Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟಿಎಂಸಿ ಆಂತರಿಕ ಕದನ: ಮಮತಾ ಬ್ಯಾನರ್ಜಿಯೇ ಪಕ್ಷದ ಅಧ್ಯಕ್ಷೆ ಎಂದು ಚುನಾವಣಾ ಆಯೋಗಕ್ಕೆ ಪಟ್ಟಿ ಸಲ್ಲಿಕೆ!

Spread the love

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷವು ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಹೊಸ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಅದರಲ್ಲಿ ಮಮತಾ ಬ್ಯಾನರ್ಜಿ ಪಕ್ಷದ ಮುಖ್ಯಸ್ಥರು ಎಂದು ಪ್ರತಿಪಾದಿಸಲಾಗಿದೆ.
ಮಂಗಳವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪಟ್ಟಿಯ ಪ್ರಕಾರ, ಮಮತಾ ಬ್ಯಾನರ್ಜಿ ಅವರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದು, ಸುಬ್ರತಾ ಬಕ್ಷಿ ಉಪಾಧ್ಯಕ್ಷರಾಗಿದ್ದಾರೆ ಮತ್ತು ಅಭಿಷೇಕ್ ಬ್ಯಾನರ್ಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಲೋಕಸಭೆಯ ನಾಯಕರಾಗಿದ್ದಾರೆ.

ಪಟ್ಟಿಯಲ್ಲಿ ಡೆರೆಕ್ ಓಬ್ರಿಯಾನ್ ಮತ್ತು ಡೋಲಾ ಸೇನ್ ಅನ್ನು ಜಂಟಿ ಕಾರ್ಯದರ್ಶಿಗಳಾಗಿ ಮತ್ತು ಸುಭಾಶಿಶ್ ಚಕ್ರವರ್ತಿ ಖಜಾಂಚಿ ಎಂದು ಹೇಳಲಾಗಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಮಮತಾ ಬ್ಯಾನರ್ಜಿ, ಸುಬ್ರತಾ ಬಕ್ಷಿ, ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಓಬ್ರಿಯಾನ್, ಡೋಲಾ ಸೇನ್ ಮತ್ತು ಸುಭಾಶಿಶ್ ಚಕ್ರವರ್ತಿಯವರಿದ್ದಾರೆ.
ಇದಲ್ಲದೆ ಚಂದ್ರಿಮಾ ಭಟ್ಟಾಚಾರ್ಯ, ಅಮಿತ್ ಮಿತ್ರಾ, ರಾಜೇಶ್ ಪತಿ ತ್ರಿಪಾಠಿ, ಅಸಿಮಾ ಪಾತ್ರಾ, ಮೊಲೊಯ್ ಘಟಕ್, ಗೌತಮ್ ದೇಬ್, ಸೋಭಾಂದೇಬ್ ಚಟ್ಟೋಪಾಧ್ಯಾಯ, ಬುಲು ಚಿಕ್ ಬರೈಕ್, ಮುಕುಲ್ ಸಂಗ್ಯಾ ಬೈಸ್ವಾನೋರ್‌ ಚಟ್ಟೋಪಾಧ್ಯಾಯ, ಬಿರ್ಬಹಾ ಹಂಸ್ವಾ ಕಲ್ಯಾಣ್ ಬ್ಯಾನರ್ಜಿ, ಸೌಗತ ರಾಯ್, ನದಿಮುಲ್ ಹಕ್, ಮದನ್ ಮಿತ್ರ, ಬಿಮನ್ ಬ್ಯಾನರ್ಜಿ, ಮಹುವಾ ಮೊಯಿತ್ರಾ ಮತ್ತು ಕುನಾಲ್ ಘೋಷ್ ಅವರಿದ್ದಾರೆ.
ಚಂದ್ರಿಮಾ ಭಟ್ಟಾಚಾರ್ಯ ಅವರು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮತ್ತು ಪಶ್ಚಿಮ ಬಂಗಾಳ ಟಿಎಂಸಿ ಅಧ್ಯಕ್ಷರಾಗಿ ಹಾಗೂ ಶೋಭಾಂದೇವ್ ಚಟ್ಟೋಪಾಧ್ಯಾಯ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ನಾಯಕನಾಗಿ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯ ಬಣವು ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷರ ಹುದ್ದೆಯಿಂದ ಉಚ್ಚಾಟಿಸಿ ಶಾಸಕ ಅರೂಪ್ ರಾಯ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಇದರ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *