Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ದಾಳಿ: ಓರ್ವ ಭಾರತೀಯ ಸಿಬ್ಬಂದಿ ಸಾ*ವು, ಆರು ಮಂದಿಗೆ ಗಾಯ!

Spread the love

ಹೊಸ ದಿಲ್ಲಿ: ಹಾರ್ಮುಝ್ ಜಲಸಂಧಿಯಲ್ಲಿ ಯುಎಇ ಧ್ವಜ ಹೊಂದಿದ್ದ ಎರಡು ಟ್ಯಾಂಕರ್‌ಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟು, ಇತರ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ಮಂಗಳವಾರ ಮುಂಜಾನೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇರಾನ್ ಗುರಿಯಾಗಿಸಿಕೊಂಡು ಅಮೆರಿಕಾ ನಡೆಸುತ್ತಿರುವ ಸರಣಿ ದಾಳಿಗಳು ಮತ್ತು ಹಾರ್ಮುಝ್ ಜಲಸಂಧಿಯ ನಿಯಂತ್ರಣಕ್ಕಾಗಿ ಹೆಚ್ಚುತ್ತಿರುವ ಸಂಘರ್ಷದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಯುಎಇ ರಕ್ಷಣಾ ಸಚಿವಾಲಯ, ಒಮಾನ್ ಪ್ರಾದೇಶಿಕ ಜಲಪ್ರದೇಶಕ್ಕೆ ಒಳಪಡುವ ಹಾರ್ಮುಝ್ ಜಲಸಂಧಿಯ ದಕ್ಷಿಣ ಮಾರ್ಗದಲ್ಲಿ ಮೊಂಬಾಸಾ ಮತ್ತು ಬಹಿಯಾ ಎಂಬ ಟ್ಯಾಂಕರ್‌ಗಳ ಮೇಲೆ ಎರಡು ಕ್ಷಿಪಣಿಗಳ ದಾಳಿ ನಡೆದಿದೆ. ದಾಳಿಯಿಂದಾಗಿ ಎರಡೂ ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಮೊಂಬಾಸಾದಲ್ಲಿದ್ದ ಭಾರತೀಯ ಪ್ರಜೆಯೊಬ್ಬರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಎಂಟು ಜನ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಆರು ಮಂದಿ ಭಾರತೀಯರು ಮತ್ತು ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದ್ದಾರೆ ಎಂದು ತಿಳಿಸಿದೆ.

ಈ ಘಟನೆಯನ್ನು ಯುಎಇ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಮತ್ತು ಸ್ಪಷ್ಟ ಉಲ್ಲಂಘನೆಯಾಗಿದೆ. ತನ್ನ ಭೂಪ್ರದೇಶ, ಜನತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಹಕ್ಕನ್ನು ತಾನು ಹೊಂದಿರುವುದಾಗಿ ತಿಳಿಸಿದೆ. ಸಾರ್ವಜನಿಕರು ಕೇವಲ ಅಧಿಕೃತ ಮೂಲಗಳ ಮಾಹಿತಿಯನ್ನಷ್ಟೇ ಅವಲಂಬಿಸಬೇಕೆಂದು ಜನರಿಗೆ ಸಂದೇಶ ನೀಡಿದೆ.
ಹಾರ್ಮುಝ್ ಜಲಸಂಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಹಲವಾರು ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೆ ಹೊರಡಿಸಿದೆ ಎಂದು ಇರಾನ್ ಸುದ್ದಿ ಸಂಸ್ಥೆ ತಸ್ಲಿಮ್ ವರದಿ ಮಾಡಿದೆ.
ಇರಾನ್ ಹಡಗು ಸಂಚಾರದ ಮೇಲೆ ಅಮೆರಿಕ ಮತ್ತೆ ದಿಗ್ಧಂಧನವನ್ನು ಹೇರುತ್ತಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದಕ್ಕೂ ಮುನ್ನ ಘೋಷಿಸಿದ್ದರು. ಅಲ್ಲದೆ, ಭದ್ರತಾ ವೆಚ್ಚವನ್ನು ಸರಿದೂಗಿಸಲು ಜಲಸಂಧಿಯ ಮೂಲಕ ಹಾದುಹೋಗುವ ಅರ್ಹ ಸರಕು ಸಾಗಣೆಯ ಮೇಲೆ ಅಮೆರಿಕ ಶೇಕಡಾ 20 ರಷ್ಟು ಶುಲ್ಕವನ್ನು ವಿಧಿಸಲಿದೆ ಎಂದು ಅವರು ಹೇಳಿದ್ದರು.


Spread the love
Share:

administrator

Leave a Reply

Your email address will not be published. Required fields are marked *