Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಂಜಾಬ್: ಕೊಳವೆಬಾವಿಗೆ ಬಿದ್ದಿದ್ದ 4 ವರ್ಷದ ಮಗು 9 ಗಂಟೆಗಳ ಕಾರ್ಯಾಚರಣೆ ಬಳಿಕ ಸೇಫ್!

Spread the love

ಹೋಶಿಯಾ‌ರ್ ಪು‌ರ್: ಪಂಜಾಬ್ ನ ಹೋಶಿಯಾರ್ ಪುರ್ ಜಿಲ್ಲೆಯಲ್ಲಿ ತನ್ನ ಮನೆಯ ಬಳಿ ಆಟವಾಡುವಾಗ ಹೊಸದಾಗಿ ತೋಡಿದ್ದ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕನನ್ನು ಒಂಬತ್ತು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ವಿವಿಧ ರಕ್ಷಣಾ ಸಂಸ್ಥೆಗಳು ಹಾಗೂ ಸ್ಥಳೀಯ ಸ್ವಯಂಸೇವಕರು ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಹೋಶಿಯಾರ್ ಪುರ್-ದಸುಯಾ ರಸ್ತೆಯಲ್ಲಿನ ಭಿಖೋವಾಲ್ ಬಳಿಯ ಚಕ್ ಸಾಮನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಗುವನ್ನು ಗುರುಕರಣ್ ಸಿಂಗ್ ಎಂದು ಗುರುತಿಸಲಾಗಿದ್ದು, ಬಾಲಕ ಕೊಳವೆ ಬಾಯಿಯೊಳಗೆ ಬಿದ್ದು ಸುಮಾರು 20ರಿಂದ 30 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಲಕನನ್ನು ರಾತ್ರಿ ಸುಮಾರು 12.40ರ ವೇಳೆಗೆ ಕೊಳವೆ ಬಾವಿಯಿಂದ ಹೊರ ತೆಗೆಯುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿದ್ದು, ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆತನನ್ನು ತಕ್ಷಣವೇ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ.
ಮಗುವನ್ನು ರಕ್ಷಿಸಿದ ಬಳಿಕ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ರಕ್ಷಣಾ ಸಿಬ್ಬಂದಿಯೊಬ್ಬರು ಆತನನ್ನು ತಮ್ಮ ತೋಳಿನಲ್ಲಿ ಹೊತ್ತು ಮೇಲೆ ಬಂದರು. ಬಾಲಕನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮಣ್ಣು ಸಡಿಲವಾಗಿದ್ದುದರಿಂದ, ಅದು ಪದೇ ಪದೇ ಉದುರಿ ಬೀಳುತ್ತಿತ್ತು. ಇದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿ ಪರಿಣಮಿಸಿತ್ತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಉಪ ಕಮಾಂಡೆಂಟ್ ಪಂಕಜ್ ಶರ್ಮ ತಿಳಿಸಿದ್ದಾರೆ. “ಇಡೀ ರಕ್ಷಣಾ ಕಾರ್ಯಾಚರಣೆಯುದ್ದಕ್ಕೂ ನಮ್ಮ ರಕ್ಷಣಾ ಸಿಬ್ಬಂದಿಗಳು ಪ್ರಶಂಸನೀಯ ಪ್ರಯತ್ನಗಳನ್ನು ಮಾಡಿದರು” ಎಂದು ಅವರು ಶ್ಲಾಘಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *