Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟೊರೊಂಟೊ ಮಾಸ್ಟರ್ಸ್ ಟೆನಿಸ್: ವಿಶ್ವ ನಂ.1 ಅರೈನಾ ಸಬಲೆಂಕಾ ಹಾಗೂ ಜೆಸಿಕಾ ಪೆಗುಲಾ ಆಘಾತಕಾರಿ ಸೋಲು!

Spread the love

ಟೊರೊಂಟೊ: ಟೊರೊಂಟೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಶನಿವಾರ ನಂಬರ್ ವನ್ ವಿಶ್ವ ರ್ಯಾಂ ಕಿಂಗ್ ನ ಅರೈನಾ ಸಬಲೆಂಕಾ ಮತ್ತು ಜೆಸಿಕಾ ಪೆಗುಲಾ ಇಬ್ಬರೂ ತಮ್ಮ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.
ನಾಲ್ಕು ಬಾರಿಯ ಗ್ಯಾನ್ನಾಮ್ ವಿಜೇತೆ ಬೆಲಾರುಸ್ ನ ಸಬಲೆಂಕಾರನ್ನು ರಷ್ಯಾದ 16ನೇ ಶ್ರೇಯಾಂಕದ ಎಕಟೆರಿನಾ ಅಲೆಕ್ಸಾಂಡೋವಾ 7-6 (7/3), 4-6, 6-4 ಸೆಟ್ಗಳಲ್ಲಿ ಸೋಲಿಸಿದರು. ಇದರೊಂದಿಗೆ, ಸತತ ಮೂರನೇ ಯುಎಸ್‌ ಓಪನ್ ಟ್ರೋಫಿ ಗೆಲ್ಲುವ ಸಬಲೆಂಕಾರ ಸಿದ್ಧತೆಗೆ ದೊಡ್ಡ ಹಿನ್ನಡೆಯಾಗಿದೆ.
ಬೆಲಾರುಸ್ನ ಆಟಗಾರ್ತಿಯನ್ನು 2 ಗಂಟೆ 29 ನಿಮಿಷಗಳಲ್ಲಿ ಸೋಲಿಸಿದ ನಂತರ ಮಾತನಾಡಿದ ಅಲೆಕ್ಸಾಂಡೋವಾ, “ನಾನು ಸ್ಕೋರ್ ಅಥವಾ ಪ್ರಥಮ ರ್ಯಾ೦ ಕಿಂಗ್ ನ ಆಟಗಾರ್ತಿಯನ್ನು ಸೋಲಿಸುವ ಬಗ್ಗೆ ಆಲೋಚಿಸುತ್ತಿರಲಿಲ್ಲ. ನನ್ನ ಅತ್ಯುತ್ತಮ ಆಟವನ್ನು ನೀಡಲು ಮಾತ್ರ ಪ್ರಯತ್ನಿಸುತ್ತಿದ್ದೆ” ಎಂದಿದ್ದಾರೆ.
“ನಾನು ಪ್ರತಿಯೊಂದು ಅಂಕವನ್ನು ಕೊನೆಯ ಅಂಕ ಎಂಬಂತೆ ಆಡಲು ಯತ್ನಿಸಿದೆ. ಏಕೆಂದರೆ ಅವರ ವಿರುದ್ಧದ ಪಂದ್ಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ” ಎಂದು ಅಲೆಕ್ಸಾಂಡೋವಾ ಹೇಳಿದರು.
“ಇಂದು ನನಗೆ ಹಲವು ಅವಕಾಶಗಳು ಸಿಕ್ಕಿದ್ದವು, ಆದರೆ ಕೆಲವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡನೇ ಸೆಟ್ ನಂತರ ಗೆಲುವು ನನ್ನ ಕೈಜಾರಿದೆ ಎಂದೇ ಭಾವಿಸಿದ್ದೆ ಆದರೆ ಅಂತಿಮವಾಗಿ ಗೆದ್ದಿರುವುದು ನನಗೆ ಅತ್ಯಂತ ಸಂತೋಷ ತಂದಿದೆ” ಎಂದರು.

ಅಲೆಕ್ಸಾಂಡೋವಾ ಕ್ವಾರ್ಟರ್ ಫೈನಲ್ನಲ್ಲಿ ಉಕ್ರೇನ್ನ ಎಲಿನಾ ಸ್ವಿಟೋಲಿನಾ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ವಿಟೋಲಿನಾ ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು 6-2, 6-4 ಅಂತರದಿಂದ 78 ನಿಮಿಷಗಳಲ್ಲಿ ಮಣಿಸಿದರು.
‘ಪೆಗುಲಾಗೆ ಅಚ್ಚರಿಯ ಸೋಲು
ಇನ್ನೊಂದು ಅಚ್ಚರಿಯ ಫಲಿತಾಂಶದ ಪಂದ್ಯದಲ್ಲಿ ರಷ್ಯಾದ 15ನೇ ಶ್ರೇಯಾಂಕದ ಪ್ರೈಡರ್, ಮೂರನೇ ವಿಶ್ವ ರ್ಯಾಂ ಕಿಂಗ್ ನ ಪೆಗುಲಾ ಅವರನ್ನು 6-3, 6-3 ಅಂತರದಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಅವರು ಪೋಲ್ಯಾಂಡ್ ನ ಇಗಾ ಸ್ವಿಯಾಟೆಕ್‌ ಅವರನ್ನು ಎದುರಿಸಲಿದ್ದಾರೆ.

22 ವರ್ಷದ ಎಡಗೈ ಆಟಗಾರ್ತಿ ಪ್ರೈಡರ್, ಪೆಗುಲಾರನ್ನು ಸೋಲಿಸಲು ಕೇವಲ 73 ನಿಮಿಷಗಳನ್ನು ತೆಗೆದುಕೊಂಡರು.
“ಈ ವಾರ ರಕ್ಷಣಾತ್ಮಕವಾಗಿ ಆಡುವಲ್ಲಿ ಹಾಗೂ ವಿನ್ನರ್ಗಳನ್ನು ಬಾರಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ನಾನು ಬಹಳ ಸಹಜವಾಗಿ ಆಡುತ್ತಿದ್ದೇನೆ” ಎಂದು ಪಂದ್ಯದ ಬಳಿಕ ಪ್ರೈಡರ್ ಹೇಳಿದರು. “ಇದು ಚೆನ್ನಾಗಿ ಕೆಲಸ ಮಾಡಿತು” ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೊಂದು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂಬರ್ ವನ್ ಹಾಗೂ 7ನೇ ಶ್ರೇಯಾಂಕದ ಸ್ವಿಯಾಟೆಕ್ ಉಕ್ರೇನ್ನ 10ನೇ ಶ್ರೇಯಾಂಕದ ಮಾರ್ತಾ ಕಾಸ್ಟುಕ್ರನ್ನು 3-6, 6-1, 6-2 ಅಂತರದಿಂದ ಮಣಿಸಿದರು.


Spread the love
Share:

administrator

Leave a Reply

Your email address will not be published. Required fields are marked *