ಕೋಟೇಶ್ವರ ಕಡಲ ಕಿನಾರೆಯಲ್ಲಿ ಗಮನ ಸೆಳೆಯುತ್ತಿರುವ ವಿಶೇಷ ಮರಳು ಶಿಲ್ಪ; ನಾಗಬನದ ಮೂಲಕ ಪ್ರಕೃತಿ ಸಂರಕ್ಷಣೆ ಸಂದೇಶ!

ಉಡುಪಿ: ಜಿಲ್ಲೆಯ ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಇದೀಗ ವಿಶೇಷ ಮರಳು ಶಿಲ್ಪವೊಂದು ಗಮನ ಸೆಳೆಯುತ್ತಿದೆ.

ತ್ರಿವರ್ಣ ಆರ್ಟ್ ಕ್ಲಾಸಸ್ ವಿದ್ಯಾರ್ಥಿಗಳು, ಕಲಾವಿದ ಹರೀಶ್ ಸಾಗಾ ಅವರ ತರಬೇತಿಯಲ್ಲಿ ಸುಮಾರು 12 ಅಡಿ ಅಗಲದ ವಿಸ್ತೀರ್ಣದಲ್ಲಿ ಈ ಕಲಾಕೃತಿಯನ್ನು ನಿರ್ಮಿಸಿದ್ದಾರೆ
ನಾಗದೇವರ ಆರಾಧನೆಯ ಜೊತೆಗೆ ಪ್ರಕೃತಿಯನ್ನು ಉಳಿಸುವ ಸಂದೇಶವನ್ನೂ ಕಲಾಕೃತಿ ಸಾರುತ್ತಿದೆ. ಮರಳಿನ ಕಣಕಣದಲ್ಲೂ ಕಲಾವಿದರ ಕೈಚಳಕ ಮೂಡಿಬಂದಿದೆ. ನಾಗಬನದ ಮೂಲಕ ಸೇವ್ ನೇಚರ್ ಸಂದೇಶ ಸಾರಲಾಗಿದೆ.
ನಾಗಾರಾಧನೆಯ ಸಂಪ್ರದಾಯದ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಈ ಕಲಾಕೃತಿ ಕಡಲ ಕಿನಾರೆಯಲ್ಲಿ ಕಲಾಸಕ್ತರ ಗಮನ ಸೆಳೆಯುತ್ತಿದೆ. ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯ ಪ್ರಮುಖ ಆಕರ್ಷಣೆಯಾಗಿದೆ.