ಕುರಿ ಮಾಂಸದ ಹೆಸರಿನಲ್ಲಿ ಗೋಮಾಂಸ ಪೂರೈಕೆ – ಅಂಗಡಿ ಮಾಲೀಕ ಸೇರಿ ಇಬ್ಬರ ಬಂಧನ!

ಹೈದರಾಬಾದ್: ನಗರದ ಹಲವಾರು ಹೋಟೆಲ್ಗಳಿಗೆ ಕುರಿ ಮಾಂಸದ ಬದಲಿಗೆ ಗೋಮಾಂಸವನ್ನು ಪೂರೈಸುತ್ತಿದ್ದ ಆರೋಪದ ಮೇಲೆ ಹೈದರಾಬಾದ್‌ನ ಕೇಂದ್ರ ಅಪರಾಧ ಠಾಣೆ (ಸಿಸಿಎಸ್), ಹೈದರಾಬಾದ್ ಆಹಾರ ಕಲಬೆರಕೆ ಕಣ್ಣಾವಲು ತಂಡ (ಎಚ್-ಫಾಸ್ಟ್)ದ ಅಪರಾಧ ತಂಡವು ಮಂಗಳವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಮಲ್ಲೆಪಲ್ಲಿಯಲ್ಲಿರುವ ಉಸ್ಮಾನ್ ಮಾಂಸದ ಅಂಗಡಿಯ ಮಾಲೀಕ ಮೊಹಮ್ಮದ್ ಉಸ್ಮಾನ್ ಮತ್ತುಅಯಾನ್ ಬೀಫ್ ಅಂಗಡಿಯ ಕೆಲಸಗಾರ ಮೊಹಮ್ಮದ್ ಜಹಾಂಗೀರ್ ಪಾಷಾ ಎಂದು ಗುರುತಿಸಲಾಗಿದೆ.ಹೈದರಾಬಾದ್ ಪೊಲೀಸರ ಪ್ರಕಾರ, ಇವರಿಬ್ಬರು ಹೋಟೆಲ್‌ಗಳಿಗೆ ಕುರಿ ಮಾಂಸದ ಬದಲಿಗೆ ಗೋಮಾಂಸವನ್ನು ಪೂರೈಸುತ್ತಿದ್ದರು ಎನ್ನಲಾಗಿದೆ.
ಕಾರ್ಯಾಚರಣೆಯ ಸಮಯದಲ್ಲಿ ಗೋಮಾಂಸದೊಂದಿಗೆ ಬೆರೆಸಿದ 50 ಕೆಜಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳನ್ನು ಹಬೀಬ್ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
