Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫ್ರಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಪೇನ್: ಕಿಲಿಯನ್ ಎಂಬಾಪೆ ಪಡೆಯ ಕನಸು ಭಗ್ನ!

Spread the love

ಡಲ್ಲಾಸ್ : ಸ್ಪೇನ್‌ನ ಬಲಿಷ್ಠ ರಕ್ಷಣಾ ಪಡೆ ಸ್ಟೈಕರ್ ಕಿಲಿಯನ್ ಎಂಬಾಪೆಯನ್ನು ಕಟ್ಟಿಹಾಕಿ ಯಾವುದೇ ಗೊಲು ನೀಡದೇ ಅರ್ಹವಾಗಿಯೇ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಫ್ರಾನ್ಸ್ ತಂಡದ ವಿರುದ್ಧ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 2-0 ಅಂತರದ ಗೆಲುವು ಸಾಧಿಸಿದೆ.
ಪಂದ್ಯದ ಆರಂಭದಿಂದಲೂ ಸ್ಪೇನ್ ತನ್ನ ಶಕ್ತಿಯಾಗಿದ್ದ ರಕ್ಷಣಾ ಪಡೆಯನ್ನು ದಾಳವಾಗಿ ಉರುಳಿಸಿತು. ಸ್ಟಾರ್ ಪ್ರೈಕರ್ ಕಿಲಿಯನ್ ಎಂಬಾಪೆ ಮತ್ತು ಅತಿ ಹೆಚ್ಚು ಗೋಲುಗಳಿಗೆ ನೆರವಾಗಿದ್ದ ಮೈಕೆಲ್ ಒಲಿಸ್ ರಿಗೆ ಯಾವುದೇ ಗೋಲುಗಳಿಸಲು ಅವಕಾಶ ನೀಡದೇ ಫ್ರಾನ್ಸ್ ಗೆ ಒತ್ತಡ ಹೇರುತ್ತಲೇ ಹೋಯಿತು.

ಮೊದಲಾರ್ಧದಲ್ಲಿ ಮಿಕ್ಕೆಲ್ ಒಯರ್ಜಾಬಲ್ ಅವರ ಪೆನಾಲ್ಟಿ ಗೋಲು ಮೂಲಕ ತಂಡಕ್ಕೆ ಮುನ್ನಡೆ ಲಭಿಸಿತು. ದ್ವಿತೀಯಾರ್ಧದಲ್ಲಿ ಪೆಟ್ರೊ ಪೊರೊ ಅವರ ಗೋಲು ಮೂಲಕ ಮತ್ತೊಂದು ಗೋಲುಗಳಿಸಿ ಗೆಲುವನ್ನು ಖಚಿತಪಡಿಸುತ್ತಲೇ ಹೋಯಿತು.
ಫ್ರಾನ್ಸ್ ತಂಡದಲ್ಲಿ ಎಂಬಾಪೆ ಮತ್ತು ಮೈಕೆಲ್ ಒಲಿಸ್ ಆಕ್ರಮಣಕಾರಿಯಗಿ ಆಡಿದರೂ, ತಂಡದ ಕಳಪೆ ಪ್ರದರ್ಶನದಿಂದಾಗಿ ಅವರ ಆಕ್ರಮಣಕಾರಿ ಆಟ ಫಲ ನೀಡಲಿಲ್ಲ. ಪಂದ್ಯದ ಕೊನೆಯ ಹಂತದಲ್ಲಿ ಫ್ರಾನ್ಸ್ ಕೆಲವು ದಾಳಿಗಳನ್ನು ನಡೆಸಿದರೂ, ಸ್ಪೇನ್ ಗೋಲ್ ಕೀಪರ್ ಉನೈ ಸೀಮನ್ ಮತ್ತು ಮಾರ್ಕ್ ಕುಕುರೆಲ್ಲಾ ಅವರ ಯಶಸ್ವಿ ರಕ್ಷಣೆಯಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಈ ಗೆಲುವಿನೊಂದಿಗೆ ಸ್ಪೇನ್ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸತತ 37 ಪಂದ್ಯಗಳ ಅಜೇಯ ಓಟವನ್ನು ಮುಂದುವರಿಸಿ, ಇಟಲಿಯ ಸಾರ್ವಕಾಲಿಕ ಯುರೋಪಿಯನ್ ದಾಖಲೆಯನ್ನು ಸರಿಗಟ್ಟಿದೆ.
ಫ್ರಾನ್ಸ್ ತಂಡವು ಶನಿವಾರ ನಡೆಯಲಿರುವ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ತನ್ನ ಕೊನೆಯ ಪ್ರಯತ್ನವನ್ನು ಮಾಡಲಿದೆ. ಈ ಸೋಲಿನೊಂದಿಗೆ ಫ್ರಾನ್ಸ್ ತಂಡದ ತರಬೇತುದಾರರಾಗಿ 14 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಡಿಡಿಯರ್ ಡೆಶಾಂಪ್ಸ್ ಅವರ ಅಧಿಕಾರಾವಧಿಗೆ ಅತ್ಯಂತ ನಿರಾಶಾದಾಯಕ ಅಂತ್ಯ ಸಿಕ್ಕಂತಾಗಿದೆ.


Spread the love
Share:

administrator

Leave a Reply

Your email address will not be published. Required fields are marked *