Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ: ಭಾರತದ ಕಚ್ಚಾ ತೈಲ ಆಮುವಿನಲ್ಲಿ ರಷ್ಯಾ ಹೊಸ ದಾಖಲೆ; ಒಟ್ಟು ಖರೀದಿಯ ಶೇಕಡಾ 55.5ರಷ್ಟು ಏರಿಕೆ!

Spread the love

ಹೊಸದಿಲ್ಲಿ: ಜುಲೈನಲ್ಲಿ ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದು ದಾಖಲೆಯ 2.8 ದಶಲಕ್ಷ ಬ್ಯಾರೆಲ್‌ಗಳಿಗೆ ಏರಿದ್ದು, ಇದು ದೇಶದ ಒಟ್ಟು ಖರೀದಿಯ ಅರ್ಧಕ್ಕಿಂತ ಹೆಚ್ಚಿನದಾಗಿದೆ. ಹಾರ್ಮುಝ್ ಜಲಸಂಧಿಯ ಮೂಲಕ ತೈಲ ಹರಿವು ಸಹಜ ಸ್ಥಿತಿಗೆ ಮರಳಿದ ಬಳಿಕ ಮಧ್ಯಪ್ರಾಚ್ಯದ ಪೂರೈಕೆದಾರರಿಂದ ಹೆಚ್ಚಿನ ಪೂರೈಕೆಯಾಗುತ್ತಿದ್ದರೂ, ಈ ಏರಿಕೆ ಕಂಡು ಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರತವು ರಿಯಾಯಿತಿ ದರದ ರಷ್ಯಾದ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದ ನಂತರ ಜುಲೈ ಖರೀದಿಗಳು ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. 2022ರಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದ ಬಳಿಕ ರಷ್ಯಾ ಭಾರತ ಸೇರಿದಂತೆ ಏಷ್ಯಾ ದೇಶಗಳಿಗೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಮಾರಾಟ ಮಾಡುತ್ತಿದೆ.

ಶಿಪ್-ಟ್ಯಾಕಿಂಗ್ ಡೇಟಾ ಸಂಸ್ಥೆಯಾದ ಕೆಪ್ಲರ್ ಪ್ರಕಾರ, ರಷ್ಯಾದಿಂದ ಪೂರೈಕೆಯು ಜೂನ್‌ನಲ್ಲಿ 2.7 ಎಂಬಿಡಿಯಿಂದ 2.8 ಎಂಬಿಡಿಗೆ ಏರಿದ್ದು, ಈ ಮೂಲಕ ಭಾರತದ ಕಚ್ಚಾ ತೈಲ ಆಮದುಗಳಲ್ಲಿ ರಷ್ಯಾ ಪಾಲು 55.5% ತಲುಪಿದೆ.
ಈ ಮಧ್ಯೆ ಭಾರತದ ಎಲ್‌ಪಿಜಿ ಆಮದುಗಳು ಅಮೆರಿಕದ ಕಡೆಗೆ ಹೆಚ್ಚು ಒಲವು ತೋರಿವೆ. ಜುಲೈನಲ್ಲಿ ಆಮದು ಮಾಡಿಕೊಂಡ 1.2 ಮಿಲಿಯನ್ ಟನ್‌ಗಳಲ್ಲಿ ಅಮೆರಿಕಾದ ಪಾಲು 9 ಲಕ್ಷ ಟನ್ ಆಗಿದ್ದು, ಇದು ಶೇಕಡಾ 73%ರಷ್ಟಾಗಿದೆ.
ಹಾರ್ಮುಝ್ ಜಲಸಂಧಿಯ ಸುತ್ತ ನಡೆಯುತ್ತಿರುವ ಸಂಘರ್ಷ ಮತ್ತು ಇದೀಗ ಬಾಬ್ ಎಲ್-ಮಂಡೆಬ್ ಜಲಸಂಧಿಯ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಪೂರೈಕೆಗೆ ತಡೆಯೊಡ್ಡುತ್ತಿದ್ದು, ರಷ್ಯಾದ ಕಚ್ಚಾ ತೈಲ ಪೂರೈಕೆಯ ವಿಶ್ವಾಸಾರ್ಹತೆ ಹೆಚ್ಚಲು ಕಾರಣವಾಗಿದೆ ಎಂದು ಕೆಪ್ಲರ್‌ನ ಪ್ರಮುಖ ವಿಶ್ಲೇಷಕ ನಿಖಿಲ್ ದುಬೆ ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾದ ಕಾರ್ಗೋಗಳ ನಿರಂತರ ಲಭ್ಯತೆಯು ರಷ್ಯಾದ ಆಮದು ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ. ರಷ್ಯಾದ ಸಂಸ್ಕರಣಾ ಮೂಲಸೌಕರ್ಯಗಳ ಮೇಲಿನ ಡೋನ್ ದಾಳಿಗಳು ದೇಶೀಯ ಸಂಸ್ಕರಣಾ ಚಟುವಟಿಕೆಯನ್ನು ಕಡಿಮೆ ಮಾಡಿರುವ ಕಾರಣ, ರಷ್ಯಾ ತನ್ನ ಕಚ್ಚಾ ತೈಲವನ್ನು ರಫ್ತು ಮಾಡಲು ಹೆಚ್ಚಿನ ಅವಕಾಶ ಕಲ್ಪಿಸಿದೆ ಎಂದು ದುಬೆ ಹೇಳಿದ್ದಾರೆ.
ಈಗಿದ್ದರೂ, ಪ್ರಮುಖ ಪೂರೈಕೆದಾರರಲ್ಲಿ ಸೌದಿ ಅರೇಬಿಯಾ ಅತಿದೊಡ್ಡ ಹೆಚ್ಚಳವನ್ನು ದಾಖಲಿಸಿದೆ. ಭಾರತಕ್ಕೆ ಅದರ ರಫ್ತು ಪ್ರಮಾಣ ಜೂನ್‌ನಲ್ಲಿ 2.9 ಲಕ್ಷ ಬ್ಯಾರೆಲ್ ಬಿಡಿಯಷ್ಟಿತ್ತು. ಇದೀಗ ಜುಲೈನಲ್ಲಿ 4.2 ಲಕ್ಷ ಬ್ಯಾರೆಲ್ ಬಿಡಿಗೆ ಏರಿಕೆ ಕಂಡಿದೆ.
ಇರಾಕ್‌ನಿಂದ ಆಮದುಗಳು ಏಪ್ರಿಲ್‌ನಲ್ಲಿ ಶೂನ್ಯಕ್ಕೆ ಕುಸಿದಿತ್ತು. ಜೂನ್‌ನಲ್ಲಿ 67,100 ಬ್ಯಾರೆಲ್ ಬಿಡಿಯಷ್ಟಿದ್ದರೆ, ಜುಲೈನಲ್ಲಿ 1.3 ಲಕ್ಷ ಬ್ಯಾರೆಲ್ ಬಿಡಿಗೆ ಏರಿಕೆ ಕಂಡಿದೆ.


Spread the love
Share:

administrator

Leave a Reply

Your email address will not be published. Required fields are marked *