ಲಕ್ಷಾಂತರ ಮತಗಳ ಅಂತರ: ಅಸ್ಸಾಂನಲ್ಲಿ ಕೇಸರಿ ಕೋಟೆ ನಡುಗಿಸಿದ ಕಾಂಗ್ರೆಸ್

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯ ಕಂಡುಬಂದಿದೆ. ಪಕ್ಷವು ಗೆದ್ದ ಒಟ್ಟು 19 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವ ಪಡೆದಿದೆ.
ಅನೇಕ ಕ್ಷೇತ್ರಗಳಲ್ಲಿ ಭಾರೀ ಮತಗಳ ಅಂತರದಿಂದ ಗೆಲುವುಗಳು ದಾಖಲಾಗಿದೆ.
ಪಾರ್ಬಟ್ಟೋರಾ ಕ್ಷೇತ್ರದಲ್ಲಿ ಎಂ.ಡಿ. ಅಶ್ರಫುಲ್ ಇಸ್ಲಾಂ ಶೇಖ್ ಅವರು 77,128 ಮತಗಳನ್ನು ಪಡೆದು 9,022 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಗೌರಿಪುರ ಕ್ಷೇತ್ರದಲ್ಲಿ ಅಬ್ದುಸ್ ಸೋಬಹಾನ್ ಅಲಿ ಸರ್ಕಾರ್ 1,82,971 ಮತಗಳನ್ನು ಪಡೆದು 1,19,097 ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದಾರೆ. ಧುಬ್ರಿ ಕ್ಷೇತ್ರದಲ್ಲಿ ಬೇಬಿ ಬೇಗಂ 1,18,362 ಮತಗಳನ್ನು ಪಡೆದು 68,661 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಬಿರ್ಸಿಂಗ್ ಜರೂಆ ಕ್ಷೇತ್ರದಲ್ಲಿ ವಾಯಿದ್ ಅಲಿ ಚೌಧುರಿ 1,13,901 ಮತಗಳನ್ನು ಪಡೆದು 35,885 ಮತಗಳ ಅಂತರದಿಂದ ಗೆದ್ದಿದ್ದಾರೆ. ಮಂಕಾಚಾರ್ ಕ್ಷೇತ್ರದಲ್ಲಿ ಮೊಹಿಬುರ್ ರೋಹನ್ (ಬ್ಯಾಪ್ಪಿ) 1,69,036 ಮತಗಳನ್ನು ಪಡೆದು 53,146 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜಲೇಶ್ವರ ಕ್ಷೇತ್ರದಲ್ಲಿ ಆಫ್ಲಾಬುದ್ದೀನ್ ಮೊಲ್ಲಾ 1,62,174 ಮತಗಳನ್ನು ಪಡೆದು 1,09,688 ಮತಗಳ ಅಂತರದಿಂದ ಗೆದ್ದಿದ್ದಾರೆ.
ಗೋಲ್ಪಾರಾ ಈಸ್ಟ್ ಕ್ಷೇತ್ರದಲ್ಲಿ ಅಬುಲ್ ಕಲಾಂ ರಶೀದ್ ಆಲಂ 1,02,205 ಮತಗಳನ್ನು ಪಡೆದು 51,261 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಶ್ರೀಜಂಗ್ರಾಮ್ ಕ್ಷೇತ್ರದಲ್ಲಿ ಎಂ.ಡಿ. ನೂರುಲ್ ಇಸ್ಲಾಂ 1,06,716 ಮತಗಳನ್ನು ಪಡೆದು 18,305 ಮತಗಳ ಅಂತರದಿಂದ ಗೆದ್ದಿದ್ದಾರೆ. ಚೇಂಗಾ ಕ್ಷೇತ್ರದಲ್ಲಿ ಅಬ್ದುರ್ ರಹೀಮ್ ಅಹ್ಮದ್ 1,39,167 ಮತಗಳನ್ನು ಪಡೆದು 87,349 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಪಕಾಬೆಟ್ಬಾರಿ ಕ್ಷೇತ್ರದಲ್ಲಿ ಜಾಕಿರ್ ಹುಸೈನ್ ಸಿಕ್ಸಾರ್ 1,57,748 ಮತಗಳನ್ನು ಪಡೆದು 65,267 ಮತಗಳ ಅಂತರದಿಂದ ಗೆದ್ದಿದ್ದಾರೆ. ಚಾಮಾರಿಯಾ ಕ್ಷೇತ್ರದಲ್ಲಿ ರೆಕಿಬುದ್ದೀನ್ ಅಹ್ಮದ್ 1,49,720 ಮತಗಳನ್ನು ಪಡೆದು 78,696 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಲಹರಿಘಾಟ್ ಕ್ಷೇತ್ರದಲ್ಲಿ ಡಾ. ಆಸಿಫ್ ಮುಹಮ್ಮದ್ ನಝರ್ 1,69,212 ಮತಗಳನ್ನು ಪಡೆದು 66,295 ಮತಗಳ ಅಂತರದಿಂದ ಗೆದ್ದಿದ್ದಾರೆ.
ರೂಪಾಹಿಹಾಟ್ ಕ್ಷೇತ್ರದಲ್ಲಿ ನುರುಲ್ ಹುದಾ 1,35,682 ಮತಗಳನ್ನು ಪಡೆದು 69,766 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸಮಾಗುರಿ ಕ್ಷೇತ್ರದಲ್ಲಿ ತಂಝೀಲ್ ಹುಸೇನ್ 1,45,212 ಮತಗಳನ್ನು ಪಡೆದು 1,08,310 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸೋನೈ ಕ್ಷೇತ್ರದಲ್ಲಿ ಅಮೀನುಲ್ ಹಕ್ ಲಸ್ಕರ್ 89,957 ಮತಗಳನ್ನು ಪಡೆದು 27,170 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಲ್ಲಾಪುರ-ಕಟ್ಲಿಚೆರ್ರಾ ಕ್ಷೇತ್ರದಲ್ಲಿ ಝುಬೈರ್ ಅನಾಮ್ ಮಝುಂದಾರ್ 1,45,661 ಮತಗಳನ್ನು ಪಡೆದು 1,05,448 ಮತಗಳ ಅಂತರದಿಂದ ಗೆದ್ದಿದ್ದಾರೆ. ಕರೀಮ್ ಗಂಜ್ ಉತ್ತರ ಕ್ಷೇತ್ರದಲ್ಲಿ ಜಕಾರಿಯಾ ಅಹ್ಮದ್ 1,22,356 ಮತಗಳನ್ನು ಪಡೆದು 26,003 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕರೀಮ್ ಗಂಜ್ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮೀನುರ್ ರಶೀದ್ ಚೌಧುರಿ 137257 ಮತಗಳನ್ನು ಪಡೆದಿದ್ದು 86632 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ನೌಬೋಚಾ ಕ್ಷೇತ್ರದಲ್ಲಿ ಡಾ. ಜಾಯ್ ಪ್ರಕಾಶ್ ದಾಸ್ 86,981 ಮತಗಳನ್ನು ಪಡೆದು 23,751 ಮತಗಳ ಅಂತರದಿಂದ ಗೆದ್ದಿದ್ದಾರೆ. ಜಾಯ್ ಪ್ರಕಾಶ್ ದಾಸ್ ಅವರು ಈ ಬಾರಿ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಏಕೈಕ ಮುಸ್ಲಿಮೇತರ ಶಾಸಕ.
ಈ ಫಲಿತಾಂಶಗಳು ಅಸ್ಸಾಂನಲ್ಲಿ ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ಪ್ರಭಾವವನ್ನು ದೃಢಪಡಿಸಿರುವುದಾಗಿ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮುಸ್ಲಿಂ ಮತದಾರರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ನಿರ್ಣಾಯಕವಾಗಿ ಪರಿಣಮಿಸಿದ್ದು, ಅನೇಕ ಕ್ಷೇತ್ರಗಳಲ್ಲಿ ಭಾರೀ ಮತಗಳ ಅಂತರದಿಂದ ಗೆಲುವಿಗೆ ಕಾರಣವಾಗಿದೆ.