Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಕ್ಸ್‌ಬಾಕ್ಸ್‌ಗೆ ಸಂಕಷ್ಟ: 3,200 ಉದ್ಯೋಗಿಗಳ ವಜಾ; ಗೇಮಿಂಗ್ ಸ್ಟುಡಿಯೊಗಳ ಮಾರಾಟಕ್ಕೂ ನಿರ್ಧಾರ!

Spread the love

ಹೊಸದಿಲ್ಲಿ: ಮೈಕ್ರೋಸಾಫ್ಟ್ ಒಡೆತನದ ಗೇಮಿಂಗ್ ಸಂಸ್ಥೆ ‘ಎಕ್ಸ್ಬಾಕ್ಸ್’ ಮುಂದಿನ ಒಂದು ವರ್ಷದ ಅವಧಿಯಲ್ಲಿ ಸುಮಾರು 3,200 ಉದ್ಯೋಗಿಗಳನ್ನು, ಅಂದರೆ ಒಟ್ಟು ಉದ್ಯೋಗಿಗಳ ಶೇಕಡಾ 20ರಷ್ಟು ಮಂದಿಯನ್ನು ಕೆಲಸದಿಂದ ಕೈಬಿಡುವುದಾಗಿ ಘೋಷಿಸಿದೆ.
ಎಕ್ಸ್‌ಬಾಕ್ಸ್ ವ್ಯವಹಾರ ಆರೋಗ್ಯಕರ ಸ್ಥಿತಿಯಲ್ಲಿಲ್ಲ. ಈ ಕ್ರಮವು ಮೈಕ್ರೋಸಾಫ್ಟ್‌ನ ಕೃತಕ ಬುದ್ಧಿಮತ್ತೆ (AI) ಆಧಾರಿತ ಪುನರ್‌ರಚನೆಯ ಭಾಗವಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶಾ ಶರ್ಮಾ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆಶಾ ಶರ್ಮಾ ಈ ಕುರಿತು ಉದ್ಯೋಗಿಗಳಿಗೆ ಇಮೇಲ್ ಸಂದೇಶ ಕಳುಹಿಸಿದ್ದು “ಸೋಮವಾರ 1,600 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು, ಉಳಿದವರನ್ನು 2027ನೇ ಹಣಕಾಸು ವರ್ಷದೊಳಗೆ ಹಂತ ಹಂತವಾಗಿ ಕೆಲಸದಿಂದ ಬಿಡುಗಡೆ ಮಾಡಲಾಗುವುದು” ಎಂದು ಹೇಳಿದ್ದಾರೆ. ಇದರ ಜೊತೆಗೆ, ಎಕ್ಸ್‌ಬಾಕ್ಸ್ ತನ್ನ ನಾಲ್ಕು ಗೇಮಿಂಗ್ ಸ್ಟುಡಿಯೊಗಳನ್ನು ಮಾರಾಟ ಮಾಡಲಿದೆ ಎಂದು ತಿಳಿದು ಬಂದಿದೆ.
“ನಮ್ಮ ವ್ಯವಹಾರವು ಈಗ ಆರೋಗ್ಯಕರ ಸ್ಥಿತಿಯಲ್ಲಿಲ್ಲ. ಇತರ ವೇದಿಕೆಗಳಿಗಿಂತ ನಮ್ಮ ಲಾಭಾಂಶ 3ರಿಂದ 10 ಪಟ್ಟು ಕಡಿಮೆ ಇದೆ. ಉದ್ಯೋಗಿಗಳ ವಜಾ ನಿರ್ಧಾರವು ಅವರ ಪ್ರತಿಭೆ ಅಥವಾ ಸಮರ್ಪಣೆಯ ಪ್ರತಿಬಿಂಬವಲ್ಲ” ಎಂದು ಆಶಾ ಶರ್ಮಾ ಹೇಳಿದ್ದಾರೆ.

“ಈ ನಿರ್ಧಾರ ನೋವಿನ ಸಂಗತಿ ಎಂಬುದು ನನಗೆ ತಿಳಿದಿದೆ. ಈ ಬದಲಾವಣೆಗಳು ಎಕ್ಸ್‌ಬಾಕ್ಸ್ ನಿರ್ಮಾಣಕ್ಕಾಗಿ ತಮ್ಮ ಶ್ರಮವನ್ನು ಅರ್ಪಿಸಿದ ಹಲವರ ಮೇಲೆ ನೇರ ಪರಿಣಾಮ ಬೀರುತ್ತವೆ. ಕೆಲವರು ವಿವಿಧ ಪ್ರಕ್ರಿಯೆಗಳ ಮೂಲಕ ನಮ್ಮೊಂದಿಗೆ ಸೇರಿದ್ದರು. ಇನ್ನು ಕೆಲವರನ್ನು ನಾವು ನೇಮಕ ಮಾಡಿದ್ದೇವೆ ಅಥವಾ ಗೇಮಿಂಗ್ ಉದ್ಯಮ ಹಾಗೂ ಎಕ್ಸ್‌ಬಾಕ್ಸ್ ಮೇಲಿನ ಪ್ರೀತಿಯಿಂದ ಅವರು ಸ್ವಯಂ ನಮ್ಮನ್ನು ಸೇರಿಕೊಂಡಿದ್ದರು. ಇಂದಿನ ಈ ನಿರ್ಧಾರ ಅವರ ಪ್ರತಿಭೆ ಅಥವಾ ಸಮರ್ಪಣೆಯನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಹೇಳಿದ್ದಾರೆ.
ಗೇಮಿಂಗ್ ಉದ್ಯಮವು ತೀವ್ರ ಹಾರ್ಡ್‌ವೇರ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಎಕ್ಸ್‌ಬಾಕ್ಸ್ ಅನ್ನು ಮರುಸಂಘಟಿಸಬೇಕಾಗಿದೆ ಎಂದು ಹೇಳಿದ ಶರ್ಮಾ, ಹೆಲೆನ್ ಚಿಯಾಂಗ್ ಅವರಿಗೆ ಎಕ್ಸ್‌ಬಾಕ್ಸ್ ಮುಖ್ಯ ಆಪರೇಟಿಂಗ್ ಆಫೀಸರ್ ಹುದ್ದೆಗೆ ಬಡ್ತಿ ನೀಡುವುದಾಗಿ ಘೋಷಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *