Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಷಿಂಗ್ಟನ್: ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ ಇರಾನ್; ಅಮೆರಿಕದಿಂದ ಹೆವಿ ಮಿಲಿಟರಿ ಪ್ರತಿದಾಳಿ ಆರಂಭ!

Spread the love

ವಾಷಿಂಗ್ಟನ್: ಅಮೆರಿಕದ ಸೇನೆಯ ಅಪಾಚೆ ಹೆಲಿಕಾಪ್ಟರ್ ಅನ್ನು ಇರಾನ್ ಹೊಡೆದುರುಳಿಸಿದ ಬೆನ್ನಲ್ಲೇ, ತನ್ನ ಪಡೆಗಳು ಇರಾನ್ ವಿರುದ್ಧ ಸ್ವರಕ್ಷಣಾ ದಾಳಿಗಳನ್ನು ಆರಂಭಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.
‘ನಿನ್ನೆ ಅಮೆರಿಕದ ಸೇನಾ ಅಪಾಚೆ ಹೆಲಿಕಾಪ್ಟರ್ ಉರುಳಿಸುವಿಕೆಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಗಿದೆ’ ಎಂದು CENTCOM ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ದಾಳಿಯನ್ನು ದೃಢಪಡಿಸಿದ್ದು, ‘ಅವರು ನಮ್ಮ ಹೆಲಿಕಾಪ್ಟ‌ರ್ ಅನ್ನು ಹೊಡೆದುರುಳಿಸಿದ್ದಾರೆ. ನಾವು ಮಾತನಾಡುತ್ತಿರುವಾಗಲೇ ಪ್ರತಿಕ್ರಿಯೆ ನಡೆಯುತ್ತಿದೆ. ಪ್ರತಿಕ್ರಿಯೆ ಅತ್ಯಂತ ಬಲಿಷ್ಠ ಹಾಗೂ ಶಕ್ತಿಯುತವಾಗಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ABC ನ್ಯೂಸ್ ಗೆ ತಿಳಿಸಿದ್ದಾರೆ.

ಇದಾದ ಬಳಿಕ ಇರಾನ್ ನ ಹಾರ್ಮೋಝ್ ಗನ್ ಪ್ರಾಂತ್ಯದ ವಿವಿಧ ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಸಿರಿಕ್ ಬಂದರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಮೆಹರ್ ಸುದ್ದಿ ಸಂಸ್ಥೆ ತಿಳಿಸಿದೆ.
ಕುಹೆಸ್ತಾಕ್, ಸಿರಿಕ್ ಹಾಗೂ ಮಿನಾಬ್ ಸೇರಿದಂತೆ ಹಾರ್ಮೋಝ್ ಗನ್ ಪ್ರಾಂತ್ಯದ ಪೂರ್ವ ಭಾಗಗಳಲ್ಲಿಯೂ ಸ್ಫೋಟಗಳು ಸಂಭವಿಸಿವೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರಾಂತ್ಯದ ಕೆಲವು ಭಾಗಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಂಡಿರುವುದಾಗಿಯೂ ಅದು ತಿಳಿಸಿದೆ.

ಕ್ವೆಸ್ಟ್ ದ್ವೀಪ, ಜಾಸ್ಕ್ ಸಿರಿಕ್ ಮತ್ತು ಕುಹ್-ಇ ಮೊಬಾರಕ್ ಪ್ರದೇಶಗಳು ಅಮೆರಿಕದ ದಾಳಿಯ ಗುರಿಯಾಗಿದ್ದವು ಎಂದು ಇರಾನಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ದಾಳಿಗಳ ಬಳಿಕ ಪರಿಸ್ಥಿತಿ ಶಾಂತವಾಗಿದ್ದು, ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದೂ ತಿಳಿಸಿವೆ.
ಜಾಸ್ಕ್ ಕೌಂಟಿ, ಬಂದ‌ರ್ ಅಬ್ಬಾಸ್ ಮತ್ತು ಕ್ವೆಸ್ಟ್ ದ್ವೀಪದಲ್ಲಿ ಬಳಿಕವೂ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ. ಬುಧವಾರ ಮುಂಜಾನೆಯಿಂದ ಎರಡನೇ ಸುತ್ತಿನ ಸ್ಫೋಟಗಳು ಕೇಳಿ ಬಂದಿದೆ. ಸಿರಿಕ್ ನ ಬೆಮಾನಿ ಜಿಲ್ಲೆಯಲ್ಲಿ ಎರಡು ನೀರಿನ ಘಟಕಗಳು ದಾಳಿಯಿಂದ ನಾಶವಾಗಿವೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *