Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇರಾನ್ ಮೇಲೆ ಅಮೆರಿಕದ ದಾಳಿ: ಮಹಶರ್‌ನಲ್ಲಿ ನೀರು ಪಂಪಿಂಗ್ ಕೇಂದ್ರದ ಸಿಬ್ಬಂದಿ ಬಲಿ; ಓರ್ವ ಸಾ*ವು, ನಾಲ್ವರಿಗೆ ಗಾಯ!

Spread the love

ಟೆಹರಾನ್: ಇರಾನ್ ನ ಖುಝಸ್ತಾನ್ ಪ್ರಾಂತ್ಯದ ಮಹಶರ್ ನಲ್ಲಿರುವ ಕೃಷಿ ನೀರು ಪಂಪಿಂಗ್ ಕೇಂದ್ರದ ಮೇಲೆ ಅಮೆರಿಕ ನಡೆಸಿದ ಉತ್ತೇಪಕ ದಾಳಿಯಲ್ಲಿ ಕೇಂದ್ರದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಇರಾನ್ ನ ಸರ್ಕಾರಿ ಸುದ್ದಿ ಸಂಸ್ಥೆ IRNA ವರದಿ ಮಾಡಿದೆ.
ಸೋಮವಾರ ಮುಂಜಾನೆ ದಾಳಿ ನಡೆದಿದ್ದು, ಮೃತಪಟ್ಟವರು ನೀರು ಪಂಪಿಂಗ್ ಕೇಂದ್ರದ ಸಿಬ್ಬಂದಿಯಾಗಿದ್ದರು ಎಂದು ಖುಜೆಸ್ತಾನ್ ಪ್ರಾಂತ್ಯದ ಭದ್ರತೆ ಮತ್ತು ಕಾನೂನು ಜಾರಿ ಇಲಾಖೆಯ ಉಪ ಗವರ್ನರ್ ವಲಿಯೊಲ್ಲಾ ಹಯಾತಿ ತಿಳಿಸಿದ್ದಾರೆ.
ಗಾಯಗೊಂಡ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿಯನ್ನು ತುರ್ತು ವೈದ್ಯಕೀಯ ಮತ್ತು ಆರೋಗ್ಯ ತಂಡಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ ಎಂದು ವರದಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *