಣ!

ಕಾಸರಗೋಡು, ಆ. 20: ಶಾಲಾ ಬಸ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಕಾಸರಗೋಡಿನ ಬೋವಿಕ್ಕಾ ನ ಸಮೀಪದ ಪೊವ್ವಲ್ ಮಾಸ್ತಿಕುಂಡು ಎಂಬಲ್ಲಿ ನಡೆದಿದೆ.ಗಾಳಿಮುಖ ನೆಟ್ಟಣಿಗೆಯ ಹೊಸಹಿತ್ತಿಲಿನ ಎಸ್. ಶಮ್ಮಾಸ್ ಅಬ್ದುಲ್ಲಾ (25) ಮೃತಪಟ್ಟವರು. ಚೆರ್ಕಳ ಕಡೆಯಿಂದ ಗಾಳಿ ಮುಖದತ್ತ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಾಸ್ತಿಕುಂಡು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದಿದ್ದು , ಗಂಭೀರ ಗಾಯಗೊಂಡ ಶಮ್ಮಾ ಸ್ ನನ್ನು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
