Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೆನೆಜುವೆಲಾದಲ್ಲಿ ಅವಳಿ ಭೂಕಂಪದ ಅಟ್ಟಹಾಸ: ಸಾವಿನ ಸಂಖ್ಯೆ 188ಕ್ಕೆ ಏರಿಕೆ; ಸಾವಿರ ದಾಟುವ ಭೀತಿ!

Spread the love

ಕ್ಯಾರಕಸ್: ಅವಳಿ ಭೂಕಂಪಗಳಿಂದ ತತ್ತರಿಸಿರುವ ವೆನೆಜುವೆಲಾದಲ್ಲಿ ಕುಸಿದ ಕಟ್ಟಡಗಳ ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ಅಧಿಕೃತವಾಗಿ ಸಾವಿನ ಸಂಖ್ಯೆ 188ಕ್ಕೇರಿದೆ. ಆದರೆ ಅವಶೇಷಗಳಡಿ ಇನ್ನೂ ಸಾಕಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಸಾವಿರವನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.
ರಾಜಧಾನಿ ಕ್ಯಾರಕಸ್‌ನಿಂದ 160 ಕಿಲೋಮೀಟರ್ ಪಶ್ಚಿಮಕ್ಕೆ 7.2 ತೀವ್ರತೆಯ ಭೂಕಂಪ ಹಾಗೂ ಬಳಿಕ ಕೆಲವೇ ನಿಮಿಷಗಳಲ್ಲಿ 7.5 ತೀವ್ರತೆಯ ಭೂಕಂಪಗಳು ಸಂಭವಿಸಿದ್ದವು. ಸಾರ್ವಜನಿಕ ರಜಾದಿನದಂದು ಭೂಕಂಪ ಸಂಭವಿಸಿದ್ದರಿಂದ ಬಹಳಷ್ಟು ಮಂದಿ ಮನೆಗಳಲ್ಲೇ ಉಳಿದುಕೊಂಡಿದ್ದರು. ಇದು ಸಾವು-ನೋವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುರ್ಘಟನೆಯಲ್ಲಿ 188 ಮಂದಿ ಮೃತಪಟ್ಟಿದ್ದು, 1520 ಮಂದಿ ಗಾಯಗೊಂಡಿದ್ದಾರೆ ಎಂದು ವೆಜೆನುವೆಲಾ ನ್ಯಾಷನಲ್ ಅಸೆಂಬ್ಲಿ ಅಧ್ಯಕ್ಷ ಜಾರ್ಜ್ ರೋಡ್ರಿಗಸ್ ಹೇಳಿದ್ದಾರೆ.
“ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ಹೊರತೆಗೆಯಲು ಭಾರಿ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ಘಟನೆಯಲ್ಲಿ ಹಾನಿಗೀಡಾಗಿರುವ ಆಸ್ಪತ್ರೆ ಹಾಗೂ ಮನೆಗಳ ಪುನರ್‌ನಿರ್ಮಾಣಕ್ಕೆ 200 ದಶಲಕ್ಷ ಡಾಲ‌ರ್ ನಿಧಿಯನ್ನು ಸ್ಥಾಪಿಸಲಾಗಿದೆ” ಎಂದು ಹಂಗಾಮಿ ಅಧ್ಯಕ್ಷೆ ಡೆಲ್ಕಿ ರೋಡ್ರಿಗಸ್ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ಬಳಿಕ ಹಂಗಾಮಿ ಅಧ್ಯಕ್ಷರಾಗಿ ಡೆಲ್ಕಿ ರೋಡ್ರಿಗಸ್ ಅಧಿಕಾರ ವಹಿಸಿಕೊಂಡಿದ್ದರು.
ನಗರದ ವಿಮಾನ ನಿಲ್ದಾಣ ಇರುವ ಲಾ ಗುವೈರಾ ರಾಜ್ಯದಲ್ಲಿ ಅತಿಹೆಚ್ಚು ಸಾವು-ನೋವು ಸಂಭವಿಸಿದೆ. ವಿಮಾನ ನಿಲ್ದಾಣದ ಛಾವಣಿ ಕುಸಿಯುತ್ತಿರುವ ಹಾಗೂ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವವರ ಭಯಾನಕ ಚಿತ್ರಣವನ್ನು ಬಿಂಬಿಸುವ ವಿಡಿಯೊಗಳು ಹರಿದಾಡುತ್ತಿವೆ.
ಘಟನೆಯಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿರಬಹುದು ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೇ ಅಂದಾಜಿಸಿದೆ.


Spread the love
Share:

administrator

Leave a Reply

Your email address will not be published. Required fields are marked *