Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾವಿರ ರೂ.ಗೆ ಹೆತ್ತ ಮಗಳನ್ನೇ ಮಾರಿದ ಪಾಪಿ ತಾಯಿ; ಬಾಲಕಿ ಮೇಲೆ ಭೀಕರ ಅತ್ಯಾಚಾ*ರ, ಆರೋಪಿಗಳು ಅರೆಸ್ಟ್!

Spread the love

ವಾರಾಣಾಸಿ: ಕೇವಲ 16 ಸಾವಿರ ರೂಪಾಯಿ ಹಾಗೂ 10 ಸೀರೆಗಾಗಿ ಮಹಿಳೆಯೊಬ್ಬಳು ಸ್ವಂತ ಪುತ್ರಿಯನ್ನೇ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಭಯಾನಕ ಪ್ರಕರಣ ಇಷ್ಟಕ್ಕೇ ಮುಗಿಯದೇ, ಬಿಹಾರ ಮೂಲದ ಈ 12 ವರ್ಷದ ಬಾಲಕಿಯನ್ನು ಖರೀದಿ ಮಾಡಿದ 40 ವರ್ಷದ ವ್ಯಕ್ತಿ ಆಕೆಯನ್ನು ಅನಧಿಕೃತವಾಗಿ ವಿವಾಹವಾಗಿ ಹಲವು ಬಾರಿ ಅತ್ಯಾಚಾರ ಎಸಗಿ ಬಿಟ್ಟುಹೋಗಿದ್ದಾನೆ. ಬಳಿಕ ಆಟೊ ಚಾಲಕನೊಬ್ಬ ಈ ಬಾಲಕಿಯನ್ನು ಬಲೆಗೆ ಬೀಳಿಸಿಕೊಂಡಿದ್ದು, ಅಂತಿಮವಾಗಿ ಆಕೆಯನ್ನು ರಕ್ಷಿಸಲಾಗಿದೆ.
ಚಂದೌಲಿಯ ಲದ್ರು ಯಾದವ್ ಅಲಿಯಾಸ್ ರಾಕೇಶ್ ಎಂಬ ವಿಧುರ, ಕಡಿಮೆ ವಯಸ್ಸಿನವನಂತೆ ಕಾಣಲು ದೆಹಲಿಯಲ್ಲಿ ಸುಮಾರು 90 ಸಾವಿರ ರೂಪಾಯಿ ವೆಚ್ಚದಲ್ಲಿ ಕೂದಲು ಕಸಿ ಮಾಡಿಸಿಕೊಂಡು ಬಾಲಕಿಯನ್ನು ಅನಧಿಕೃತವಾಗಿ ವಿವಾಹವಾಗಿದ್ದ.

ವಾರಾಣಾಸಿಯ ಸಾರನಾಥದಲ್ಲಿ ಮೇ 21ರಂದು ಅಳುತ್ತಾ ತಿರುಗಾಡುತ್ತಿದ್ದ ಬಾಲಕಿಯ ಬಗ್ಗೆ ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಒಪ್ಪಿಸಲಾಗಿದೆ. ಬಾಲಕಿ ಸಮಿತಿ ಮುಂದೆ ಮಕ್ಕಳ ಮಾರಾಟ, ಲೈಂಗಿಕ ಕಿರುಕುಳ ಮತ್ತು ಕೊನೆಗೆ ಅನಾಥವಾಗಿ ಬಿಟ್ಟುಹೋದ ಈ ಭಯಾನಕ ಪ್ರಕರಣವನ್ನು ಬಿಚ್ಚಿಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ, ಯಾದವ್ ಹಾಗೂ ಆಟೊ ಚಾಲಕ ರವಿ ವರ್ಮಾ ಎಂಬುವವರನ್ನು ಬಂಧಿಸಲಾಗಿದೆ.
ಈ ವರ್ಷದ ಜನವರಿಯಲ್ಲಿ ತಾಯಿ ಮಗುವನ್ನು ಮಾರಾಟ ಮಾಡಿದ್ದಾಳೆ. ಪತ್ನಿ ಮೃತಪಟ್ಟ ಬಳಿಕ ಯಾದವ್ ಕುಟುಂಬದಿಂದ ಪ್ರತ್ಯೇಕವಾಗಿ ವಾಸವಿದ್ದ ಹಾಗೂ ಚಂದೌಲಿಯ ಚಹಾನಿಯಾ ಪ್ರದೇಶದ ದೇವಸ್ಥಾನದಲ್ಲಿ ಬಾಲಕಿಯನ್ನು ವಿವಾಹವಾದ ಎಂದು ತನಿಖೆಯಿಂದ ತಿಳಿದು ಬಂದಿದೆ. ಬಳಿಕ ಪದೇ ಪದೇ ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಜತೆಗೆ, ಬಾಲಕಿಯಿಂದ ತನ್ನ ಮನೆಕೆಲಸ ಮಾಡಿಸುತ್ತಿದ್ದ ಎಂದು ಎಸಿಪಿ ವಿದುಶ್ ಸಕ್ಷೇನಾ ವಿವರ ನೀಡಿದ್ದಾರೆ. ಸ್ಥಳೀಯರು ಹಾಗೂ ನೆರೆಯವರು ಯಾದವ್‌ಗೆ ಎಚ್ಚರಿಕೆ ನೀಡಿ, ಬಾಲಕಿಯನ್ನು ಮನೆಯಲ್ಲಿಟ್ಟುಕೊಂಡರೆ ಗಂಭೀರ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
ಬಳಿಕ ಯಾದವ್ ಮೇ 19ರಂದು ಬಾಲಕಿಯನ್ನು ಬನಾರಸ್ ರೈಲು ನಿಲ್ದಾಣದಲ್ಲಿ ಬಿಟ್ಟುಬಂದಿದ್ದಾನೆ. ಅಲ್ಲಿ ಜಾರ್ಖಂಡ್ ಮೂಲದ ಆಟೊ ಚಾಲಕ ವರ್ಮಾ ಬಾಲಕಿಯ ಬಳಿ ಬಂದು ತಾಯಿ ಬಳಿಗೆ ಕರೆದೊಯ್ಯುವುದಾಗಿ ಪುಸಲಾಯಿಸಿ, ಕೆರೆ ಬದಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮೇ 21ರಂದು ಆಕೆಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ದನ್ನು ಬಾಲಕಿ ವಿವರಿಸಿದ್ದಾಳೆ.


Spread the love
Share:

administrator

Leave a Reply

Your email address will not be published. Required fields are marked *