Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು 500 ಮೀಟರ್ ಎಳೆದೊಯ್ದ ಸಾಲಗಾರ!

Spread the love

ಮೈಸೂರು: ಹಣ ಮರುಪಾವತಿ ವಿಚಾರದಲ್ಲಿ ಸಾಲಗಾರನ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಸುಮಾರು 500 ಮೀಟರ್ ಎಳೆದೊಯ್ದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ಆಂದೋಲನ ವೃತ್ತದ ಬಳಿಯ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ಕುವೆಂಪುನಗರ ಪೊಲೀಸ್ ಠಾಣೆ ರಸ್ತೆಯವರೆಗೆ ಜನನಿಬಿಡ ರಸ್ತೆ ಮೂಲಕ ವಾಹನವು ವೇಗವಾಗಿ ಚಲಿಸಿದೆ. ಕೆಂಪು ಮಾರುತಿ ಸುಜುಕಿ ಬಲೆನೊ ಕಾರಿನ ಬಾನೆಟ್‌ನಲ್ಲಿ ವ್ಯಕ್ತಿಯೊಬ್ಬರನ್ನು ಎಳೆದೊಯ್ಯುತ್ತಿರುವುದನ್ನು ಕಂಡು ಜನರು ದಂಗಾಗಿದ್ದಾರೆ .
ಧನಂಜಯ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಗೆ ಮಹಾದೇವ್ ಎಂಬುವವರು ಸಾಲ ನೀಡಿದ್ದರು. ಸಾಲ ವಾಪಸ್ ಕೊಡಲು ಆತನನ್ನು ಸಂಪರ್ಕಿಸಿದಾಗ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಜಗಳ ಜಾಸ್ತಿಯಾಗುತ್ತಿದ್ದಂತೆ, ಧನಂಜಯ್ ತನ್ನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಅವನನ್ನು ತಡೆಯಲು ಮುಂದಾದ ಮಹಾದೇವ್, ಬಾನೆಟ್ ಮೇಲೆ ಹಾರಿ ಬಿಗಿಯಾಗಿ ಹಿಡಿದಿದ್ದರು ಎನ್ನಲಾಗಿದೆ. ಆದರೆ, ವಾಹನವನ್ನು ನಿಲ್ಲಿಸುವ ಬದಲು, ಚಾಲಕ ವೇಗವಾಗಿ ಚಲಾಯಿಸಿದ್ದಾನೆ. ಮಹಾದೇವ್ ಕಾರಿನ ಮುಂಭಾಗ ನೇತಾಡುತ್ತಿದ್ದರು.ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದ ಇತರರು ಘಟನೆಯ ದೃಶ್ಯವನ್ನು ವಿಡಿಯೊ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *