ಪುಣೆ: ಚೀನಾ ಯಂತ್ರ ಬಳಸಿ ಭ್ರೂಣದ ಲಿಂಗ ಪತ್ತೆ ಹಚ್ಚುತ್ತಿದ್ದ ದಂಧೆ ಪತ್ತೆ; ನಕಲಿ ವೈದ್ಯ ಸೇರಿ ಇಬ್ಬರ ಬಂಧನ!

ಪುಣೆ: ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದ ವ್ಯಕ್ತಿಯೊಬ್ಬ ಚೀನಾ ನಿರ್ಮಿತ ಪೋರ್ಟಬಲ್ ಅಲ್ಟಾಸೌಂಡ್ ಯಂತ್ರ ಬಳಸಿ ಭ್ರೂಣದ ಲಿಂಗ ಪತ್ತೆ ಪರೀಕ್ಷೆ ನಡೆಸುತ್ತಿದ್ದ ಅಕ್ರಮ ಜಾಲವನ್ನು ಪುಣೆ ಜಿಲ್ಲಾ ಪೊಲೀಸರು ಭೇದಿಸಿದ್ದು, ಆಯುರ್ವೇದ ವೈದ್ಯ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ವೈದ್ಯರ ಪಾತ್ರ ಹಾಗೂ ಹೆಣ್ಣು ಭ್ರೂಣ ಪತ್ತೆಯಾದ ಬಳಿಕ ನಡೆದಿರುವ ಅಕ್ರಮ ಗರ್ಭಪಾತಗಳ ಕುರಿತು ತನಿಖೆ ಮುಂದುವರಿದಿದೆ.
ದೌಂಡ್ ತಹಸಿಲ್ ನಲ್ಲಿ ಅಕ್ರಮ ಲಿಂಗ ಪತ್ತೆ ಪರೀಕ್ಷೆಗಳು ನಡೆಯುತ್ತಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿತ್ತು.

ಪ್ರಮುಖ ಆರೋಪಿ ಅಣ್ಣಾಸಾಹೇಬ್ ಗಿರಿ 12ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದು, ಯಾವುದೇ ವೈದ್ಯಕೀಯ ಅರ್ಹತೆ ಹೊಂದಿಲ್ಲ. ಬಿ.ಫಾರ್ಮಸಿ ಕೋರ್ಸ್‌ಗೆ ಸೇರಿದ್ದರೂ ಮೊದಲ ವರ್ಷದಲ್ಲೇ ಅನುತ್ತೀರ್ಣನಾದ ಕಾರಣ ವ್ಯಾಸಂಗವನ್ನು ಕೈಬಿಟ್ಟಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಗಿರಿ 2024ರಿಂದ ಈ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಯಾವತ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ನಾರಾಯಣ ದೇಶಮುಖ್ ಹೇಳಿದ್ದಾರೆ.
ಭ್ರೂಣದ ಲಿಂಗ ಪತ್ತೆಗಾಗಿ ಆತ ಬ್ಲೂಟೂತ್ ಮೂಲಕ ಮೊಬೈಲ್ ಅಪ್ಲಿಕೇಶನ್‌ಗೆ ಸಂಪರ್ಕ ಕಲ್ಪಿಸಲಾದ ಚೀನಾ ನಿರ್ಮಿತ ಪೋರ್ಟಬಲ್ ಅಲ್ಪಾಸೌಂಡ್ ಸಾಧನ ಬಳಸುತ್ತಿದ್ದ. ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದ್ದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲಿಂಗ ಪತ್ತೆ ಪರೀಕ್ಷೆಗಾಗಿ ಗಿರಿ 5,000 ರೂ. ವಿನಿಂದ 15,000ರೂ. ವರೆಗೆ ಶುಲ್ಕ ವಸೂಲಿ ಮಾಡುತ್ತಿದ್ದ. ಹೆಣ್ಣು ಭ್ರೂಣ ಪತ್ತೆಯಾದ ಸಂದರ್ಭಗಳಲ್ಲಿ ಗರ್ಭಪಾತ ನಡೆಸಲು ಸಿದ್ಧರಿದ್ದ ವೈದ್ಯರ ಬಳಿಗೆ ಗರ್ಭಿಣಿಯರನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣದಲ್ಲಿ ವಾಘೋಲಿಯ ಬಿಎಎಂಎಸ್ ವೈದ್ಯ ಅತುಲ್ ಜಾಧವ್ ನನ್ನೂ ಬಂಧಿಸಲಾಗಿದೆ. ಇನ್ನಿಬ್ಬರು ವೈದ್ಯರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಆರೋಪಿಗಳು ‘ರೆಫರಲ್ ಜಾಲದ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಗರ್ಭಿಣಿಯರನ್ನು ಮೊದಲು ಗಿರಿಯ ಬಳಿ ಲಿಂಗ ಪತ್ತೆ ಪರೀಕ್ಷೆಗೆ ಕಳುಹಿಸಿ, ಬಳಿಕ ಗರ್ಭಪಾತಕ್ಕಾಗಿ ಜಾಲಕ್ಕೆ ಸಂಬಂಧಿಸಿದ ವೈದ್ಯರ ಬಳಿಗೆ ರವಾನಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಗಿರಿ ಪ್ರತಿ ತಿಂಗಳು 15ರಿಂದ 20 ಮಹಿಳೆಯರಿಗೆ ಪರೀಕ್ಷೆ ನಡೆಸುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಆದರೆ ಅವರೆಲ್ಲರೂ ಗರ್ಭಪಾತಕ್ಕೆ ಒಳಗಾಗಿದ್ದಾರೆ ಎಂಬುದು ಖಚಿತವಾಗಿಲ್ಲ. ಈ ಸಂಬಂಧ ಡಿಜಿಟಲ್ ಸಂವಹನಗಳು ಹಾಗೂ ಇತರ ಸಾಕ್ಷಾಧಾರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ದೇಶಮುಖ್ ಹೇಳಿದ್ದಾರೆ.
ಗಿರಿಗೆ ಅಲ್ಟಾಸೌಂಡ್ ಯಂತ್ರ ಪೂರೈಸಿದ ಆರೋಪ ಎದುರಿಸುತ್ತಿರುವ ನರೇಂದ್ರ ಠಾಕರೆಯನ್ನು ಪ್ರಕರಣದಲ್ಲಿ ಕಸ್ಟಡಿಗೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಇದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಠಾಕರೆಯನ್ನು ಈ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗಿರಿ ಪ್ರತಿ ತಿಂಗಳು 15ರಿಂದ 20 ಮಹಿಳೆಯರಿಗೆ ಪರೀಕ್ಷೆ ನಡೆಸುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಆದರೆ ಅವರೆಲ್ಲರೂ ಗರ್ಭಪಾತಕ್ಕೆ ಒಳಗಾಗಿದ್ದಾರೆ ಎಂಬುದು ಖಚಿತವಾಗಿಲ್ಲ. ಈ ಸಂಬಂಧ ಡಿಜಿಟಲ್ ಸಂವಹನಗಳು ಹಾಗೂ ಇತರ ಸಾಕ್ಷಾಧಾರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ದೇಶಮುಖ್ ಹೇಳಿದ್ದಾರೆ.
ಗಿರಿಗೆ ಅಲ್ಟಾಸೌಂಡ್ ಯಂತ್ರ ಪೂರೈಸಿದ ಆರೋಪ ಎದುರಿಸುತ್ತಿರುವ ನರೇಂದ್ರ ಠಾಕರೆಯನ್ನು ಪ್ರಕರಣದಲ್ಲಿ ಕಸ್ಟಡಿಗೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಇದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಠಾಕರೆಯನ್ನು ಈ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಅವರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಗಿರಿ ತಿಂಗಳಿಗೆ 30ರಿಂದ 50 ಲಿಂಗ ಪತ್ತೆ ಪರೀಕ್ಷೆಗಳನ್ನು ನಡೆಸಿರುವ ಸಾಧ್ಯತೆ ವ್ಯಕ್ತವಾಗಿದೆ.
ಹೆಣ್ಣು ಭ್ರೂಣ ಪತ್ತೆಯಾದಲ್ಲಿ ಪ್ರಕರಣಗಳನ್ನು ಜಾಲದಲ್ಲಿ ಭಾಗಿಯಾಗಿದ್ದ ಇತರ ವೈದ್ಯರ ಬಳಿಗೆ ಉಲ್ಲೇಖಿಸಲಾಗುತ್ತಿತ್ತು. ಕಳೆದ ಎರಡರಿಂದ ಮೂರು ವರ್ಷಗಳಿಂದ ಗಿರಿ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ. ಆದರೆ ಈ ಅವಧಿಯಲ್ಲಿ ನಡೆದಿರುವ ಅಕ್ರಮ ಗರ್ಭಪಾತಗಳ ನಿಖರ ಸಂಖ್ಯೆಯನ್ನು ಇನ್ನೂ ದೃಢಪಡಿಸಿಲ್ಲ. ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಗಿಲ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಭಧಾರಣಾಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಜ್ಞಾನ (PCPNDT) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.