Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಯೋಧ್ಯೆಯಲ್ಲಿ ರಣಬೀರ್ ಕಪೂರ್ ಹೂಡಿಕೆ: ಸರಯೂ ನದಿ ದಡದಲ್ಲಿ ₹3.31 ಕೋಟಿಯ ಆಸ್ತಿ ಖರೀದಿ!

Spread the love

ಭವ್ಯ ರಾಮಮಂದಿರ ಉದ್ಘಾಟನೆಯ ನಂತರ ದೇಶದ ಪ್ರಮುಖ ಆಧ್ಯಾತ್ಮಿಕ ಹಾಗೂ ಆರ್ಥಿಕ ಹೂಡಿಕೆಯ ಆಯಕಟ್ಟಿನ ತಾಣವಾಗಿ ಹೊರಹೊಮ್ಮುತ್ತಿರುವ ಅಯೋಧ್ಯೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ರಣಬೀರ್ ಕಪೂರ್ ಬೃಹತ್ ಹೂಡಿಕೆ ಮಾಡಿದ್ದಾರೆ.

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ಬೆನ್ನಲ್ಲೇ, ರಣಬೀರ್ ಕಪೂರ್ ಅಯೋಧ್ಯೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪ್ರಾಪರ್ಟಿ ಖರೀದಿಸಿರುವುದು ಸಿನಿವಲಯ ಹಾಗೂ ರಿಯಲ್ ಎಸ್ಟೇಟ್ ರಂಗದಲ್ಲಿ ಜಾಗತಿಕ ಗಮನ ಸೆಳೆದಿದೆ. ಪ್ರಖ್ಯಾತ ಬ್ರ್ಯಾಂಡೆಡ್ ಜಮೀನು ಅಭಿವೃದ್ಧಿ ಸಂಸ್ಥೆಯಾದ ‘ಹೌಸ್ ಆಫ್ ಅಭಿನಂದನ್ ಲೋಧಾ’ (HoABL) ಸರಯೂ ನದಿಯ ದಡದಲ್ಲಿ ನಿರ್ಮಿಸುತ್ತಿರುವ ಅತ್ಯಂತ ಪ್ರತಿಷ್ಠಿತ ‘ದಿ ಸರಯೂ’ ಪ್ರೀಮಿಯಂ ಯೋಜನೆಯಲ್ಲಿ ರಣಬೀರ್ ಕಪೂರ್ ಅವರು 2,134 ಚದರ ಅಡಿ ವಿಸ್ತೀರ್ಣದ ಜಾಗವನ್ನು ಖರೀದಿಸಿದ್ದು, ಈ ಪ್ರಾಪರ್ಟಿ ಡೀಲ್‌ನ ಒಟ್ಟು ಮೌಲ್ಯ ಬರೋಬ್ಬರಿ ₹3.31 ಕೋಟಿ ಎಂದು ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.


Spread the love
Share:

administrator

Leave a Reply

Your email address will not be published. Required fields are marked *