ಗುರು ಪೂರ್ಣಿಮೆ ಸಂಭ್ರಮ: ಕಾಮಾಖ್ಯ-ವಿಂಧ್ಯಾಚಲ ಶಕ್ತಿಪೀಠದ ಶ್ರೀ ಸ್ವಾಮಿ ಕಪಿಲ್ ಜೀ ಮಹಾರಾಜ್ ಅವರಿಂದ ದಿವ್ಯ ಆಶೀರ್ವಾದ ಪಡೆದ ಗಣ್ಯರು!

ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಮಂಗಳೂರಿನ ಸ್ಯಾಫ್ರನ್ ಫ್ರಂಟ್ ಕೇಂದ್ರ ಕಚೇರಿಯಲ್ಲಿ ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ, ಕಾಮಾಖ್ಯ ಮತ್ತು ವಿಂಧ್ಯಾಚಲ ಶಕ್ತಿಪೀಠದ ಶ್ರೀ ಸ್ವಾಮಿ ಕಪಿಲ್ ಜೀ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮವು ಜರುಗಿತು. ಈ ವೇಳೆ ದ ಸ್ಯಾಫ್ರನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಶ್ ಪವಿತ್ರನ್, ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ. ಎಲ್.ಕೆ. ಸುವರ್ಣ, ಕರ್ನಾಟಕ ರಾಜ್ಯ ಸಂಘಟಿತ ಕಾರ್ಮಿಕರ ಕೂಟದ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಕುಂಬ್ಳೆ, ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಸಮಿತಿ ಮುಖ್ಯಸ್ಥರಾದ ಲೋಕೇಶ್ ಉಳ್ಳಾಲ್, ಉದ್ಯಮಿ ವರ್ಣಿತ್ ಶೆಟ್ಟಿ ಹಾಗೂ ಕಾಂಟ್ರಾಕ್ಟರ್ ಸಂತೋಷ್ ಮಾರ್ಲಾ ಉಪಸ್ಥಿತರಿದ್ದು ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಈ ಶುಭ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಸ್ವಾಮಿ ಕಪಿಲ್ ಜೀ ಮಹಾರಾಜ್ ಅವರು, “ಜೀವನದಲ್ಲಿ ಗುರುವೆಂಬವರು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ತೋರುವ ದಾರಿದೀಪವಾಗಿದ್ದಾರೆ. ಸಮಾಜದಲ್ಲಿ ಧರ್ಮ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಪ್ರತಿಯೊಬ್ಬರ ಪಾತ್ರವೂ ಹಿರಿದಾಗಿದ್ದು, ನಿಸ್ವಾರ್ಥ ಸೇವೆಯಿಂದ ಮಾತ್ರ ನಿಜವಾದ ಸಾಧನೆ ಸಾಧ್ಯ” ಎಂದು ನುಡಿದರು.
ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದ ಗಣ್ಯರು, ಮಹರ್ಷಿ ವೇದವ್ಯಾಸರ ಜನ್ಮದಿನವಾದ ಗುರು ಪೂರ್ಣಿಮೆಯು ನಮ್ಮ ಸಂಸ್ಕೃತಿಯಲ್ಲಿ ಹಿರಿಯರನ್ನು ಹಾಗೂ ಗುರುಗಳನ್ನು ಸ್ಮರಿಸುವ ಅತ್ಯಂತ ಪವಿತ್ರ ದಿನವಾಗಿದೆ ಎಂದು ತಿಳಿಸಿದರು. ಶ್ರೀ ಸ್ವಾಮಿ ಕಪಿಲ್ ಜೀ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮವು ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಚಿಂತನೆಗಳ ಕುರಿತು ಸಮಾಲೋಚನೆ ನಡೆಸಲು ಪ್ರಮುಖ ವೇದಿಕೆಯಾಯಿತು.