ದೋಹಾ ಡೈಮಂಡ್ ಲೀಗ್: ಜಾವೆಲಿನ್ ಎಸೆತದಲ್ಲಿ 4ನೇ ಸ್ಥಾನ ಪಡೆದ ನೀರಜ್ ಚೋಪ್ರಾ; ಕಾಮನ್‌ವೆಲ್ತ್ ಕೂಟಕ್ಕೆ ಅಧಿಕೃತ ಅರ್ಹತೆ!

ದೋಹಾ: ದೋಹಾ ಡೈಮಂಡ್ ಲೀಗ್‌ನಲ್ಲಿ ಭಾರತದ ಖ್ಯಾತ ಅಥೀಟ್ ನೀರಜ್ ಚೋಪ್ರಾ ನಾಲ್ಕನೇ ಸ್ಥಾನ ಗಳಿಸಿ ಮುಂಬರುವ ಕಾಮನ್‌ವೆಲ್ತ್ ಕೂಟಕ್ಕೆ ಅರ್ಹತೆ ಸಂಪಾದಿಸಿದರು. ಶುಕ್ರವಾರ ನಡೆದ ಲೀಗ್‌ನಲ್ಲಿ 85.69 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ನಾಲ್ಕನೇ ಸ್ಥಾನ ಗಳಿಸಿದರೆ, 88.68 ಮೀಟರ್‌ನೊಂದಿಗೆ ಶ್ರೀಲಂಕಾದ ರುಮೇಶ್ ಪತಿರಂಗೆ ಅಗ್ರಸ್ಥಾನಿಯಾದರು.
ಗ್ರೆನಾಡಾದ ಆ್ಯಂಡರ್ಸನ್ ಪೀಟರ್ಸ್ (86.38) ಮತ್ತು ಅಮೆರಿಕದ ಕರ್ಟಿಸ್ ಥಾಂಪ್ಸನ್ (85.99) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು. ಬೆನ್ನು ಗಾಯದ ಸಮಸ್ಯೆಯಿಂದ ವಾಪಸ್ಸಾಗಿರುವ ನೀರಜ್ ಪ್ರಥಮ ಎಸೆತದಲ್ಲಿ ಫೇಲ್ ಆದರು. ಎರಡನೇ ಥೋನಲ್ಲಿ 82.77 ಮೀಟರ್ ದೂರಕ್ಕೆ ಎಸೆದು ಕಾಮನ್‌ವೆಲ್ತ್ ಗೇಮ್ಸ್-2026ಕ್ಕೆ ಅರ್ಹತೆ ಸಂಪಾದಿಸಿದರು. ಮೂರನೇ ಪ್ರಯತ್ನದಲ್ಲಿ ನೀರಜ್ ಅವರ ಅತ್ಯುತ್ತಮ ಥೋ ಮೂಡಿಬಂತು.
